ಒಂಡೇ ಕಪ್ ಟೂರ್ನಿ ಮುಂಬೈ ಅಂಡರ್ 23 ತಂಡ ಪ್ರಕಟಗೊಂಡಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್‌ಗೆ ಅದೃಷ್ಠ ಖುಲಾಯಿಸಿದೆ.
ಮುಂಬೈ(ಅ.25): ಒಂಡೇ ಕಪ್ ಟೂರ್ನಿಗೆ ಮುಂಬೈ ಅಂಡರ್ 23 ತಂಡವನ್ನು ಪ್ರಕಟಿಸಲಾಗಿದೆ. ಮಾಜಿ ಕ್ರಿಕೆಟಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಟೋಬರ್ 31ರಿಂದ ಟೂರ್ನಿ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ
undefined
ಅರ್ಜುನ್ ತೆಂಡುಲ್ಕರ್ ಇತ್ತೀಚೆಗಿನ ಪ್ರದರ್ಶನ ಆಧರಿಸಿ, ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಂಡರ್ 23 ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದರೆ 20 ವರ್ಷದ ಅರ್ಜುನ್, ಮುಂಬೈ ಹಿರಿಯರ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ಮುಂಬೈ ಆಯ್ಕೆ ಸಮಿತಿ ಹೇಳಿದೆ.
ಇದನ್ನೂ ಓದಿ: ICC ಖಜಾನೆಗೆ ಕೈ ಹಾಕಿದ ಗಂಗೂಲಿ; ಬೆಚ್ಚಿ ಬಿತ್ತು ಮಂಡಳಿ!
ಸೌತ್ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್‌ಗಳಿಗೆ ನೆಟ್ಸ್ ಬೌಲಿಂಗ್ ಮಾಡಿದ್ದಾರೆ. ಇನ್ನು ಟೀಂ ಇಂಡಿಯಾ ಕ್ರಿಕೆಟಿಗರ ಅಭ್ಯಾಸದಲ್ಲೂ ಬೌಲಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ ಹೋರಾಟ ನಡಸಲಿದೆ.
ಮುಂಬೈ ಅಂಡರ್ 23 ತಂಡದ ವೇಳಾಪಟ್ಟಿ
ಮುಂಬೈ vs ಆಂಧ್ರಪ್ರದೇಶ, ಅ.31
ಮುಂಬೈ vs ಜಾರ್ಖಂಡ್, ನ. 2
ಮುಂಬೈ vsರಾಜಸ್ಥಾನ, ನ. 4
ಮುಂಬೈ vs ಉತ್ತರ ಪ್ರದೇಶ, ನ. 5
ಮುಂಬೈ vs ರೈಲ್ವೇಸ್, ನ.9
ಮುಂಬೈ vs ದೆಹಲಿ, ನ. 11
ಮುಂಬೈ ಅಂಡರ್ 23 ತಂಡ:
ಶ್ಯಾಮ್ಸ್ ಮುಲಾನಿ(ನಾಯಕ), ಹಾರ್ದಿಕ್ ತಮೋರ್(ಉಪನಾಯಕ), ಅಮನ್ ಖಾನ್, ಅದೀಬ್ ಉಸ್ಮಾನಿ, ಭುಪೆನ್ ಲಾಲ್ವಾನಿ, ಸೈರಾಜ್ ಪಾಟೀಲ್, ಅಶಯ್ ಸರ್ದೇಸಾಯಿ, ಚಿನ್ಮಯ್ ಸುತಾರ್, ರುದ್ರ ದಾಂಡೆ, ಶ್ರೇಯಸ್ ಗೌರವ್, ಸಲ್ಮಾನ್ ಖಾನ್, ಅಭಿಮನ್ಯು ವಾಶಿಷ್ಠ, ಮಿನದ್ ಮಂಜ್ರೇಕರ್, ಅರ್ಜುನ್ ತೆಂಡುಲ್ಕರ್, ಸಾಕ್ಷಂ ಜಾ