Ind vs NZ: ಸತತ ಎರಡನೇ ಶತಕ ಚಚ್ಚಿದ ಶುಭ್‌ಮನ್‌ ಗಿಲ್‌..!

Published : Jan 18, 2023, 03:43 PM ISTUpdated : Jan 18, 2023, 04:08 PM IST
Ind vs NZ: ಸತತ ಎರಡನೇ ಶತಕ ಚಚ್ಚಿದ ಶುಭ್‌ಮನ್‌ ಗಿಲ್‌..!

ಸಾರಾಂಶ

ಶುಭ್‌ಮನ್ ಗಿಲ್ ಖಾತೆಗೆ ಮತ್ತೊಂದು ಶತಕ ಸೇರ್ಪಡೆ ಕೇವಲ 87 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದ ಗಿಲ್‌ ಸತತ ಎರಡನೇ ಏಕದಿನ ಶತಕ ಬಾರಿಸಿದ ಟೀಂ ಇಂಡಿಯಾ ಓಪನ್ನರ್  

ಹೈದರಾಬಾದ್‌(ಜ.18): ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ ಖಾತೆಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ಲಂಕಾ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಚಚ್ಚಿದ್ದ ಶುಭ್‌ಮನ್ ಗಿಲ್, ಇದೀಗ, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಮತ್ತೊಂದು ಮೂರಂಕಿ ಇನಿಂಗ್ಸ್‌ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಗಿಲ್ ಕೇವಲ 87 ಎಸೆತಗಳನ್ನು ಎದುರಿಸಿ ವೃತ್ತಿಜೀವನದ ಮೂರನೇ ಏಕದಿನ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟೀಂ ಇಂಡಿಯಾ 30 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 185 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಎಚ್ಚರಿಕೆಯ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 60 ರನ್‌ಗಳ ಜತೆಯಾಟ ನಿಭಾಯಿಸಿದರು. ರೋಹಿತ್ ಶರ್ಮಾ 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ(8) ಹಾಗೂ ಇಶಾನ್ ಕಿಶನ್‌(5) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಗಿಲ್ ಶತಕ ಸಂಭ್ರಮ: ಲಂಕಾ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ 116 ರನ್ ಬಾರಿಸಿದ್ದ ಗಿಲ್, ಇದೀಗ ಕಿವೀಸ್‌ ಎದುರು ಅದೇ ಲಯವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿಯಾದರು. ಆರಂಭದಲ್ಲೇ ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ, ಭಾರತ ತಂಡಕ್ಕೆ ಗಿಲ್‌ ಸಮಯೋಚಿತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಗಿಲ್‌ ಕೇವಲ 87 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.

ಕೆ ಎಲ್ ರಾಹುಲ್ ದಾಖಲೆ ಮುರಿದ ಗಿಲ್‌: ಇದು ಏಕದಿನ ಕ್ರಿಕೆಟ್‌ನಲ್ಲಿ ಶುಭ್‌ಮನ್ ಗಿಲ್ ಬಾರಿಸಿದ ಮೂರನೇ ಏಕದಿನ ಶತಕವಾಗಿದ್ದು, ಭಾರತ ಪರ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 3 ಶತಕ ಬಾರಿಸಿದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಶುಭ್‌ಮನ್‌ ಗಿಲ್ ಪಾತ್ರರಾಗಿದ್ದಾರೆ. ಶುಭ್‌ಮನ್‌ ಗಿಲ್‌ ಕೇವಲ 19 ಇನಿಂಗ್ಸ್‌ಗಳನ್ನಾಡಿ 3 ಶತಕ ಸಿಡಿಸುವ ಮೂಲಕ ಕೆ ಎಲ್ ರಾಹುಲ್ ಅವರ ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ. ಕೆ ಎಲ್ ರಾಹುಲ್‌ 24 ಇನಿಂಗ್ಸ್‌ಗಳನ್ನಾಡಿ 3 ಶತಕ ಪೂರೈಸಿದ್ದರು. ಇನ್ನು ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಕೇವಲ 17 ಇನಿಂಗ್ಸ್‌ಗಳನ್ನಾಡಿ 3 ಶತಕ ಪೂರೈಸಿದ್ದರು.

ICC ODI Rankings: ಲಂಕಾ ಎದುರು ಘರ್ಜಿಸಿದ ವಿರಾಟ್ ಕೊಹ್ಲಿ, ಸಿರಾಜ್‌ಗೆ ರ‍್ಯಾಂಕಿಂಗ್‌ ಭಡ್ತಿ..!

ಬಾಬರ್ ಅಜಂ, ವೀವ್ ರಿಚರ್ಡ್ಸ್ ದಾಖಲೆಯೂ ಬ್ರೇಕ್:  19ನೇ ಏಕದಿನ ಇನಿಂಗ್ಸ್ ಆಡುತ್ತಿರುವ ಶುಭ್‌ಮನ್‌ ಗಿಲ್‌, 109 ರನ್ ಬಾರಿಸುತ್ತಿದ್ದಂತೆಯೇ, ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಹಾಗೂ ಒಟ್ಟಾರೆ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಫಖರ್ ಜಮಾನ್‌ ಕೇವಲ 18 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿದ್ದರು. ಇನ್ನು ಇಮಾಮ್ ಉಲ್‌ ಹಕ್ ಹಾಗೂ ಶುಭ್‌ಮನ್‌ ಗಿಲ್‌ 19 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್‌ ಪೂರೈಸುವ ಮೂಲಕ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಇನ್ನು ವೀವ್ ರಿಚರ್ಡ್ಸ್‌, ಕೆವಿನ್‌ ಪೀಟರ್‌ಸನ್, ಜೋನಾಥನ್ ಟ್ರಾಟ್, ಕ್ವಿಂಟನ್ ಡಿ ಕಾಕ್, ಬಾಬರ್ ಅಜಂ, ರಾಸ್ಸಿ ವ್ಯಾನ್‌ ಡರ್‌ ಡುಸೇನ್‌ 21 ಇನಿಂಗ್ಸ್‌ಗಳನ್ನಾಡಿ ಸಾವಿರ ರನ್ ಪೂರೈಸಿದ್ದರು. ಇನ್ನು ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ 24 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್‌ ಪೂರೈಸಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!