ಕೊರೋನಾ ಎಫೆಕ್ಟ್: ಬಂಗಾಳ ಕ್ರಿಕೆಟ್‌ ಸಂಸ್ಥೆಯಿಂದ ವಿಮೆ

By Suvarna News  |  First Published Mar 24, 2020, 3:49 PM IST

ಕೊರೋನಾ ಭೀತಿಗೆ ಕಂಗಾಲಾಗಿರುವ ಬಂಗಾಳ ಕ್ರಿಕೆಟ್‌ ಸಂಸ್ಥೆ ತಮ್ಮ ಅಧಿಕಾರಿಗಳಿಗೆ ಹಾಗೂ ಆಟಗಾರರಿಗೆ ವಿಮೆ ಮಾಡಿಸುವ ಮೂಲಕ ಗಮನ ಸೆಳೆದಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 


ಕೋಲ್ಕತಾ(ಮಾ.24): ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನಿಂದಾಗಿ ಎಲ್ಲೆಡೆ ಭೀತಿ ಹೆಚ್ಚುತ್ತಿದ್ದು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ತನ್ನ ಆಟಗಾರರು, ಸಿಬ್ಬಂದಿಗೆ ವಿಮೆ ಮಾಡಿಸಿದೆ. ಈ ಕ್ರಮ ಕೈಗೊಂಡ ಭಾರತದ ಮೊದಲ ಕ್ರಿಕೆಟ್‌ ಸಂಸ್ಥೆ ಎನ್ನುವ ಹಿರಿಮೆಗೆ ಪಾತ್ರವಾಗಿದೆ. 

ಕೊರೋನಾ ವಿರುದ್ಧ ಸೆಣಸಲು ಪುದುಚೇರಿ ಕ್ರಿಕೆಟ್‌ ಸಂಸ್ಥೆಯಿಂದ 'ಅಳಿಲು ಸೇವೆ'

Tap to resize

Latest Videos

ಮಹಿಳಾ ಕ್ರಿಕೆಟಿಗರು, ರಾಜ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಅಂಪೈರ್‌, ರೆಫ್ರಿಗಳು, ಸ್ಕೋರರ್‌ಗಳು, ಮಾಜಿ ಕ್ರಿಕೆಟಿಗರು ಸೇರಿ ಒಟ್ಟು 3,200 ಮಂದಿಗೆ ಅನುಕೂಲವಾಗಲಿದೆ ಎಂದು ಸಿಎಬಿ ಅಧ್ಯಕ್ಷ ಅಭಿಷೇಕ್‌ ದಾಲ್ಮಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಬಂಗಾಳ ಕ್ರಿಕೆಟ್‌ ಸಂಸ್ಥೆಗೆ ಸೇರಿದ ಯಾರೊಬ್ಬರೂ ಆತಂಕಪಡುವುದು ಬೇಕಿಲ್ಲ. ಆದರೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು’ ಎಂದು ಅಭಿಷೇಕ್‌ದ ಹೇಳಿದ್ದಾರೆ.

ಕೊರೋನಾ ವಿರುದ್ಧ ಭಾರತದ ಹೋರಾಟಕ್ಕೆ WHO ಮೆಚ್ಚುಗೆ

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಬಂಗಾಳ ಕ್ರಿಕೆಟ್‌ ಸಂಸ್ಥೆ ಶನಿವಾರದವರೆಗೂ ಬಾಗಿಲನ್ನು ಮುಚ್ಚಿತ್ತು. ಇದೀಗ ರಾಜ್ಯ ಸರ್ಕಾರದ ಸುತ್ತೋಲೆಯಂತೆ ಮಾರ್ಚ್ 27ರವರೆಗೂ ಸಂಸ್ಥೆಯ ಬಾಗಿಲು ಮುಚ್ಚಲು ತೀರ್ಮಾನಿಸಿದೆ. 
 

click me!