ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್, ಇತ್ತೀಚೆಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ವೆಂಕಟರಮಣ ಸ್ವಾಮಿಯ ಶುಭ ಮುಂಜಾನೆಯ ಪೂಜೆಯಲ್ಲಿ ಅವರು ಪತ್ನಿಯೊಂದಿಗೆ ಭಾಗವಹಿಸಿದ್ದರು.
ಹೈದರಾಬಾದ್ (ಸೆ.28): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಇತ್ತೀಚೆಗೆ ತಿರುಮಲಕ್ಕೆ ಭೇಟಿ ನೀಡಿದ್ದರು. ತಿರುಮಲ ದೇವರ ದರ್ಶನ ಪಡೆದು ಬೆಳಗಿನ ಸೇವೆಯಲ್ಲಿ ಅವರು ಪತ್ನಿ ಸಮೇತ ಪಾಲ್ಗೊಂಡಿದ್ದರು. ದರ್ಶನದ ನಂತರ ದೇವಸ್ಥಾನದ ರಂಗನಾಯಕರ ಮಂಟಪದಲ್ಲಿ ವೈದಿಕರು ಗೌತಮ್ ಗಂಭೀರ್ ಹಾಗೂ ಅವರ ಪತ್ನಿ ನತಾಶಾ ಜೈನ್‌ಗೆ ವೇದಾಶೀರ್ವಾದ ಮಾಡಿದರು. ಈ ವೇಳೆ ದೇಗುಲದ ಅಧಿಕಾರಿಗಳು ಸ್ಮರಣಿಕೆ ನೀಡಿದ್ದಲ್ಲದ,ೆ ತೀರ್ಥ ಪ್ರಸಾದ ನೀಡಿ ದಂಪತಿಗಳನ್ನು ಗೌರವಿಸಿದರು. ಹಲವು ಕ್ರಿಕೆಟ್ ಅಭಿಮಾನಿಗಳು ಗಂಭೀರ್ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು, ಶ್ರೀವಾರಿಯ ಅದ್ಬುತ ದರ್ಶನಕ್ಕೆ ಗಂಭೀರ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಗಂಭೀರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 1.4 ಶತಕೋಟಿ ಭಾರತೀಯರ ಪ್ರಾರ್ಥನೆಯೊಂದಿಗೆ ಭಾರತ ವಿಶ್ವಕಪ್‌ನಲ್ಲಿ ವಿಜಯಶಾಲಿ ತಂಡವಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಭಾರತ ಹಲವು ಬಾರಿ ವಿಶ್ವಕಪ್ ಗೆಲ್ಲುವ ಅವಕಾಶಗಳನ್ನು ಕಳೆದುಕೊಂಡಿದೆ. ಅದಕ್ಕೆ, ಕಾರಣ ಇಡೀ ತಂಡ ಏಕಕಾಲದಲ್ಲಿ ಉತ್ತಮ ಆಟವಾಡಬೇಕು. ವಿಶ್ವಕಪ್‌ನಂಥ ಟೂರ್ನಿಗಳಲ್ಲಿ ಕೇವಲ ವೈಯಕ್ತಿಕ ನಿರ್ವಹಣೆಯಿಂದ ಯಶಸ್ಸು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
undefined
ಮುಂದಿನ ತಿಂಗಳು ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದ್ದು, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಸದ್ಯ ಟೀಂ ಇಂಡಿಯಾ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ.
Karnataka Election Results 2023: ಗಂಭೀರ್ ರೀತಿ ಶಟ್‌ಅಪ್ ಎಂದ ರಾಹುಲ್, ಸೋಶಿಯಲ್ ಮೀಡಿಯಾದಲ್ಲಿ ವೈರಲ್!
ಏಕದಿನ ವಿಶ್ವಕಪ್ ವೇಳೆ ನೇರಪ್ರಸಾರ ವಾಹಿನಿಯ ಅಧಿಕೃತ ವಿಶ್ಲೇಷಕರಾಗಿ ಗೌತಮ್ ಗಂಭೀರ್ ಕೆಲಸ ಮಾಡಲಿದ್ದಾರೆ. ಅಧಿಕೃತ ನೇರಪ್ರಸಾರ ವಾಹಿನಿಯಲ್ಲಿ ಈಗಾಗಲೇ ವಿಶ್ವಕಪ್ ಸಂಬಂಧಿತ ಕಾರ್ಯಕ್ರಮಗಳಲ್ಲಿ ಗಂಭೀರ್ ಕಾಣಿಸಿಕೊಂಡಿದ್ದು, ವಿಶ್ವಕಪ್‌ನಲ್ಲಿ ಭಾಗವಹಿಸಿರುವ ತಂಡಗಳ ಬಲ-ದೌರ್ಬಲ್ಯಗಳನ್ನು ವಿವರಿಸುವ ಕೆಲಸ ಮಾಡುತ್ತಿದ್ದಾರೆ.
ಲಕ್ನೋನಲ್ಲಿ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬೈದಾಡಿಕೊಂಡಿದ್ದೇನು..? ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ!