ಧೋನಿ ಅಪರೂಪದ ವಜ್ರ, ನಿವೃತ್ತಿಗೆ ಒತ್ತಡ ಹೇರಬೇಡಿ ಎಂದ ಇಂಗ್ಲೆಂಡ್ ಮಾಜಿ ನಾಯಕ!

By Suvarna NewsFirst Published Apr 11, 2020, 10:33 PM IST
Highlights

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಹಾಗೂ ದೇಸಿ ಕ್ರಿಕೆಟ್‌ನಿಂದ ದೂರ ಉಳಿದು ಸರಿಸುಮಾರು 9 ತಿಂಗಳು ಕಳೆದಿದೆ. ಐಪಿಎಲ್ ಮೂಲಕ ಧೋನಿ ಕಮ್‌ಬ್ಯಾಕ್ ಎದುರುನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದರ ಬೆನ್ನಲ್ಲೇ ಧೋನಿ ಸದ್ದಿಲ್ಲದೇ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ಇಂಗ್ಲೆಂಡ್ ಮಾಜಿ ನಾಯಕ ಧೋನಿ ನಿವೃತ್ತಿಗೆ ಆಗ್ರಹಿಸುವವರಿಗೆ ಉಪಯುಕ್ತ ಸಲಗೆ ನೀಡಿದ್ದಾರೆ.

ಲಂಡನ್(ಏ.11): ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ರದ್ದಾಗಿದೆ. ಹೀಗಾಗಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇತ್ತ ಆಯ್ಕೆ ಸಮಿತಿ ಕೂಡ ಐಪಿಎಲ್ ಪ್ರದರ್ಶನ ಆಧರಿಸಿ ಧೋನಿ ಆಯ್ಕೆ ನಡೆಯಲಿದೆ ಎಂದಿದ್ದರು. ಆದರೆ ಅದ್ಯಾವುದು ಆಗಲೇ ಇಲ್ಲ. ಇದರ ಬೆನ್ನಲ್ಲೇ ಧೋನಿ ನಿವೃತ್ತಿಗೆ ಒತ್ತಡಗಳು ಕೇಳಿಬರುತ್ತಿದೆ.

ನಿವೃತ್ತಿ ಮಾತುಗಳು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೈನ್ ಭಾರತೀಯರಿಗೆ ಸಲಹೆ ನೀಡಿದ್ದಾರೆ. ಧೋನಿ ನಿವೃತ್ತಿಗೆ ಒತ್ತಡ ಹೇರುವುದು ಸೂಕ್ತವಲ್ಲ. ಕಾರಣ ಧೋನಿ ಈ ಪೀಳಿಗೆಯ ಕ್ರಿಕೆಟಿಗ. ಧೋನಿ ನಿವೃತ್ತಿಯಾದರೆ ಮತ್ತೊಬ್ಬ ಧೋನಿ ಸಿಗಲಾರ. ಇಷ್ಟೇ ಅಲ್ಲ ಈ ಪೀಳಿಗೆಯಲ್ಲಿ ಮತ್ತೊಬ್ಬ ಧೋನಿ ಹುಟ್ಟಲಾರ. ಹೀಗಾಗಿ ಧೋನಿ ತಂಡದಲ್ಲಿರುವುದು ಸೂಕ್ತ ಎಂದಿದ್ದಾರೆ.

39 ವರ್ಷದ ಧೋನಿಯಲ್ಲಿನ್ನು ಕ್ರಿಕೆಟ್ ಬಾಕಿ ಇದೆ. ಟೀಂ ಇಂಡಿಯಾಗೆ ಸಾಕಷ್ಟು ಕೊಡುಗೆ ನೀಡಲು ಬಾಕಿ ಇದೆ. ಮತ್ತೊಂದು ಟ್ರೋಫಿ ಗೆಲ್ಲಿಸಿಕೊಡುವ ಶಕ್ತಿ, ಸಾಮರ್ಥ್ಯ ಹಾಗೂ ಫಿಟ್ನೆಸ್ ಧೋನಿ ಬಳಿ ಇದೆ. ಹೀಗಿರುವಾಗ ಧೋನಿ ನಿವೃತ್ತಿ ಬಯಸುವುದು ಎಷ್ಟು ಸರಿ ಎಂದು ನಾಸಿರ್ ಹುಸೈನ್ ಪ್ರಶ್ನಿಸಿದ್ದಾರೆ.

2019ರ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಕೊನೆಯಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.  ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದ ಧೋನಿ ಯಾವುದೇ ಕ್ರಿಕೆಟ್ ಪಂದ್ಯ ಆಡಿಲ್ಲ.
 

click me!