ಕೇವಲ 6 ರನ್‌ಗೆ ಇಡೀ ಟೀಮ್‌ ಆಲೌಟ್..! ಸೊನ್ನೆ ಸುತ್ತಿದ 7 ಬ್ಯಾಟರ್‌, ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಯ್ತು ಕೆಟ್ಟ ದಾಖಲೆ..!

By Naveen KodaseFirst Published Sep 5, 2024, 4:13 PM IST
Highlights

ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ರೆಕಾರ್ಡ್ ಎನ್ನಬಹುದು. ಇಂಗ್ಲೆಂಡ್ ಎದುರು ಈ ತಂಡ ಕೇವಲ 6 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಕ್ರಿಕೆಟ್‌ನಲ್ಲಿ ಕೆಲವೊಂದು ಮ್ಯಾಚ್‌ಗಳು ಬೇರೆ ಬೇರೆ  ಕಾರಣಗಳಿಗೆ ಸಾಕಷ್ಟು ವರ್ಷಗಳ ಕಾಲ ನೆನಪಿನಲ್ಲಿ ಉಳಿದುಬಿಡುತ್ತವೆ. ಅದೇ ರೀತಿ ಕೆಲವು ಕೆಟ್ಟ ರೆಕಾರ್ಡ್‌ಗಳು ಸಾಕಷ್ಟು ಸಮಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿಯಲಿದೆ. ನಾವಿಂದು ಅಂತಹದ್ದೇ ಒಂದು ಕ್ರಿಕೆಟ್ ರೆಕಾರ್ಡ್ ಮೆಲುಕು ಹಾಕೋಣ ಬನ್ನಿ. ಅಂದಹಾಗೆ ಇದು ಇಂಗ್ಲೆಂಡ್ ಡೊಮೆಸ್ಟಿಕ್‌ ಕ್ರಿಕೆಟ್‌ನಲ್ಲಿ ದಾಖಲಾದ ರೆಕಾರ್ಡ್. ಆ ರೆಕಾರ್ಡ್‌ ಇಂದಿಗೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.

ಕೇವಲ 6 ರನ್‌ಗೆ ಇಡೀ ತಂಡ ಆಲೌಟ್:

Latest Videos

1810ರಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ದಿ ಬಿಎಸ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ದಿ ಬಿಎಸ್‌ ತಂಡವು ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿ ಕೇವಲ ಒಂದಂಕಿ ಮೊತ್ತಕ್ಕೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ದಿ ಬಿಎಸ್‌ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 6 ರನ್‌ಗಳಿಗೆ ಸರ್ವಪತನ ಕಂಡಿತು. ಈ ಪೈಕಿ ದಿ ಬಿಎಸ್‌ ತಂಡದ 7 ಬ್ಯಾಟರ್‌ಗಳು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ದಿ ಬಿಎಸ್‌ ತಂಡದ ಪರ ಜಾನ್ ವೆಲ್ಸ್‌ 4 ರನ್ ಗಳಿಸಿದ್ದೇ, ಎರಡನೇ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನುಳಿದಂತೆ ದಿ ಬಿಎಸ್‌ ತಂಡದ ಇಬ್ಬರು ಬ್ಯಾಟರ್‌ಗಳು ತಲಾ ಒಂದೊಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನಿಂಗ್ಸ್‌ವೊಂದರಲ್ಲಿ ಕೇವಲ 6 ರನ್‌ಗಳಿಗೆ ಆಲೌಟ್ ಆಗಿದ್ದು, ಡೊಮೆಸ್ಟಿಕ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಕನಿಷ್ಠ ಮೊತ್ತ ಎನಿಸಿಕೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಈ ರೆಕಾರ್ಡ್‌ ಬ್ರೇಕ್ ಆಗಿಲ್ಲ.

Breaking: ಅಯ್ಯೋ ದೇವರೇ.. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಈ ಕ್ರಿಕೆಟಿಗ, ಐಸಿಯುಗೆ ದಾಖಲು..!

ಇನ್ನು ಇದಕ್ಕೂ ಮೊದಲು ದಿ ಬಿಎಸ್ ತಂಡವು ಮೊದಲ ಇನಿಂಗ್ಸ್‌ನಲ್ಲೂ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಿರಲಿಲ್ಲ. ಇಂಗ್ಲೆಂಡ್ ದಿಟ್ಟ ಬೌಲಿಂಗ್ ದಾಳಿಗೆ ಕಂಗಾಲಾದ ದಿ ಬಿಎಸ್‌ ತಂಡವು ಮೊದಲ ಇನಿಂಗ್ಸ್‌ನಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ ದಿ ಬಿಎಸ್‌ ತಂಡದ ಪರ ಲಾರ್ಡ್ 41 ರನ್ ಗಳಿಸುವ ಮೂಲಕ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. 

ಇನ್ನು ದಿ ಬಿಎಸ್ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿ, ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡ ಕೂಡಾ ಮೂರಂಕಿ ಮೊತ್ತ ಕಲೆಹಾಕಲು ತಿಣುಕಾಡಿತು. ಇಂಗ್ಲೆಂಡ್‌ನ 7 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಕೇವಲ 100 ರನ್‌ಗಳಿಗೆ ಸರ್ವಪತನ ಕಂಡಿತು. ಇದರ ಹೊರತಾಗಿಯೂ ಎರಡನೇ ಇನಿಂಗ್ಸ್‌ನಲ್ಲಿ ಮಾರಕ ದಾಳಿ ಸಂಘಟಿಸಿದ ಇಂಗ್ಲೆಂಡ್ ತಂಡವು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
 

click me!