ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಅವಿಸ್ಮರಣೀಯ ದಿನ ಯಾವುದಿರಬಹುದು..? ಮೊದಲ ಶತಕ, ಅನುಷ್ಕಾ ಜತೆ ಸಪ್ತಪದಿ ತುಳಿದದ್ದು, ಅಂಡರ್ 19 ವಿಶ್ವಕಪ್ ಗೆದ್ದಿದ್ದು ಇರಬಹುದು ಎಂದರೆ ನಿಮ್ಮ ಊಹೆ ಸುಳ್ಳಾಗಲಿದೆ. ಹಾಗಾದರೆ ವಿರಾಟ್ ಪಾಲಿನ ಅವಿಸ್ಮರಣೀಯ ಯಾವುದು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಮುಂಬೈ(ಜ.16): ‘ಭಾರತ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದು ವೃತ್ತಿ ಜೀವನದ ಅತ್ಯಂತ ಖುಷಿಯ ಕ್ಷಣ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
#BreakingNews: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!
undefined
ಬುಧವಾರ ಇಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, 2008ರಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾದ ಕ್ಷಣವನ್ನು ಸ್ಮರಿಸಿದರು. ‘ಭಾರತ ತಂಡಕ್ಕೆ ಆಯ್ಕೆಯಾಗುತ್ತೇನೆ ಎಂಬ ಯಾವ ಸುಳಿವೂ ನನಗೆ ಇರಲಿಲ್ಲ. ಯಾರೂ ಈ ಬಗ್ಗೆ ಮಾಹಿತಿಯನ್ನೂ ನೀಡಿರಲಿಲ್ಲ. ತಾಯಿಯ ಜೊತೆ ಟೀವಿಯಲ್ಲಿ ನ್ಯೂಸ್ ನೋಡುತ್ತಾ ಕುಳಿತಿದ್ದೆ. ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರಲಾರಂಭಿಸಿತು. ಭಾರತ ತಂಡಕ್ಕೆ ಕೊಹ್ಲಿ ಆಯ್ಕೆ ಎಂಬ ಸುದ್ದಿ ಟೀವಿ ಪರದೆಯ ಮೇಲೆ ಕಾಣಿಸಿಕೊಂಡಾಗ ಸಿಕ್ಕ ಖುಷಿ ಜೀವನದಲ್ಲಿ ಎಂದೆಂದೂ ಮರೆಯಲಾಗದು. ಅದಕ್ಕಿಂತ ಖುಷಿಯ ಕ್ಷಣ ಮತ್ತೊಂದಿಲ್ಲ. ಆಗ ಕುಣಿಯಬೇಕೋ, ಓಡಬೇಕೋ, ಏನು ಮಾಡಬೇಕು ಎಂದು ನನಗೆ ಗೊತ್ತಾಗಲಿಲ್ಲ’ ಎಂದರು.
ಇಬ್ಬರು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ವಿರಾಟ್ ಕೊಹ್ಲಿ..!
ವಿರಾಟ್ ಕೊಹ್ಲಿ ನೇತೃತ್ವದ ಕಿರಿಯರ ಕ್ರಿಕೆಟ್ ತಂಡ 2008ರಲ್ಲಿ ಅಂಡರ್ 19 ಜಯಿಸಿ ಮೆರೆದಾಡಿತ್ತು. ಆಗ ವಿರಾಟ್ ಕೊಹ್ಲಿ ಸುದ್ದಿಯಾಗಿದ್ದರು. ಇದಾದ ಕೆಲವೇ ತಿಂಗಳುಗಳ ಬಳಿಕ ತಂಡ ಕೂಡಿಕೊಂಡ ಕೊಹ್ಲಿ ಒಂದು ದಶಕದಿಂದಲೂ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಬುಧವಾರ ಐಸಿಸಿ ವರ್ಷದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.