ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ ಗೌತಮ್ ಅವರಿಗೆ ಕಪಾಳಕ್ಕೆ ಬಾರಿಸಿ ಸತ್ಯ ಬಾಯ್ಬಿಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಸ.08]: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಸಿ.ಎಂ ಗೌತಮ್, ಸ್ವತಃ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಎದುರೇ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
undefined
KPL ಮ್ಯಾಚ್ ಫಿಕ್ಸಿಂಗ್: RCB ಮಾಜಿ ಕ್ರಿಕೆಟಿಗ ಸೇರಿ ಇಬ್ಬರು ಸ್ಟಾರ್ ಆಟಗಾರರು ಅರೆಸ್ಟ್..!
ಫಿಕ್ಸಿಂಗ್ ಪ್ರಕರಣ ದ ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿ ಪಾರಾಗಲು ಯತ್ನಿಸಿದ್ದ ಗೌತಮ್ ಕಪಾಳಕ್ಕೆ ಬಿಗಿದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸತ್ಯ ಕಕ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಗೌತಮ್ ಹಾಗೂ ಖಾಜಿ ಅವರನ್ನು ಖುದ್ದು ಜಂಟಿ ಆಯುಕ್ತರು ಬುಧವಾರ ತಮ್ಮ ಕಚೇರಿಯಲ್ಲಿ ಎರಡು ತಾಸು ವಿಚಾರಣೆಗೊಳಪಡಿಸಿದರು. ಮೊದ ಮೊದಲು ಗೌತಮ್, ‘ನನಗೇನೂ ಗೊತ್ತಿಲ್ಲ ಸರ್ ನಾನು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದೇನೆ’ ಎನ್ನುತ್ತ ಅಮಾಯಕನಂತೆ ನಾಟಕವಾಡಿದ್ದಾನೆ. ಆಗ ಸಂದೀಪ್ ಪಾಟೀಲ್ ಅವರು ಏರಿದ ಧ್ವನಿಯಲ್ಲಿ ಗೌತಮ್’ಗೆ ಜೇಬಿನಲ್ಲೇನೋ ಕೀ ಇಟ್ಟುಕೊಂಡಿರೋದು ಎಂದು ಪ್ರಶ್ನಿಸಿದ್ದಾರೆ. ಆತ ಜೇಬಿನಿಂದ ಕಾರಿನ ಕೀ ತೆಗೆದು ಟೇಬಲ್ ಮೇಲಿಟ್ಟಿದ್ದಾನೆ.
KPL Fixing: 20 ಲಕ್ಷಕ್ಕೆ ತಮ್ಮನ್ನು ಮಾರಿಕೊಂಡಿದ್ದರಾ ಈ ಕ್ರಿಕೆಟಿಗರು..?
ಜಂಟಿ ಆಯುಕ್ತರು ಯಾವ ಕಾರು ಎಂದು ಪ್ರಶ್ನಿಸಿದಾಗ ಜಾಗ್ವಾರ್ ಎಂದಿದ್ದಾನೆ. ಈ ಮಾತು ಕೇಳಿ ಸಿಟ್ಟುಗೊಂಡ ಸಂದೀಪ್ ಪಾಟೀಲ್ ಅವರು ಗೌತಮ್ ಕಪಾಳಕ್ಕೆ ಬಿಗಿದಿದ್ದಾರೆ. ಸಾಲ ಮಾಡಿಕೊಂಡಿದ್ದೇನೆ, ನನ್ನ ಬಳಿ ಹಣವಿಲ್ಲ ಎನ್ನುತ್ತೀಯಾ. ಇಷ್ಟು ದುಬಾರಿ ಕಾರು ಹೇಗೆ ಬಂತು ಎಂದು ದಬಾಯಿಸುತ್ತಿದ್ದಂತೆ ಫಿಕ್ಸಿಂಗ್ ಪುರಾಣ ಬಿಚ್ಚಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.
ಸಿಸಿಬಿ ಗಾಳಕ್ಕೆ ಸಿಕ್ಕಿದ್ದು ಹೇಗೆ..?
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಸಂಬಂಧ ಸಿಸಿಬಿ, ಮೊದಲು ಬೆಳಗಾವಿ ತಂಡದ ಮಾಲಿಕ ಅಶ್ಫಾಕ್ ಅಲಿಯನ್ನು ಬಂಧಿಸಿತ್ತು. ಆತನನ್ನು ಸುದೀರ್ಘಾವಧಿಗೆ ವಿಚಾರಣೆ ನಡೆಸಿದಾಗ ಅಲಿ ಸಂಪರ್ಕದಲ್ಲಿ ಬೆಳಗಾವಿ ತಂಡ ಮಾತ್ರವಲ್ಲದೆ ಇತರೆ ತಂಡದ ಆಟಗಾರರೂ ಇರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ಅಲಿ ಜಾಲವನ್ನು ಮತ್ತಷ್ಟು ಶೋಧಿಸಿದಾಗ ಒಬ್ಬೊಬರ ಆಟಗಾರರ ನಿಜ ಬಣ್ಣ ಬಯಲಾಗುತ್ತ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಕೆಪಿಎಲ್ ಟೂರ್ನಿಯಲ್ಲಿ ಅಲಿ ಸಂಪರ್ಕದಲ್ಲಿದ್ದ ಆಟಗಾರರು ಆಡಿರುವ ಪಂದ್ಯಾವಳಿಯ ಸಂಪೂರ್ಣ ವಿಡಿಯೋ, ಮೊಬೈಲ್ ಕರೆಗಳು ಹಾಗೂ ಆಟಗಾರರು ತಂಗಿ ದ ಹೋಟೆಲ್ ಹಾಗೂ ಕ್ರೀಡಾಂಗಣದ ಸಿಸಿಟಿವಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಫಿಕ್ಸಿಂಗ್’ಗೆ ಪುರಾವೆ ಲಭಿಸಿವೆ. ಅದೇ ರೀತಿ ಕೆಪಿಎಲ್ ಪಂದ್ಯಾವಳಿಯಲ್ಲಿ ಅಲಿ ಜತೆ ಗೌತಮ್ ಹಾಗೂ ಖಾಜಿ ನಿರಂತರ ಸಂಪರ್ಕದಲ್ಲಿದ್ದರು. ಇದಕ್ಕೆ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ದಾಗ ಸಾಕ್ಷ್ಯ ಸಿಕ್ಕಿತು ಎಂ ದು ಮೂಲಗಳು ಹೇಳಿವೆ.