ಧೋನಿ ನಾಯಕತ್ವದಡಿ ಆಡಬೇಕು ಟೀಂ ಇಂಡಿಯಾ ಮಹಿಳಾ ಆಟಗಾರ್ತಿ..!

Suvarna News   | Asianet News
Published : Apr 12, 2020, 10:43 AM IST
ಧೋನಿ ನಾಯಕತ್ವದಡಿ ಆಡಬೇಕು ಟೀಂ ಇಂಡಿಯಾ ಮಹಿಳಾ ಆಟಗಾರ್ತಿ..!

ಸಾರಾಂಶ

ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡ ಎಂ.ಎಸ್ ಧೋನಿ ಕ್ಯಾಪ್ಟನ್ಸಿಯಲ್ಲಿ ನಾನು ಆಡಬೇಕು ಎಂದು ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಆಸೆ ವ್ಯಕ್ತಪಡಿಸಿದ್ದಾರೆ. ಯಾರು ಆ ಆಟಗಾರ್ತಿ? ಏನಂತೆ ಆಸೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ನವದೆಹಲಿ(ಏ.12): ಭಾರತ ಮಹಿಳಾ ಕ್ರಿಕೆಟ್‌ ತಂಡದ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌, ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌. ಧೋನಿ ನಾಯಕತ್ವದಡಿಯಲ್ಲಿ ಆಟವಾಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. 

ಧೋನಿ ಭಾರತ ತಂಡದ ಯಶಸ್ವಿ ನಾಯಕ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹಾಗೂ ಅದ್ಭುತ ವಿಕೆಟ್‌ ಕೀಪರ್‌ ಆಗಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ, ಐಸಿಸಿಯ 3 ಪ್ರಮುಖ ಟ್ರೋಫಿಗಳನ್ನು ಗೆದ್ದಿದೆ. ವಿಕೆಟ್‌ ಹಿಂದೆ ನಿಂತಿದ್ದರೂ ಎಂ.ಎಸ್. ಧೋನಿ ನಾಯಕತ್ವ ಗುಣಗಳು ಅತ್ಯದ್ಬುತವಾಗಿವೆ ಎಂದು ಜೆಮಿಮಾ ಅವರು ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಹೇಳಿದ್ದಾರೆ.

ಧೋನಿ ಅಪರೂಪದ ವಜ್ರ, ನಿವೃತ್ತಿಗೆ ಒತ್ತಡ ಹೇರಬೇಡಿ ಎಂದ ಇಂಗ್ಲೆಂಡ್ ಮಾಜಿ ನಾಯಕ!

ನಾನು ಚಿಕ್ಕಂದಿನಿಂದ ಇರುವಾಗಿನಿಂದಲೇ ಧೋನಿ ಅವರ ಕ್ರಿಕೆಟ್ ಹಾಗೂ ಸಾಧನೆಯನ್ನು ನೋಡುತ್ತಾ ಬಂದಿದ್ದೇನೆ. ಧೋನಿ ನಾಯಕತ್ವದಲ್ಲಿ ಆಡುವುದೇ ಒಂದು ಅಧ್ಬುತ ಕಲ್ಪನೆ. ಆದರೆ ಆ ಕನಸು ನನಗಸಾಗುತ್ತದೆಯೇ ಎನ್ನುವುದು ಗೊತ್ತಿಲ್ಲ ಎಂದು ಜೆಮಿಮಾ ರೋಡ್ರಿಗಸ್ ಹೇಳಿದ್ದಾರೆ. 

ಜೆಮಿಮಾ ರೋಡ್ರಿಗಸ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 18 ಏಕದಿನ ಪಂದ್ಯಗಳನ್ನಾಡಿರುವ ಜೆಮಿಮಾ 3 ಅರ್ಧಶತಕ ಸಹಿತ 372 ರನ್‌ ಬಾರಿಸಿದ್ದಾರೆ. ಇನ್ನು 44 ಟಿ20 ಪಂದ್ಯಗಳನ್ನಾಡಿ 26.57ರ ಸರಾಸರಿಯಲ್ಲಿ 930 ರನ್ ಬಾರಿಸಿದ್ದಾರೆ.   

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!