ಅಧ್ಯಕ್ಷರಾಗಿ ದಾದಾ ಮೊದಲ ಕೆಲಸ; ಭಾರತ-ಬಾಂಗ್ಲಾದೇಶ ಡೇ & ನೈಟ್ ಟೆಸ್ಟ್?

By Web DeskFirst Published Oct 24, 2019, 6:22 PM IST
Highlights

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯವನ್ನು ಡೇ ಅಂಡ್ ನೈಟ್ ಪಂದ್ಯವಾಗಿ ಆಯೋಜಿಸಲಾಗುತ್ತಾ? ಸೌರವ್ ಗಂಗೂಲಿ ಅಧ್ಯಕ್ಷರಾದ ಬಳಿಕ ಈ ಪ್ರಶ್ನೆ ಚರ್ಚೆಯಾಗುತ್ತಿದೆ. ಇದಕ್ಕೂ ಪೂರಕವಾಗಿ ಗಂಗೂಲಿ ಕೂಡ ಮೊದಲ ಹೆಜ್ಜೆ ಇಟ್ಟಿದ್ದಾರೆ.
 

ಮುಂಬೈ(ಅ.24): ಬಾಂಗ್ಲಾದೇಶ ವಿರುದ್ದದ ತವರಿನ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದೆ. ಸರಣಿ ಆಯೋಜನೆಗೆ ಬಿಸಿಸಿಐ  ತಯಾರಿ ಮಾಡಿಕೊಳ್ಳುತ್ತಿದೆ. ನೂತನ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತಿರುವ ಮೊದಲ ಸರಣಿ ಇದು. ಹೀಗಾಗಿ ಈ ಸರಣಿಯನ್ನು ಸ್ಮರಣೀಯಗೊಳಿಸಲು ಗಂಗೂಲಿ ಪ್ಲಾನ್ ಮಾಡಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯನ್ನು ಡೇ ಅಂಡ್ ನೈಟ್ ನಡೆಸಲು ಗಂಗೂಲಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಂಗೂಲಿ ಜೊತೆ ಉತ್ತಮ ಸಂಬಂಧ ಮುಂದುವರಿಸುವೆ; ಕೊಹ್ಲಿ!

ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷನಾಗಿ ಗಂಗೂಲಿ ಡೇ ಅಂಡ್ ನೈಟ್ ಅನ್ ಆಫೀಶಿಯಲ್ ಟೆಸ್ಟ್ ಪಂದ್ಯ ಆಯೋಜಿಸಿದ್ದರು. ಇದೀಗ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಗಂಗೂಲಿ ಸಜ್ಜಾಗಿದ್ದಾರೆ. ಪ್ರಸ್ತಾವನೆ ಮಂದಿಟ್ಟಿರುವ ಗಂಗೂಲಿಗೆ ಸಮಿತಿಯಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ. ಆದರೆ ಬಾಂಗ್ಲಾ ಸರಣಿಯಲ್ಲಿ ಡೇ ಅಂಡ್ ನೈಟ್ ಟೆಸ್ಟ್ ಸರಣಿ ಆಯೋಜನೆ ಕಷ್ಟ ಎಂದು ಕ್ರಿಕೆಟ್ ಸಮಿತಿ ಹೇಳುತ್ತಿದೆ.

ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: 3 ಕನ್ನಡಿಗರಿಗೆ ಸ್ಥಾನ

ಭಾರತ ಹೊರತು ಪಡಿಸಿ ಟೆಸ್ಟ್ ಆಡೋ ಎಲ್ಲಾ ರಾಷ್ಟ್ರಗಳು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಡಿವೆ. 2018ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿಲೇಡ್ ಟೆಸ್ಟ್ ಪಂದ್ಯವನ್ನು ಡೇ ಅಂಡ್ ನೈಟ್ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐ ಬಳಿ ಮನವಿ ಮಾಡಿತ್ತು. ಆದರೆ ಬಿಸಿಸಿಐ ನಿರಾಕರಿಸಿತ್ತು. 

ಇದನ್ನೂ ಓದಿ: ಬಿಸಿಸಿಐಗೆ ಗಂಗೂಲಿ ಬಾಸ್, 'ದಾದಾಗಿರಿ'ಯ ಆ ದಿನಗಳು ಮತ್ತೆ ಬಂದಿವೆ

ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಕೇವಲ ಬಾಲ್ ಮಾತ್ರ ಬದಲಾಗುತ್ತೆ. ಭಾರತ ತಂಡದಲ್ಲಿ ಕ್ಲಾಸ್ ಆಟಗಾರರಿದ್ದಾರೆ. ಹೀಗಾಗಿ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗಂಗೂಲಿ ಇತ್ತೀಚೆಗೆ ಹೇಳಿದ್ದರು. ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗುತ್ತದೆ.

click me!