INDvNZ: ಟಾಸ್ ಗೆದ್ದ ಭಾರತ ಫೀಲ್ಡಿಂಗ್; ತಂಡದಲ್ಲಿ 2 ಬದಲಾವಣೆ!

By Suvarna NewsFirst Published Feb 8, 2020, 7:15 AM IST
Highlights

ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಮೊದಲ ಪಂದ್ಯ ಸೋತಿರುವ ಭಾರತ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮಹತ್ವದ ಪಂದ್ಯದ ಟಾಸ್ ಪ್ರಕ್ರಿಯೆ ವಿವರ ಇಲ್ಲಿದೆ. 

ಆಕ್ಲೆಂಡ್(ಫೆ.08): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ  2ನೇ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ.

ಕ್ರಿಕೆಟ್‌ನಿಂದ ದೂರ ದೂರ, ಪಾನಿಪೂರಿ ಮಾಡಿ ಸರ್ಪ್ರೈಸ್ ನೀಡಿದ ಧೋನಿ!.

ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಶಮಿ ಬದಲು ನವದೀಪ್ ಸೈನಿ ತಂಡ ಸೇರಿಕೊಂಡಿದ್ದಾರೆ. ಇತ್ತ ಕುಲ್ದೀಪ್ ಯಾದವ್ ಬದಲು ಯಜುವೇಂದ್ರ ಚಹಾಲ್ ತಂಡ ಸೇರಿಕೊಂಡಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಮಾರ್ಕ್ ಚಾಂಪನ್ ಹಾಗೂ ಕೈಲ್ ಜ್ಯಾಮಿಸನ್ ತಂಡ ಸೇರಿಕೊಂಡಿದ್ದಾರೆ. 

ಭಾರತದ ಟಾಪ್ ಸೆಲೆಬ್ರೆಟಿ ಯಾರು? ಸಮಿಕ್ಷೆ ವರದಿ ಬಹಿರಂಗ!

ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 347 ರನ್ ಸಿಡಿಸಿತ್ತು. ಆದರೆ ರಾಸ್ ಟೇಲರ್ ಶತಕದ ನೆರವಿನಿಂದ ನ್ಯೂಜಿಲೆಂಡ್ 4 ವಿಕೆಟ್ ಗೆಲುವು ಸಾಧಿಸಿತು. ಇಷ್ಟೇ ಅಲ್ಲ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. 

ಏಕದಿನ ಸರಣಿಗೂ ಮುನ್ನ ನಡೆದ 5 ಟಿ20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿದೆ. 5-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡು ದಾಖಲೆ ಬರೆದಿದೆ. 

click me!