ಮಿಲ್ಖಾ ಸಿಂಗ್‌ಗೆ ಗೌರವ ನಮನ; WCTfinal ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ!

By Suvarna NewsFirst Published Jun 19, 2021, 5:03 PM IST
Highlights
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಮಿಲ್ಕಾ ಸಿಂಗ್‍‌ಗೆ ಗೌರವ ನಮನ
  • ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ
  • ದಿಗ್ಗಜ ಮಿಲ್ಕಾ ಸಿಂಗ್‌ಗೆ ಗಣ್ಯರ ಕಂಬನಿ

ಸೌಥಾಂಪ್ಟನ್(ಜೂ.19):  ದಿಗ್ಗಜ ಮಿಲ್ಕಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು, ಭಾರತೀಯ ಅಥ್ಲೀಟ್‌ಗಳು ಸಾಮಾಜಿಕ ಜಾಲತಾಣ ಮೂಲಕ ಸ್ಪೂರ್ತಿಯ ಚಿಲುಮೆ ಮಿಲ್ಖಾಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಮಿಲ್ಖಾ ಸಿಂಗ್ ಅಗಲಿಕೆಗೆ ಗೌರವ ನಮನ ಸಲ್ಲಿಸಿದೆ.

ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಆಗ್ರಹ; ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ!

ನ್ಯೂಜಿಲೆಂಡ್ ವಿರುದ್ಧದ ಫೈನಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದೆ. ಈ ಮೂಲಕ ಮಿಲ್ಖಾ ಸಿಂಗ್‌ಗೆ ಗೌರವ ನಮನ ಸಲ್ಲಿಸಿದೆ.  ಬಿಸಿಸಿಐ ಅಧೀಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ.

 

is wearing black armbands in remembrance of Milkha Singhji, who passed away due to COVID-19. 🙏

— BCCI (@BCCI)

ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಿಲ್ಕಾ ಸಿಂಗ್ ತೀವ್ರ ಅಸ್ವಸ್ಥಗೊಂಡು ನಿನ್ನೆ(ಜೂ.18) ರಾತ್ರಿ ನಿಧರಾದರು. ಕಳೆದವಾರ ಮಿಲ್ಕಾ ಸಿಂಗ್ ಪತ್ನಿ ಕೂಡ ಕೋವಿಡ್‌ಗೆ ಬಲಿಯಾಗಿದ್ದಾರೆ.  ಪದ್ಮಶ್ರಿ, ಅರ್ಜುನ ಪ್ರಶಸ್ತಿ ವಿಜೇತ ಮಿಲ್ಖಾ ಸಿಂಗ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿ ಅನ್ನೋ ಒತ್ತಾಯ ಹೆಚ್ಚಾಗುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್

ಇನ್ನು ಸೌಥಾಂಪ್ಟನ್‌ನಲ್ಲಿ ಮಿಲ್ಖಾಗೆ ಗೌರವಾರ್ಥವಾಗಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಟೀಂ ಇಂಡಿಯಾ, ಎದುರಾಳಿ ನ್ಯೂಜಿಲೆಂಡ್ ವಿರುದ್ಧ ದಿಟ್ಟ ಹೋರಾಟ ನೀಡುತ್ತಿದೆ.. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ 62 ರನ್ ಜೊತೆಯಾಟ ನೀಡಿದರು.

ರೋಹಿತ್ ಶರ್ಮಾ 34 ರನ್ ಸಿಡಿಸಿ ಔಟಾದರೆ, ಗಿಲ್ 28 ರನ್ ಸಿಡಿಸಿ ಔಟಾದರು. ದಿಢೀರ್ 2 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಕೊಂಚ ಆತಂಕಕ್ಕೀಡಾಗಿತ್ತು. ಸದ್ಯ ಎಚ್ಚರಿಕೆಯ ಆಟಕ್ಕೆ ಮುಂದಾಗಿರುವ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಸಾಥ್ ನೀಡಿದ್ದಾರೆ.

click me!