
ಅಡಿಲೇಡ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 2ನೇ ಟೆಸ್ಟ್(ಹಗಲು-ರಾತ್ರಿ ಟೆಸ್ಟ್) ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಅಡಿಲೇಡ್ ಕ್ರೀಡಾಂಗಣದ ಪಿಚ್ ವೇಗದ ಬೌಲರ್‌ಗಳ ಜೊತೆ ಸ್ಪಿನ್ನರ್‌ಗಳಿಗೂ ನೆರವು ನೀಡುವ ನಿರೀಕ್ಷೆಯಿದೆ. ಹೀಗಾಗಿ ಭಾರತ ತಂಡದಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಪಿಚ್ ಸಿದ್ಧಪಡಿಸಿರುವ ಕ್ಯುರೇಟರ್ ಡಾಮಿಯನ್ ಹಾಗ್ ಈ ಬಗ್ಗೆ ಮಾತನಾಡಿದ್ದು, ಪಿಚ್ ಸ್ಪಿನ್ನರ್‌ಗಳಿಗೂ ನೆರವು ನೀಡಬಹುದು ಎಂದಿದ್ದಾರೆ. ಅಲ್ಲದೆ, ತಜ್ಞ ಸ್ಪಿನ್ನರ್ ಅನ್ನು ಆಡಿಸುವಂತೆ ತಂಡಗಳಿಗೆ ಸಲಹೆ ನೀಡಿದ್ದಾರೆ. ‘ಅಡಿಲೇಡ್ ಪಿಚ್‌ನಲ್ಲಿ ವೇಗಿಗಳೇ ನಿರ್ಣಾಯಕರಾಗಬಹುದು. ಆದರೆ ರಾತ್ರಿ ವೇಳೆ ಸ್ಪಿನ್ನರ್‌ಗಳೂ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಇಲ್ಲಿ ಸ್ಪಿನ್ನರ್‌ಗಳು ನೆರವು ಪಡೆದಿರುವ ಇತಿಹಾಸವಿದೆ. ಹೀಗಾಗಿ ತಜ್ಞ ಸ್ಪಿನ್ನರ್‌ಗಳನ್ನು ಆಡಿಸುವುದು ಸೂಕ್ತ’ ಎಂದು ಹೇಳಿದ್ದಾರೆ. ಈ ಪಂದ್ಯವನ್ನು ಪಿಂಕ್ ಬಾಲ್‌ನಲ್ಲಿ ಆಡಿಸಲಾಗುತ್ತದೆ. ಪಂದ್ಯ ಡಿ.6ಕ್ಕೆ ಆರಂಭಗೊಳ್ಳಲಿದೆ.
ಅಡಿಲೇಡ್ ಟೆಸ್ಟ್‌ಗೂ ಮುನ್ನ ಭಾರತದ ಅಭ್ಯಾಸ ವೇಳೆ ಅಭಿಮಾನಿಗಳ ಹುಚ್ಚಾಟ!
ಅಡಿಲೇಡ್ ಟೆಸ್ಟ್‌ಗೆ ವಾಷಿಂಗ್ಟನ್ ಸುಂದರ್ ಬದಲು ರವಿಚಂದ್ರನ್ ಅಶ್ವಿನ್?
ಆರಂಭಿಕ ಪಂದ್ಯದಲ್ಲಿ ಭಾರತ ಏಕೈಕ ಸ್ಪಿನ್ನರ್ ಜೊತೆ ಆಡಿತ್ತು. ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಸಿಕ್ಕಿತ್ತು. ಆದರೆ ಅಡಿಲೇಡ್ ಕ್ರೀಡಾಂಗಣದಲ್ಲಿ ಮತ್ತು ಆಸ್ಟ್ರೇಲಿಯಾದ ಎಡಗೈ ಬ್ಯಾಟರ್‌ಗಳ ವಿರುದ್ಧ ದಾಖಲೆ ಹೊಂದಿರುವ ಕಾರಣ 2ನೇ ಪಂದ್ಯದಲ್ಲಿ ಅನುಭವಿ ಆರ್.ಅಶ್ವಿನ್‌ರನ್ನು ಆಡಿಸಲು ಟೀಂ ಇಂಡಿಯಾ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಮತ್ತೆರಡು ಮಹತ್ವದ ಬದಲಾವಣೆ:
ಅಡಿಲೇಡ್ ಟೆಸ್ಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೆರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೈಯುಕ್ತಿಕ ಕಾರಣದಿಂದಾಗಿ ಹೊರಗುಳಿದಿದ್ದರು. ಇನ್ನು ಅಗ್ರಕ್ರಮಾಂಕದ ಬ್ಯಾಟರ್ ಶುಭ್‌ಮನ್ ಗಿಲ್ ಕೂಡಾ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಇದೀಗ ಈ ಇಬ್ಬರು ಆಟಗಾರರು ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಬ್ಯಾಟರ್‌ಗಳು ತಂಡ ಕೂಡಿಕೊಳ್ಳಲಿದ್ದು, ದೇವದತ್ ಪಡಿಕ್ಕಲ್ ಹಾಗೂ ಧೃವ್ ಜುರೆಲ್ ತಂಡದಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.