6,6,6,6,6 ಪಾಕ್‌ ಬೌಲರ್ ಅಬ್ರಾರ್‌ ಚೆಂಡಾಡಿದ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ತಂಡದ ವಿಸ್ಪೋಟಕ ಬ್ಯಾಟರ್! ವಿಡಿಯೋ ವೈರಲ್

Published : Jul 22, 2026, 04:35 PM IST
Nicholas Pooran

ಸಾರಾಂಶ

2026ರ ದಿ ಹಂಡ್ರೆಡ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ, ಎಂಐ ಲಂಡನ್ ತಂಡವು ಸನ್‌ರೈಸರ್ಸ್ ಲೀಡ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ನಿಕೋಲಸ್ ಪೂರನ್ ಅವರ ಸ್ಫೋಟಕ ಅರ್ಧಶತಕ (58*) ಮತ್ತು ನಾಯಕ ಸ್ಯಾಮ್ ಕರ್ರನ್ ಅವರ 60 ರನ್‌ಗಳ ನೆರವಿನಿಂದ ಎಂಐ ಲಂಡನ್ ಸುಲಭವಾಗಿ ಗುರಿ ತಲುಪಿತು. ಈ ಮೂಲಕ ನೀತಾ ಅಂಬಾನಿ ಮಾಲೀಕತ್ವದ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಲಂಡನ್: ಹಾಲಿ ಚಾಂಪಿಯನ್ ಹಾಗೂ ಹೊಸದಾಗಿ ರೀ-ಬ್ರ್ಯಾಂಡೆಡ್‌ ಆಗಿ ಕಣಕ್ಕಿಳಿದಿರುವ ಎಂಐ ಲಂಡನ್ ತಂಡವು 2026ನೇ ಸಾಲಿನ ದಿ ಹಂಡ್ರೆಡ್ ಟೂರ್ನಿಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ನೀತಾ ಅಂಬಾನಿ ಮಾಲೀಕತ್ವದ ಎಂಐ ಲಂಡನ್ ತಂಡವು ಇಲ್ಲಿನ ಕೆನ್ನಿಂಗ್‌ಟನ್ ಓವಲ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕಾವ್ಯ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್‌ ತಂಡವನ್ನು ಏಳು ವಿಕೆಟ್‌ಗಳ ಅಂತರದಲ್ಲಿ ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಓವಲ್‌ ಇನ್‌ವಿನ್ಸಿಬಲ್ ಎಂದು ಗುರುತಿಸಿಕೊಂಡಿದ್ದ ತಂಡವನ್ನು ನೀತಾ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್ ಈ ಸೀಸನ್ ದಿ ಹಂಡ್ರೆಡ್ ಟೂರ್ನಿಗೂ ಮುನ್ನ ಖರೀದಿಸಿತ್ತು. ಈ ತಂಡಕ್ಕೆ ಎಂಐ ಲಂಡನ್ ಎಂದು ಹೆಸರಿಟ್ಟಿತ್ತು.

6,6,6,6,6 ಐದು ಮುಗಿಲೆತ್ತರದ ಸಿಕ್ಸರ್ ಚಚ್ಚಿದ ಪೂರನ್:

ಎಂಐ ಲಂಡನ್ ತಂಡದ ಪರ ವೆಸ್ಟ್‌ ಇಂಡೀಸ್ ಮೂಲದ ವಿಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಚಚ್ಚುವ ಮೂಲಕ ಕಾವ್ಯ ಮಾರನ್ ಪಡೆ ಕಂಗಾಲಾಗುವಂತೆ ಮಾಡಿದರು. ಸನ್‌ರೈಸರ್ಸ್‌ ಲೀಡ್ಸ್‌ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ನಿಕೋಲಸ್ ಪೂರನ್ ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಎರಡು ಬೌಂಡರಿ ಸಹಿತ ಅಜೇಯ 58 ರನ್ ಬಾರಿಸಿದರು. ಇನ್ನು ಎಂಐ ಲಂಡನ್ ತಂಡದ ನಾಯಕ ಹಾಗೂ ಇಂಗ್ಲೆಂಡ್ ಮೂಲದ ಆಲ್ರೌಂಡರ್ ಸ್ಯಾಮ್ ಕರ್ರನ್ ಕೇವಲ 39 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 60 ರನ್ ಸಿಡಿಸಿದರು. ಸನ್‌ರೈಸರ್ಸ್‌ ಲೀಡ್ಸ್‌ ನೀಡಿದ್ದ ಗುರಿಯನ್ನು ಎಂಐ ಲಂಡನ್ ತಂಡವು ಇನ್ನೂ 16 ಎಸೆತ ಬಾಕಿ ಇರುವಂತೆಯೇ 84 ಎಸೆತಗಳಲ್ಲಿ ಗೆಲುವಿನ ನಗೆ ಬೀರಿತು.

ಪಾಕ್ ಬೌಲರ್ ಅಬ್ರಾರ್ ಚೆಂಡಾಡಿದ ನಿಕೋಲಸ್ ಪೂರನ್:

ಇನ್ನು ಸನ್‌ರೈಸರ್ಸ್ ಲೀಡ್ಸ್‌ ತಂಡದಲ್ಲಿದ್ದ ಪಾಕಿಸ್ತಾನ ಮೂಲದ ಸ್ಪಿನ್ನರ್‌ ಅಬ್ರಾರ್ ಅಹಮದ್ ಅವರಿಗೆ ನಿಕೋಲಸ್ ಪೂರನ್ ಮನಬಂದಂತೆ ದಂಡಿಸಿದರು. ಪೂರನ್‌ ಪಾಕ್ ಸ್ಪಿನ್ನರ್ ಎದುರು ಕೇವಲ 10 ಎಸೆತಗಳಲ್ಲಿ 30 ರನ್ ಚಚ್ಚಿದರು. ಅಂದಹಾಗೆ ಎಂಐ ಜೆರ್ಸಿಯಲ್ಲಿ ನಿಕೋಲಸ್ ಪೂರನ್ ಬಾರಿಸಿದ ಮೂರನೇ 50+ ಸ್ಕೋರ್ ಇದಾಗಿದೆ. ಇದಕ್ಕೂ ಮೊದಲು 2026ರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನಿಕೋಲಸ್ ಪೂರನ್ ಎಂಐ ನ್ಯೂಯಾರ್ಕ್ ತಂಡದ ಪರ ಪರ 44 ಎಸೆತಗಳಲ್ಲಿ 86 ಹಾಗೂ 33 ಎಸೆತಗಳಲ್ಲಿ 106 ರನ್ ಸಿಡಿಸಿದ್ದರು. ಇನ್ನು ದಿ ಹಂಡ್ರೆಡ್ ಟೂರ್ನಿಯಲ್ಲಿ ಎಂಐ ಲಂಡನ್ ತಂಡವು ಬರೋಬ್ಬರಿ 2.25 ಕೋಟಿ ರುಪಾಯಿ ನೀಡಿ ನಿಕೋಲಸ್ ಪೂರನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

ಹೀಗಿತ್ತು ನೋಡಿ ಪೂರನ್ ವಿಸ್ಪೋಟಕ ಬ್ಯಾಟಿಂಗ್

 

ಐಪಿಎಲ್ ಟೂರ್ನಿಯಲ್ಲಿ ಪಾಕೆಡ್ ಡೈನಮೊ ಖ್ಯಾತಿಯ ನಿಕೋಲಸ್ ಪೂರನ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 21 ಕೋಟಿ ರುಪಾಯಿಗೆ ರೀಟೈನ್ ಮಾಡಿಕೊಂಡಿದೆ. ಆದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿಕೋಲಸ್ ಪೂರನ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಇನ್ನು ದಿ ಹಂಡ್ರೆಡ್ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಬಳಿಕ ಮಾತನಾಡಿದ ಪೂರನ್, 'ಒಳ್ಳೆಯ ಸ್ಕೋರ್ ಬಾರಿಸಿದಾಗ ಸಹಜವಾಗಿಯೇ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಇದಕ್ಕಿಂತ ಹೆಚ್ಚಾಗಿ ತಂಡದ ಗೆಲುವೇ ಮುಖ್ಯವಾಗುತ್ತದೆ. ತವರಿನ ಅಭಿಮಾನಿಗಳ ಎದುರು ನಾವು ಶುಭಾರಂಭ ಮಾಡಿದ್ದು ಖುಷಿಕೊಟ್ಟಿದೆ' ಎಂದು ಹೇಳಿದ್ದಾರೆ.

ನಿಕೋಲಸ್ ಪೂರನ್ ಅಬ್ಬರಕ್ಕೂ ಮೊದಲು ನಿಗದಿತ 100 ಎಸೆತಗಳ ಪಂದ್ಯದಲ್ಲಿ ಕಾವ್ಯ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್‌ ತಂಡವು 143 ರನ್ ಗಳಿಸಿ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್‌ ಸನ್‌ರೈಸರ್ಸ್‌ ಲೀಡ್ಸ್‌ ಪರ 27 ಎಸೆತಗಳಲ್ಲಿ 41 ರನ್ ಸಿಡಿಸಿದರು. ಇನ್ನು ಎಂಐ ಲಂಡನ್ ಪರ ರಿಚರ್ಡ್ ಗ್ಲೀಷನ್ 25 ರನ್ ನೀಡಿ 4 ವಿಕೆಟ್ ಪಡೆದರೆ, ನಾಯಕ ಸ್ಯಾಮ್ ಕರ್ರನ್ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs ZIM T20: ಐರ್ಲೆಂಡ್, ಇಂಗ್ಲೆಂಡ್ ಎದುರು ಸೋತು ಬಂದಿರುವ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಜಿಂಬಾಬ್ವೆ ಕ್ಯಾಪ್ಟನ್ ಸಿಕಂದರ್ ರಾಜಾ!
ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಇನ್ನೆಷ್ಟು ಸಮಯ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಇರ್ತಾರೆ?