ಬುಮ್ರಾ, ಸ್ಮೃತಿಗೆ ಒಲಿದ ವಿಸ್ಡನ್‌ ಕ್ರಿಕೆಟ್‌ ಪ್ರಶಸ್ತಿ

By Web Desk  |  First Published Oct 26, 2019, 11:08 AM IST

ವಿಸ್ಡನ್ ವರ್ಷದ ಕ್ರಿಕೆಟಿಗ ಗೌರವಕ್ಕೆ ಟೀಂ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಪಾತ್ರರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು[ಅ.26]: ಭಾರತ ಕ್ರಿಕೆಟ್‌ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ, ಮಹಿಳಾ ತಂಡದ ತಾರಾ ಆಟ​ಗಾರ್ತಿ ಸ್ಮೃತಿ ಮಂಧನಾ ಪ್ರತಿಷ್ಠಿತ ವಿಸ್ಡನ್‌ ವರ್ಷದ ಕ್ರಿಕೆಟರ್‌ ಪ್ರಶಸ್ತಿಗೆ ಭಾಜ​ನ​ರಾ​ಗಿ​ದ್ದಾರೆ.

RCB ಸೇರಿಕೊಳ್ತಾರಾ ಬುಮ್ರಾ? ಅಭಿಮಾನಿ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ಉತ್ತರ!

Tap to resize

Latest Videos

undefined

ಶುಕ್ರವಾರ ವಿಸ್ಡನ್‌ ಈ ಸಾಲಿನ ಪ್ರಶಸ್ತಿ ಘೋಷಿಸಿತು. ಬುಮ್ರಾ, ಮಂಧನಾ ಸಹಿತ ಏಷ್ಯಾದ ಐವರು ಕ್ರಿಕೆಟರ್‌ಗಳು ಪ್ರಶಸ್ತಿಗೆ ಆಯ್ಕೆಯಾಗಿ​ದ್ದಾರೆ. ಪಾಕಿಸ್ತಾನದ ಫಖರ್‌ ಜಮಾನ್‌, ಶ್ರೀಲಂಕಾದ ದಿಮತ್‌ ಕರುಣರತ್ನೆ, ಆಫ್ಘಾನಿಸ್ತಾನದ ರಶೀದ್‌ ಖಾನ್‌ ಪ್ರಶಸ್ತಿ ಗಳಿ​ಸಿ​ದ್ದಾರೆ. ವಿಸ್ಡನ್‌ 7ನೇ ಆವೃ​ತ್ತಿ​ಯಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರವಾಲ್‌ ಟೆಸ್ಟ್‌ ಪಾದಾರ್ಪಣೆ ಬಗ್ಗೆ ಮುದ್ರಿಸಲಾಗಿದೆ.

ಮುಂಬೈ ಅಂಡರ್-23 ತಂಡ ಪ್ರಕಟ, ಅರ್ಜುನ್ ತೆಂಡುಲ್ಕರ್‌ಗೆ ಸ್ಥಾನ!

ಮಿಥಾಲಿ ರಾಜ್, ದೀಪ್ತಿ ಶರ್ಮಾ ಬಳಿಕ ವಿಸ್ಡನ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಪಡೆದ ಮೂರನೇ ಆಟಗಾರ್ತಿ ಎನ್ನುವ ಗೌರವಕ್ಕೆ ಮಂಧನಾ ಪಾತ್ರರಾಗಿದ್ದಾರೆ. ಇನ್ನು ಕನ್ನಡಿಗ ಗುಂಡಪ್ಪ ವಿಶ್ವನಾಥ್ ಹಾಗೂ ಲಾಲಾ ಅಮರ್’ನಾಥ್ ವಿಸ್ಡನ್ ಇಂಡಿಯಾ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ.

 

click me!