2019ರ ವಿಶ್ವಕಪ್ ಟೂರ್ನಿ ವೇಳೆ 87 ವರ್ಷದ ಅಜ್ಜಿ ಚಾರುಲತಾ ಟೀಂ ಇಂಡಿಯಾವನ್ನು ಹುರಿದುಂಬಿಸಿ ಎಲ್ಲರ ಗಮನಸೆಳೆದಿದ್ದರು. ತುತ್ತೂರಿ ಊದಿ, ಪ್ರತಿ ಬೌಂಡರಿ ಸಿಕ್ಸರ್‌ಗೆ ಕುಣಿದು ಕುಪ್ಪಳಿಸಿದ್ದರು. ಈ ಅಜ್ಜಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಲಂಡನ್(ಜ.16): ಟೀಂ ಇಂಡಿಯಾದ ಸೂಪರ್ ಫ್ಯಾನ್ ಎಂದೇ ಗುರಿತಿಸಿಕೊಂಡಿದ್ದ 87 ವರ್ಷದ ಅಜ್ಜಿ ಚಾರುಲತಾ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಚಾರುಲತಾ ಸಾವನ್ನಪ್ಪಿರುವ ಕುರಿತು ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಲಾಗಿದೆ. 2019ರ ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡಕ್ಕೆ ಸ್ಪೂರ್ತಿ ತುಂಬಿದ್ದ ಚಾರುಲತಾ ನಿಧನಕ್ಕೆ ಬಿಸಿಸಿಐ, ಶಿಖರ್ ಧವನ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸಾಕ್ಷಿಯಾಗಿದ್ದ ಚಾರುಲತಾ,2019ರಲ್ಲೂ ಹಾಜರ್
ನಮ್ಮ ಹಿರಿಯ ಅಜ್ಜಿ ಜನವರಿ 13ರಂದು ಕೊನೆಯುಸಿರೆಳಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ. ಚಾರುಲತಾ ಪಟೇಲ್ ನಿಧನ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ.
2019ರ ವಿಶ್ವಕಪ್ ಟೂರ್ನಿಯಲ್ಲಿನ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಚಾರುಲತಾ ಕ್ರೀಡಾಂಗಣಕ್ಕೆ ಆಗಮಿಸಿ ಟೀಂ ಇಂಡಿಯಾ ಕ್ರಿಕೆಟಿಗರನ್ನು ಹುರಿದುಂಬಿಸಿದ್ದರು. ಇಳಿ ವಯಸ್ಸಿನಲ್ಲಿ ಚಾರುಲತಾ ಉತ್ಸಾಹ ಎಲ್ಲರ ಗಮನಸೆಳೆದಿತ್ತು. ಇಷ್ಟೇ ಸಾಮಾಜಿಕ ಜಾಲತಾಣದಲ್ಲಿ ಚಾರುಲತಾ ಸ್ಟಾರ್ ಆಗಿ ಬದಲಾಗಿದ್ದರು. ಮಕ್ಕಳ ಹಾಕೆ ತುತ್ತೂರಿ ಊದಿ ಭಾರತ ತಂಡಕ್ಕೆ ಅದ್ಭುತ ಬೆಂಬಲ ನೀಡಿದ್ದರು.
's Superfan Charulata Patel ji will always remain in our hearts and her passion for the game will keep motivating us.
May her soul rest in peace pic.twitter.com/WUTQPWCpJR
ಮಾತು ಉಳಿಸಿಕೊಂಡ ಕಿಂಗ್ ಕೊಹ್ಲಿ; ಮ್ಯಾಚ್ ನೊಡಲು ರೆಡಿಯಾದ 87ರ ಅಜ್ಜಿ..!.
ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕಿತ್ತು. ಈ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂಪರ್ ಫ್ಯಾನ್ ಚಾರುಲತಾ ಬಳಿ ತೆರಳಿ ಆಶೀರ್ವಾದ ಪಡೆದಿದ್ದರು. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಣಿಸಿ ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಈ ಪಂದ್ಯವನ್ನು ವೀಕ್ಷಿಸಿದ್ದ ಚಾರುಲತಾ, 2019ರಲ್ಲಿ ಟೀಂ ಇಂಡಿಯಾ ಫೈನಲ್ ಪಂದ್ಯ ವೀಕ್ಷಿಸಲು ಕಾತರರಾಗಿದ್ದರು. ಆದರೆ ಭಾರತ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿತು.
ಹೊಸ ಇನ್ನಿಂಗ್ಸ್ ಆರಂಭಿಸಿದ 87ರ ಹರೆಯದ ಟೀಂ ಇಂಡಿಯಾ ಅಭಿಮಾನಿ!
RIP Charulata Patel Ji 🙏.. Will always remember your passion for the game. Thank you for your unconditional love and support. ❤ https://t.co/cagXV0ghW4
— Shikhar Dhawan (@SDhawan25)R.I.P Charulata Patel ji, the 87-year-old superfan who cheered India on at pic.twitter.com/waw6ux9wxK
— ICC (@ICC)