ಖಾಲಿ ಕ್ರೀಡಾಂಗಣಗಳಲ್ಲಿ ಕ್ರಿಕೆಟ್ ಆಯೋಜನೆ: ತುಟಿ ಬಿಚ್ಚಿದ ಕೊಹ್ಲಿ

Suvarna News   | Asianet News
Published : May 09, 2020, 05:37 PM IST
ಖಾಲಿ ಕ್ರೀಡಾಂಗಣಗಳಲ್ಲಿ ಕ್ರಿಕೆಟ್ ಆಯೋಜನೆ: ತುಟಿ ಬಿಚ್ಚಿದ ಕೊಹ್ಲಿ

ಸಾರಾಂಶ

ಕೊರೋನಾ ವೈರಸ್‌ನಿಂದಾಗಿ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಹೀಗಿರುವಾಗಲೇ ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಯೋಜನೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹೀಗಿರುವಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ತುಟಿ ಬಿಚ್ಚಿದ್ದಾರೆ.

ನವ​ದೆ​ಹ​ಲಿ(ಮೇ.09)​: ಖಾಲಿ ಕ್ರೀಡಾಂಗಣಗಳಲ್ಲಿ ಕ್ರಿಕೆಟ್‌ ನಡೆ​ಸುವ ಚಿಂತನೆಯನ್ನು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬೆಂಬಲಿಸಿ​ದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕ್ರಿಕೆಟ್‌ ಚಟು​ವ​ಟಿಕೆ ಸ್ಥಗಿತಗೊಂಡಿದ್ದು, ಪರಿ​ಸ್ಥಿತಿ ಸುಧಾ​ರಿ​ಸಿದ ಬಳಿಕ ಪಂದ್ಯ​ಗ​ಳನ್ನು ನಡೆ​ಸುವ ಬಗ್ಗೆ ಚರ್ಚೆ ನಡೆ​ಯು​ತ್ತಿದೆ. 

‘ ಅಭಿ​ಮಾ​ನಿ​ಗ​ಳಿ​ಲ್ಲದೆ ಅಡು​ವುದು ಕಷ್ಟ. ಕ್ರಿಕೆಟ್‌ ತನ್ನ ಜಾದೂ ಕಳೆ​ದು​ಕೊ​ಳ್ಳ​ಲಿದೆ. ಆದರೆ ಸದ್ಯದ ಪರಿ​ಸ್ಥಿತಿಯಲ್ಲಿ ಅದೇ ಸೂಕ್ತ’ ಎಂದು ಕೊಹ್ಲಿ ಹೇಳಿ​ದ್ದಾರೆ.  ಟಿ20 ವಿಶ್ವ​ಕಪ್‌ ಆಯೋ​ಜನೆಗೆ ಹಸಿರು ನಿಶಾನೆ ದೊರೆ​ಯ​ಬೇ​ಕಿ​ರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ತಿಂಗ​ಳಲ್ಲಿ ಕ್ರಿಕೆಟ್‌ ಪಂದ್ಯ​ಗ​ಳನ್ನು ಆರಂಭಿ​ಸ​ಬೇ​ಕಾದ ಅನಿ​ವಾ​ರ್ಯ​ತೆ ಎಲ್ಲಾ ತಂಡ​ಗ​ಳಿಗೂ ಇದೆ. ಹೀಗಾಗಿ, ಖಾಲಿ ಕ್ರೀಡಾಂಗಣಗ​ಳಲ್ಲಿ ಪಂದ್ಯ ನಡೆ​ಸ​ಲು ಬಹು​ತೇಕ ಎಲ್ಲಾ ರಾಷ್ಟ್ರಗಳ ಕ್ರಿಕೆ​ಟಿ​ಗರು ಒಲವು ತೋರಿ​ದ್ದಾರೆ.

ಧೋನಿ, ಕೊಹ್ಲಿಗಿಂತ ಸೌರವ್ ಗಂಗೂಲಿ ನಾಯಕತ್ವವೇ ಬೆಸ್ಟ್; ನೆಹ್ರಾ ಹೇಳಿದ್ರು ಕಾರಣ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊರೋನಾ ಸಂಕಷ್ಟಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳಲ್ಲಿ ಕೊರೋನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲೇ ಮನೆಯಲ್ಲೇ ಇರಿ ಎಂದು ಜನರಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ. 

ಜಗತ್ತಿನಾದ್ಯಂತ ಕೊರೋನಾದಿಂದಾಗಿ ಜನಜೀವನ ಮಾತ್ರವಲ್ಲದೇ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಈ ವರ್ಷದ ಜುಲೈನಲ್ಲಿ ನಡೆಯಬೇಕಿದ್ದ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಈಗಾಗಲೇ ಒಂದು ವರ್ಷ ಮುಂದೂಡಲ್ಪಟ್ಟಿದೆ. ಇನ್ನು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡಾ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!