ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಕ್ರಿಕೆಟ್ ಟೂರ್ನಿಗಳು ಶೀಘ್ರದಲ್ಲೇ ಆರಂಭಗೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ. ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಕುರಿತು ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ, ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೆ ಕಸರತ್ತು ಆರಂಭಿಸಿದೆ.
ಸಿಡ್ನಿ(ಮೇ.22); ಕೊರೋನಾ ವೈರಸ್ ಕಾರಣ ಕ್ರಿಕೆಟ್ ವೇಳಾಪಟ್ಟಿಗಳು ಅದಲು ಬದಲಾಗಿದೆ. ಇದೀಗ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದು, ಮೆಲ್ಲೆನೆ ಕ್ರೀಡಾ ಕ್ಷೇತ್ರದ ಕಾರ್ಯಚಟುವಟಿಕೆ ಆರಂಭಗೊಳ್ಳುತ್ತಿದೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ, ಟೆಸ್ಟ್ ಸರಣಿ ಆಯೋಜನೆಗೆ ಕಸರತ್ತು ಆರಂಭಿಸಿದೆ. ಭಾರತ ವಿರುದ್ಧದ 4 ಟೆಸ್ಟ್ ಪಂದ್ಯದ ಸರಣಿಯನ್ನು ಎದುರುನೋಡುತ್ತಿರುವ ಆಸ್ಟ್ರೇಲಿಯಾ ಈ ವರ್ಷಾಂತ್ಯದಲ್ಲಿ ಭಾರತ ತಂಡ ಆಸೀಸ್ ಪ್ರವಾಸ ಮಾಡಲಿದೆ ಎಂದಿದೆ.
ಆಗಸ್ಟ್‌ನಲ್ಲಿ ಭಾರತ-ಸೌತ್ ಆಫ್ರಿಕಾ ಟಿ20 ಸರಣಿ; ಪ್ರಕಟಣೆ ಹೊರಡಿಸಿದ CSA!
4 ಟೆಸ್ಟ್ ಪಂದ್ಯಗಳ ಸರಣಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಗೆ ಪ್ರಯಾಣ ಬೆಳಸಲಿದೆ. ಇದರ ಸಾಧ್ಯತೆ 10ರಲ್ಲಿ 9 ಶೇಕಡಾ ಭಾರತ ಪ್ರವಾಸ ಮಾಡಲಿದೆ. ಕಾರಣ ವರ್ಷಾಂತ್ಯಕ್ಕೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಲಿದೆ. ಲಾಕ್‌ಡೌನ್, ನಿರ್ಬಂಧಗಳು ಸಡಿಲಿಕೆಯಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಭವಿಷ್ಯ ನುಡಿದಿದೆ.
ಭಾರತ ಹಾಗೂ ಆಸ್ಟ್ರೋಲಿಯಾ ನಡುವಿನ 4 ಟೆಸ್ಟ್ ಪಂದ್ಯದ ಸರಣಿಯನ್ನು 2020ರ ಆಕ್ಟೋಬರ್‌ನಿಂದ 2021ರ ಜನವರಿಯೊಳಗೆ ನಿಗದಿಪಡಿಸಲಾಗುವುದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿನ್ ರಾಬರ್ಟ್ ಹೇಳಿದ್ದಾರೆ.
ಸರಣಿ ಆಯೋಜನೆ ವೇಳೆ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದರೂ ಎಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುವುದು. ಇಷ್ಟೇ ಅಲ್ಲ ಮಾರ್ಗಸೂಚಿಗಳ ಪ್ರಕಾರ ಪಂದ್ಯ ಆಯೋಜಿಸಲಾಗುವುದು. ಈಗಾಗಲೇ ಪಂದ್ಯವಿಲ್ಲದೆ ಕ್ರಿಕೆಟ್ ಮಂಡಳಿಗಳು ನಷ್ಟ ಅನುಭವಿಸುತ್ತಿದೆ. ಮಂಡಳಿ ಜೊತೆ ಕೈಜೋಡಿಸಿರುವ ಹಲವು ಕಂಪನಿಗಳು ಅವರ ಅವರ ಉದ್ಯೋಗಿಗಳು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಕ್ರಿಕೆಟ್ ಮರಳಲಿ ಎಂದು ಕೆವಿನ್ ರಾಬರ್ಟ್ ಹೇಳಿದ್ದಾರೆ.