ಅದ್ಭುತ ದಾಖಲೆಯಿದ್ರು, ಸಂಜು ಸ್ಯಾಮ್ಸನ್‌ಗೆ ಅನ್ಯಾಯ..! ಯಾಕೆ ಹೀಗೆ?

By Naveen KodaseFirst Published Aug 25, 2023, 2:47 PM IST
Highlights

ಕೇರಳದ ಬ್ಯಾಟರ್‌ಗೆ ಎಲ್ಲಾ ಇದ್ರೂ ಲಕ್​ ಅನ್ನೋದೆ ಇಲ್ಲ. ಸಂಜು ಸ್ಯಾಮ್ಸನ್‌ಗೆ ಪದೇ ಪದೇ ಅನ್ಯಾಯ ಆಗ್ತಿದೆ. ಏಷ್ಯಾಕಪ್​ ಟೂರ್ನಿಗೆ ಆಯ್ಕೆ ಮಾಡಲಾದ ಟೀಂ ಇಂಡಿಯಾದಲ್ಲಿ ರಾಜಸ್ಥಾನ ರಾಯಲ್ಸ್‌ ಕ್ಯಾಪ್ಟನ್‌ಗೆ ಸ್ಥಾನ ನೀಡದೇ ಅನ್ಯಾಯವೆಸಗಲಾಗಿದೆ.

ಬೆಂಗಳೂರು(ಆ.25): ಸದ್ಯ ಟೀಂ ಇಂಡಿಯಾದಲ್ಲಿ ಅಷ್ಟು ಸುಲಭವಾಗಿ ಸ್ಥಾನ ಸಿಗೋದಿಲ್ಲ. ಒಂದೊಂದು ಸ್ಥಾನಕ್ಕೂ ಸಿಕ್ಕಾಪಟ್ಟೆ ಕಾಂಪಿಟೇಷನ್ ಏರ್ಪಟ್ಟಿದೆ. ಟೀಮಲ್ಲಿ ಸ್ಥಾನ ಸಿಕ್ಕರೂ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​​,  ಕಷ್ಟ. ಆದ್ರೆ, ಕೆಲ ಆಟಗಾರರು ಸಿಕ್ಕ ಅವಕಾಶದಲ್ಲಿ ಮಿಂಚಿದ್ರು, ಕಡೆಗಣಿಸಲಾಗ್ತಿದೆ. ಅದ್ಭುತ ಆಟ, ದಾಖಲೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸಂಜು ಸ್ಯಾಮ್ಸನ್ ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ. 

ಯೆಸ್, ಈ ಕೇರಳದ ಬ್ಯಾಟರ್‌ಗೆ ಎಲ್ಲಾ ಇದ್ರೂ ಲಕ್​ ಅನ್ನೋದೆ ಇಲ್ಲ. ಸಂಜು ಸ್ಯಾಮ್ಸನ್‌ಗೆ ಪದೇ ಪದೇ ಅನ್ಯಾಯ ಆಗ್ತಿದೆ. ಏಷ್ಯಾಕಪ್​ ಟೂರ್ನಿಗೆ ಆಯ್ಕೆ ಮಾಡಲಾದ ಟೀಂ ಇಂಡಿಯಾದಲ್ಲಿ ರಾಜಸ್ಥಾನ ರಾಯಲ್ಸ್‌ ಕ್ಯಾಪ್ಟನ್‌ಗೆ ಸ್ಥಾನ ನೀಡದೇ ಅನ್ಯಾಯವೆಸಗಲಾಗಿದೆ. ಇದರಿಂದ ಏಕದಿನ ವಿಶ್ವಕಪ್ ಟೂರ್ನಿ ಆಡಬೇ ಕನ್ನೋ ಸಂಜು ಕನಸು ನುಚ್ಚುನೂರಾಗಿದೆ. ಯಾಕಂದ್ರೆ, ಏಷ್ಯಾಕಪ್ ಆಡುವ ತಂಡವೇ ಬಹುತೇಕ ವಿಶ್ವಕಪ್ ಆಡಲಿದೆ. 

ಏಷ್ಯಾಕಪ್‌ ಟೂರ್ನಿಗೆ ಶಾರ್ದೂಲ್‌ಗಿಂತ ಈ ಆಟಗಾರ ಒಳ್ಳೆಯ ಆಯ್ಕೆಯಾಗುತ್ತಿದ್ದ: ಗೌತಮ್ ಗಂಭೀರ್

ಯೆಸ್, ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್‌ ಫ್ಲಾಪ್ ಸ್ಟಾರ್, ಅದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, ಒನ್​ಡೇ ಕ್ರಿಕೆಟ್​ನಲ್ಲಿ ಸಂಜು ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೂಪರ್ ಟ್ರ್ಯಾಕ್​ ರೆಕಾರ್ಡ್​ ಅವರ ಬೆನ್ನಿಗಿದೆ. ಮಿಡಲ್ ಆರ್ಡರ್ ಬ್ಯಾಟ್ಸ್​ಮನ್ ಆಗಿ ಸಂಜು ಮಿಂಚಿದ್ದಾರೆ. ಈವರೆಗು 13 ಏಕದಿನ ಪಂದ್ಯಗಳನ್ನಾಡಿರೋ ಸಂಜು, 12 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದ್ರಲ್ಲಿ, 55.71ರ ಸರಾಸರಿಯಲ್ಲಿ 390 ರನ್‌ ಗಳಿಸಿದ್ದಾರೆ. 

2021ರಿಂದ ಅತಿಹೆಚ್ಚು ಸರಾಸರಿ ಹೊಂದಿರೋ 2ನೇ ಬ್ಯಾಟರ್..!

ಯೆಸ್, 2021ರಿಂದ ಸಂಜು ಈವರೆಗು ಏಕದಿನ ಕ್ರಿಕೆಟ್​​ನಲ್ಲಿ ಅತಿಹೆಚ್ಚು ಸರಾಸರಿ ಹೊಂದಿರೋ ಎರಡನೇ ಬ್ಯಾಟ್ಸ್​​ಮನ್ ಎನಿಸಿದ್ದಾರೆ. ಎರಡು ವರ್ಷದಲ್ಲಿ 12 ಪಂದ್ಯಗಳನ್ನಾಡಿರೋ ಸಂಜು 55.7ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಕೆ.ಎಲ್ ರಾಹುಲ್, ಶ್ರೇಯಸ್ ಅ್ಯಯರ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗಿಂತ ಮುಂದಿದ್ದಾರೆ. ಇಷ್ಟೆಲ್ಲಾ ಇದ್ರು, ಏಷ್ಯಾಕಪ್ ತಂಡದಿಂದ ಸಂಜುರನ್ನ ಕೈಬಿಡಲಾಗಿದೆ. ಆ ಮೂಲಕ ಮತ್ತೊಮ್ಮೆ ಈ ಟ್ಯಾಲೆಂಟೆಡ್ ಬ್ಯಾಟ್ಸ್​​ಮನ್​ಗೆ ಅನ್ಯಾಯ ಮಾಡಲಾಗಿದೆ. ಯಾಕೆ ಹೀಗೆ ಎನ್ನುವ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಮಾತ್ರ ಸಿಕ್ಕಿಲ್ಲ ಅನ್ನೋದು ವಿಪರ್ಯಾಸವೇ ಸರಿ.

ಶ್ರೇಯಸ್ ಅಯ್ಯರ್ ಏಷ್ಯಾಕಪ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ..?

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 2ರಂದು ಪಾಕ್‌ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ. ಸಂಜು ಸ್ಯಾಮ್ಸನ್(ಮೀಸಲು ಆಟಗಾರ)

click me!