ಇದೇ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಯೋಜನೆಗೆ ಬಿಸಿಸಿಐ ಸಜ್ಜಾಗಿದೆ. ಕೋಲ್ಕತಾದಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯ ಡೇ ಅಂಡ್ ನೈಟ್ ನಡಯೆಲಿದೆ. ಇದಕ್ಕಾಗಿ ಟೀಂ ಇಂಡಿಯಾ ಈಗಲೇ ಅಭ್ಯಾಸ ಆರಂಭಿಸಿದೆ. ಮೊದಲ ಪಂದ್ಯಕ್ಕೆ ಇಂದೋರ್ ತಲುಪಿರುವ ಟೀಂ ಇಂಡಿಯಾ ಪಿಂಕ್ ಬಾಲ್ ಅಭ್ಯಾಸ ಮಾಡಿದೆ.
ಇಂದೋರ್(ನ.13): ನ.22 ರಿಂದ ನಡೆಯಲಿರುವ ಭಾರತ-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಪಿಂಕ್ ಬಾಲ್ ಬಳಕೆಯಾಗಲಿದೆ. ಈ ಪಂದ್ಯಕ್ಕಾಗಿ ಭಾರತ ತಂಡ ಅಭ್ಯಾಸ ಆರಂಭಿಸಿದೆ. ಮೊದಲ ಪಂದ್ಯ ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿದ್ದು, ಮಂಗಳವಾರ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮೊದಲ ಸುತ್ತಿನ ಅಭ್ಯಾಸ ನಡೆಸಿತು. ಈ ವೇಳೆ ಸಾಂಪ್ರದಾಯಿಕ ಕೆಂಪು ಚೆಂಡಿನ ಜತೆ ಪಿಂಕ್ ಬಾಲ್‌ನಲ್ಲೂ ಅಭ್ಯಾಸ ನಡೆಸಲಾಯಿತು.
Looks who's here - unboxing the Pink cherry 😃😃 had a stint with the Pink Ball at the nets today in Indore 👀👀 pic.twitter.com/JhAJT9p6CI
— BCCI (@BCCI)ಇದನ್ನೂ ಓದಿ: ಇನ್ಮುಂದೆ ಪ್ರತಿ ವರ್ಷ ನಡೆಯುತ್ತೆ ಡೇ ಅಂಡ್ ನೈಟ್ ಟೆಸ್ಟ್
ನೆಟ್ಸ್‌ನಲ್ಲಿ ಕೊಹ್ಲಿ ಮೊದಲು ಪಿಂಕ್ ಬಾಲ್‌ನಲ್ಲೇ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಸಹ ಪಿಂಕ್ ಬಾಲ್ ಹೇಗೆ ವರ್ತಿಸಲಿದೆ ಎನ್ನುವುದನ್ನು ಪರೀಕ್ಷಿಸಿದರು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಭುವನೇಶ್ವರ್ ಕುಮಾರ್ ಸಹ ನೆಟ್ಸ್‌ನಲ್ಲಿ ಬೌಲ್ ಮಾಡುವ ಮೂಲಕ, ಚೆಂಡು ಎಷ್ಟು ಸ್ವಿಂಗ್
ಆಗಲಿದೆ ಎನ್ನುವುದನ್ನು ತಿಳಿಸಿಕೊಟ್ಟರು.
ಇದನ್ನೂ ಓದಿ: ಡೇ ಅಂಡ್ ನೈಟ್ ಟೆಸ್ಟ್: ಕೇವಲ 3 ಸೆಕೆಂಡ್ ದಾದಾ ಮಾತಿಗೆ ಓಕೆ ಎಂದ ಕೊಹ್ಲಿ..!
ಇಂದೋರ್‌ಗೆ ತೆರಳುವ ಮುನ್ನ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಟೆಸ್ಟ್ ತಜ್ಞರಾದ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಮಯಾಂಕ್ ಅಗರ್‌ವಾಲ್, ಶಮಿ 2 ದಿನಗಳ ಕಾಲ ಪಿಂಕ್ ಬಾಲ್‌ನಲ್ಲಿ ಅಭ್ಯಾಸ ನಡೆಸಿ ದ್ದರು. ಎನ್ ಸಿಎ ನಿರ್ದೇಶಕ ರಾಹುಲ್ ದ್ರಾವಿಡ್ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು.