
ಬೆಂಗಳೂರು(ಜೂ.26): ಭಾರತದ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್, ಕ್ರಿಕೆಟ್ನಲ್ಲಿ ಮಾತ್ರ ಅಲ್ಲ. ಬಿಸಿನೆಸ್ನಲ್ಲೂ ಎಕ್ಸ್ಪರ್ಟ್ಸ್. ವಿವಿಧ ಕ್ಷೇತ್ರಗಳಲ್ಲಿ ಕೋಟಿ. ಕೋಟಿ ಹಣ ಹೂಡಿ ಹಾಲಿ ಕ್ರಿಕೆಟರ್ಸ್ ಸಕ್ಸಸ್ ಕಂಡಿದ್ದಾರೆ. ವಿಶೇಷ ಅಂದ್ರೆ, ಬಹುತೇಕ ಆಟಗಾರರು ರೆಸ್ಟೋರೆಂಟ್ ಬಿಸಿನೆಸ್ ನಡೆಸ್ತಿದ್ದಾರೆ. ಇತ್ತೀಚೆಗೆ ಸುರೇಶ್ ರೈನಾ ಆ ಲಿಸ್ಟ್ಗೆ ಸೇರ್ಪಡೆಯಾಗಿದ್ದಾರೆ.
ನೆದರ್ಲೆಂಡ್ ರಾಜಧಾನಿ ಆಮ್ಸ್ಟರ್ ಡ್ಯಾಂನಲ್ಲಿ ಸುರೇಶ್ ರೈನಾ(Suresh Raina), ತಮ್ಮದೇ ಹೆಸರಿನಲ್ಲಿ ರೆಸ್ಟೊರೆಂಟ್ವೊಂದನ್ನ ಆರಂಭಿಸಿದ್ದಾರೆ. ಆ ಮೂಲಕ ಬಿಸಿನೆಸ್ ಮ್ಯಾನ್ ಆಗಿ ಬದಲಾಗಿದ್ದಾರೆ.
ದೇಶದ ಮಹಾನಗರಗಳಲ್ಲಿ ರೆಸ್ಟೊರೆಂಟ್ ನಡೆಸುತ್ತಿರೋ ಕೊಹ್ಲಿ..!
ಸುರೇಶ್ ರೈನಾ ಮಾತ್ರವಲ್ಲ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ(Virat Kohli)ಯು ರೆಸ್ಟೋರೆಂಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ONE8 ಕಮ್ಯೂನಿ ಹೆಸರಿನಲ್ಲಿ ರೆಸ್ಟೊರೆಂಟ್ ನಡೆಸುತ್ತಿದ್ದಾರೆ. ದೆಹಲಿ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಕೊಹ್ಲಿಯ ರೆಸ್ಟೋರೆಂಟ್ಗಳಿವೆ. ಈ ರೆಸ್ಟೊರೆಂಟ್ನಲ್ಲಿ ವಿವಿಧ ದೇಶಗಳ ಪ್ರಸಿದ್ಧ ಖಾದ್ಯಗಳು, ಡ್ರಿಂಕ್ಸ್ ಸರ್ವ್ ಮಾಡಲಾಗುತ್ತೆ.
10 ವರ್ಷದ ಹಿಂದೆಯೆ ರೆಸ್ಟೋರೆಂಟ್ ಆರಂಭಿಸಿದ್ದ ಜಡ್ಡು..!
ಟೀಂ ಇಂಡಿಯಾದ ರಾಕ್ ಸ್ಟಾರ್, ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಸಹ ಹೋಟೆಲ್ ಉದ್ಯಮ ಹೊಂದಿದ್ದಾರೆ. 10 ವರ್ಷಗಳ ಹಿಂದೆಯೆ ಜಡೇಜಾ, ರಾಜ್ಕೋಟ್ನಲ್ಲಿ ಜಡ್ಡು ಫುಡ್ ಫೀಲ್ಡ್ ಹೆಸರಿನ ರೆಸ್ಟೊರೆಂಟ್ ಅರಂಭಿಸಿದ್ರು. ಇಲ್ಲಿ ಇಂಡಿಯನ್, ಮೆಕ್ಸಿಕನ್, ಥಾಯ್, ಕಾಂಟಿನೆಂಟಲ್ ಮತ್ತು ಪಂಜಾನ್ ಡಿಶ್ಗಳು ಸಿಗುತ್ವೆ.
ರೆಸ್ಟೋರೆಂಟ್ ಓಪನ್ ಮಾಡಿದ ಸುರೇಶ್ ರೈನಾ..! ಸಂತಸ ಹಂಚಿಕೊಂಡ ಮಾಜಿ ಕ್ರಿಕೆಟಿಗ
ವಿಶ್ವಕಪ್ ವಿಜೇತ ಕ್ಯಾಪ್ಟನ್ ಕಪಿಲ್ ದೇವ್(Kapil Dev), ಬಿಹಾರದ ಪಾಟ್ನಾದಲ್ಲಿ ಕಪಿಲ್ ಇಲೆವೆನ್ ಹೆಸರಿನ ರೆಸ್ಟೋರೆಂಟ್ಗೆ ಮಾಲೀಕರಾಗಿದ್ದಾರೆ. ಕಪಿಲ್ ದೇವ್ 2008ರಲ್ಲೇ ಈ ರೆಸ್ಟೋರೆಂಟ್ ನ ಆರಂಭಿಸಿದ್ದಾರೆ. ಇಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ವಸ್ತುಗಳು, ಟ್ರೋಫಿಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಈ ರೆಸ್ಟೋರೆಂಟ್ ಒಳ ಹೊಕ್ಕರೆ ಮೈದಾನದೊಳಗೆ ಎಂಟ್ರಿ ನೀಡಿದಂತಾಗುತ್ತೆ.
ಇವರಷ್ಟೇ ಅಲ್ಲ, ಟೀಂ ಇಂಡಿಯಾ(Team India)ದ ಮಾಜಿ ವೇಗಿ ಜಹೀರ್ ಖಾನ್(Zaheer Khan). ಶ್ರೀಲಂಕಾದ ಮಹೇಲಾ ಜಯವರ್ಧನೆ- ಕುಮಾರ್ ಸಂಗಾಕ್ಕರ ಕೂಡ ರೆಸ್ಟೋರೆಂಟ್ ರನ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಆಟದ ಮೂಲಕ ಕೋಟಿ. ಕೋಟಿ ಗಳಿಸೋ ಕ್ರಿಕೆಟರ್ಸ್, ಬಿಸಿನೆಸ್ ಮೂಲಕವೂ ಒಳ್ಳೆ ದುಡ್ಡು ಮಾಡ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.