
ನವದೆಹಲಿ (ಸೆ.19) ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ತೆರಳಲು ಸಜ್ಜಾಗಿದೆ. ಆಟಗಾರರು ಬ್ಯಾಗ್ ಪ್ಯಾಕ್ ಮಾಡಿ ಸಿದ್ದರಾಗಿದ್ದಾರೆ. ಆದರೆ ಟೀಂ ಇಂಡಿಯಾದ ಹಲವು ಕ್ರಿಕೆಟಿಗರಿಗೆ ಇನ್ನು ಜರ್ಸಿ ತಲುಪಿಲ್ಲ. ಏಷ್ಯನ್ ಗೇಮ್ಸ್ ಕ್ರೀಡಾಕೂಡದ ತಯಾರಿ ನಡುವೆ ಡ್ರೆಸ್ಸಿಂಗ್ ರೂಂ ಸಮಸ್ಯೆ, ಹೊಟೆಲ್ ಸಮಸ್ಯೆ, ಆತಿಥ್ಯ ಸಮಸ್ಯೆ ತಲೆದೋರಿತ್ತು. ಈ ಸಮಸ್ಯೆ ಬಗೆಹರಿಸಿದ ಬೆನ್ನಲ್ಲೇ ಇದೀಗ ಜರ್ಸಿ ಸಮಸ್ಯೆಗಳು ಕಾಣಿಸಿಕೊಂಡಿದೆ. ಜರ್ಸಿ ತಲುಪದ ಕಾರಣ ಪ್ರಯಾಣ ವಿಳಂಬವಾಗುವ ಸಾಧ್ಯತೆ ಇದೆ.
ಭಾನುವಾರ ಬೆಳಗ್ಗೆ ಟೀಂ ಇಂಡಿಯಾ ಏಷ್ಯನ್ ಗೇಮ್ಸ್‌ಗಾಗಿ ಜಪಾನ್‌ನ ನಗೋಯಾಗೆ ಪ್ರಯಾಣ ಬೆಳೆಸಬೇಕಿದೆ. ಆದರೆ ಟೀಂ ಇಂಡಿಯಾದ ಹಲವು ಕ್ರಿಕೆಟಿಗರಿಗೆ ಇದುವರಗೆ ಜರ್ಸಿ ತಲುಪಿಲ್ಲ. ಒಲಿಂಪಿಕ್ ಸಂಸ್ಥೆಯ ಕಿಟ್ ಪೂರೈಕೆದಾರರಾದ JSW ಇನ್‌ಸ್ಪೈರ್ ಹಾಗೂ ಬಿಸಿಸಿಐ ನಡುವಿನ ಸಂವನ ಕೊರತೆಯಿಂದ ಸಮಸ್ಯೆ ತಲೆದೋರಿದೆ ಎಂದು ವರಿದಿಯಾಗಿದೆ.
ಜಪಾನ್ ಆಯೋಜಿಸುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಎರಡು ಭಿನ್ನ ಜರ್ಸಿ ಬಳಸಲಿದೆ. ಸೆಪ್ಟೆಂಬರ್ 22 ರಂದು ಜಪಾನ್ ವಿರುದ್ದ ಏಕೈಕ ಟಿ20 ಪಂದ್ಯ ಆಡಲಿದೆ. ಈ ಪಂದ್ಯಕ್ಕೆ ಭಾರತ ನಿಯಮಿತ ಕಿಟ್ ಧರಿಸಿ ಕಣಕ್ಕಿಳಿಯಲಿದೆ. ಇನ್ನು ಸೆಪ್ಟೆಂಬರ್ 28 ರಿಂದ ಆರಂಭಗೊಳ್ಳುವ ಪುರುಷರ ಕ್ವಾರ್ಟರ್ ಫೈನಲ್ ಪಂದ್ಯದಿಂದ ಏಷ್ಯನ್ ಗೇಮ್ಸ್ ಅಧಿಕೃತ ಜರ್ಸಿ ಧರಿಸಿ ಆಡಲಿದೆ. ಎರಡು ಜರ್ಸಿಗಳನ್ನು ಈಗಾಗಲೇ ಅನಾವರಣ ಮಾಡಲಾಗಿತ್ತು. ಆದರೆ ಕಿಟ್ ತಲುಪದ ಕಾರಣ ಸಮಸ್ಯೆ ತಲೆದೋರಿದೆ.
ಒಲಿಂಪಿಕ್ ಸಂಸ್ಥೆಯ ಕಿಟ್ ಪೂರೆಕೆದಾರ JSW ಇನ್‌ಸ್ಪೈರ್ ಸಮಸ್ಯೆ ಕೇವಲ ಕ್ರಿಕೆಟ್‌ಗೆ ಮಾತ್ರವಲ್ಲ ಇತರ ಕ್ರೀಡಾಪಟುಗಳಿಗೂ ತಟ್ಟಿದೆ. ಏಷ್ಯನ್ ಗೇಮ್ಸ್ ಶಾಟ್‌ಪುಟ್ ಚಾಂಪಿಯನ್ ತಜಿಂದರ್ ಪಾಲ್ ಸಿಂಗ್ ತೂರ್ ಕಿಟ್ ಸಿಗದೆ ಪರದಾಡಿದ್ದಾರೆ. ಇಷ್ಟೇ ಅಲ್ಲ ಭಾರತ ಕ್ರೀಡಾಪಟುಗಳ ಧ್ವಜವಾಹಕಾರಿ ಮುನ್ನಡಯಬೇಕಿದ್ದ ತಜಿಂದರ್ ಪಾಲ್‌ಗೆ ಕಿಟ್ ಸಿಗದೆ ಕಾರಣ ದೂರ ಉಳಿಯಬೇಕಾಯಿತು. ತಜೀಂದರ್ ಪಾಲ್ ಬದಲು ಕಬಡ್ಡಿ ಪಟು ಪವನ್ ಶೆಹ್ರಾವತ್, ಮನು ಭಾತರ್ ಜೊತೆ ಹೆಜ್ಜೆ ಹಾಕಿದರು.
ಏಷ್ಯನ್ ಗೇಮ್ಸ್ ತಯಾರಿ ಆರಂಭದಲ್ಲೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸರಿಯಾಗ ಡ್ರೆಸ್ಸಿಂಗ್ ರೂಂ ಇಲ್ಲದೆ ಕ್ರೀಡಾಕೂಟದ ಟೆಂಟ್‌ನಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಗಿತ್ತು. ಡ್ರೆಸ್ಸಿಂಗ್ ರೂಂನಲ್ಲಿ ಶೌಚಾಲಯ ವ್ಯವಸ್ಥೆಗಳಿಲ್ಲ, ಸರಿಯಾದ ಹೊಟೆಲ್ ಇಲ್ಲದೆ ಆತಂಕ ಎದುರಿಸಿತ್ತು. ಬಿಸಿಸಿಐ ಮಧ್ಯಪ್ರವೇಶಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿತ್ತು. ಇದೀಗ ಕಿಟ್ ಸಮಸ್ಯೆ ಕಾಣಿಸಿಕೊಂಡಿದ್ದು, ಆಟಗಾರರಿಗೂ ಕಿರಿಕಿರಿ ತಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.