ಬುಶ್ ಫೈರ್ ಮ್ಯಾಚ್: ಸಚಿನ್-ಯುವಿ ಮುಖಾಮುಖಿ

By Suvarna NewsFirst Published Feb 7, 2020, 7:43 PM IST
Highlights

ಬುಶ್‌ ಫೈರ್ ಸಹಾಯಾರ್ಥ ಪಂದ್ಯಕ್ಕೆ ಎರಡು ತಂಡ ಪ್ರಕಟಗೊಂಡಿದ್ದು, ಮೇಲ್ನೋಟಕ್ಕೆ ರಿಕಿ ಪಾಂಟಿಂಗ್ ಪಡೆ ಬಲಿಷ್ಠ ಎನಿಸಿದೆ. ಯಾವ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

ಮೆಲ್ಬೊರ್ನ್(ಫೆ.07): ಸಿಡ್ನಿ ಮೈದಾನದಲ್ಲಿ ನಡೆಯಬೇಕಿದ್ದ ಕಾಡ್ಗಿಚ್ಚು ಸಹಾಯಾರ್ಥ ಪಂದ್ಯ ಮಳೆಯ ಭೀತಿಯಿಂದಾಗಿ ಇದೀಗ ಮೆಲ್ಬೊರ್ನ್‌ಗೆ ಸ್ಥಳಾಂತರಗೊಂಡಿದೆ. ಸಹಾಯಾರ್ಥ ಪಂದ್ಯಕ್ಕೆ ಎರಡು ತಂಡಗಳು ಪ್ರಕಟಗೊಂಡಿದ್ದು, ರಿಕಿ ಪಾಂಟಿಂಗ್ ಹಾಗೂ ಆಡಂ ಗಿಲ್‌ಕ್ರಿಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಸಚಿನ್ ಕೋಚ್, ಪಾಂಟಿಂಗ್ ನಾಯಕ, ಬುಶ್‌ಫೈರ್ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿ 33ಕ್ಕೂ ಅಧಿಕ ಮಂದಿ ಜೀವಂತ ದಹನವಾಗಿದ್ದರು. ಇನ್ನು ಸಾವಿರಾರು ಮಂದಿ ಮನೆ ಕಳೆದುಕೊಂಡು ಅತಂತ್ರವಾಗಿದ್ದರು. ಹೀಗಾಗಿ ಸಂತ್ರಸ್ಥರ ಸಹಾಯಕ್ಕಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಶೇನ್ ವಾರ್ನ್ ಹಾಗೂ ರಿಕಿ ಪಾಂಟಿಂಗ್ ನಿವೃತ್ತಿ ವಾಪಾಸ್ ಪಡೆದು ಸಹಾಯಾರ್ಥ ಪಂದ್ಯವನ್ನಾಡಲು ತೀರ್ಮಾನಿಸಿದ್ದರು.

ವೈಯುಕ್ತಿಕ ಕಾರಣಗಳಿಂದ ಶೇನ್ ವಾರ್ನ್, ಮೈಕ್ ಹಸ್ಸಿ ಹಾಗೂ ಮೈಕೆಲ್ ಕ್ಲಾರ್ಕ್ ಈ ಪಂದ್ಯದಿಂದ ಹಿಂದೆ ಸರಿದಿದ್ದಾರೆ.  ವಾರ್ನ್ ಅನುಪಸ್ಥಿತಿಯಲ್ಲಿ ಆಡಂ ಗಿಲ್‌ಕ್ರಿಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಆಸೀಸ್ ಟೆಸ್ಟ್ ತಂಡದ ನಾಯಕ ಟಿಮ್‌ ಪೈನೆ,  ಗಿಲ್‌ಕ್ರಿಸ್ಟ್ ತಂಡಕ್ಕೆ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಪಾಂಟಿಂಗ್ ತಂಡಕ್ಕೆ ಸಚಿನ್ ತೆಂಡುಲ್ಕರ್ ಮಾರ್ಗದರ್ಶನ ನೀಡಲಿದ್ದಾರೆ.

ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ಪಂದ್ಯ; ಕಣಕ್ಕಿಳಿಯುತ್ತಿದ್ದಾರೆ ಯುವರಾಜ್, ವಾಸಿಂ ಅಕ್ರಂ!

ಈ ಪಂದ್ಯ ಸಚಿನ್ ತೆಂಡುಲ್ಕರ್ ಹಾಗೂ ಯುವರಾಜ್ ಸಿಂಗ್ ತಂಡಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಸಚಿನ್, ಪಾಂಟಿಂಗ್ ತಂಡಕ್ಕೆ ಮಾರ್ಗದರ್ಶಕರಾಗಿದ್ದರೆ, ಯುವರಾಜ್ ಸಿಂಗ್, ಗಿಲ್‌ಕ್ರಿಸ್ಟ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಭಾನುವಾರ(ಫೆ.09)ನಡೆಯುವ ದಿಗ್ಗಜ ಆಟಗಾರರ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 

ಹೇಡನ್, ಲಾರಾ, ಬ್ರೆಟ್ ಲೀ, ವಾಸೀಂ ಅಕ್ರಂ ಅವರಂತಹ ದಿಗ್ಗಜ ಆಟಗಾರರನ್ನು ಒಳಗೊಂಡಿರುವ ಪಾಂಟಿಂಗ್ ಪಡೆ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣಿಸುತ್ತಿದೆ. ಇನ್ನು ಗಿಲ್‌ಕ್ರಿಸ್ಟ್, ವ್ಯಾಟ್ಸನ್, ಯುವರಾಜ್ ಸಿಂಗ್, ಸೈಮಂಡ್ಸ್‌ ಅವರನ್ನೊಳಗೊಂಡ ತಂಡ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಉಭಯ ತಂಡಗಳು ಹೀಗಿವೆ ನೋಡಿ:

ಪಾಂಟಿಂಗ್ XI: ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ರಿಕಿ ಪಾಂಟಿಂಗ್(ನಾಯಕ), ಎಲೈಸೆ ವಿಲ್ಲಾನಿ, ಬ್ರಿಯಾನ್ ಲಾರಾ, ಫೋಬೆ ಲಿಚ್‌ಫೀಲ್ಡ್, ಬ್ರಾಡ್ ಹ್ಯಾಡಿನ್, ಬ್ರೆಟ್ ಲೀ, ವಾಸೀಂ ಅಕ್ರಂ, ಡೇನಿಯನ್ ಕ್ರಿಸ್ಟಿಯನ್, ಲೂಕ್ ಹ್ಯಾಡ್ಜ್.

ಗಿಲ್‌ಕ್ರಿಸ್ಟ್ XI: ಆಡಂ ಗಿಲ್‌ಕ್ರಿಸ್ಟ್(ನಾಯಕ), ಶೇನ್ ವಾಟ್ಸನ್, ಬ್ರಾಡ್ ಹಾಡ್ಜ್‌, ಯುವರಾಜ್ ಸಿಂಗ್, ಅಲೆಕ್ಸ್ ಬ್ಲಾಕ್‌ವೆಲ್, ಆಂಡ್ರ್ಯೂ ಸೈಮಂಡ್ಸ್, ಕರ್ಟ್ನಿ ವಾಲ್ಷ್, ನಿಕ್ ರಿವಾಲ್ಟ್, ಪೀಟರ್ ಸಿಡ್ಲ್, ಫವಾದ್ ಅಹಮ್ಮನ್, (ಇನ್ನೊಬ್ಬರು ಸೇರ್ಪಡೆಯಾಗಬೇಕಿದೆ.)
 

click me!