ಸೈನ್ಯ ಸೇರಬೇಕಾಗಿದ್ದ ಮುಖೇಶ್‌ ಕುಮಾರ್‌ ಕ್ರಿಕೆಟರ್​ ಆದದ್ದೇ ರೋಚಕ..!

By Suvarna News  |  First Published Jun 26, 2023, 4:51 PM IST

2ನೇ ಬಾರಿ ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಟ್ಯಾಕ್ಸಿವಾಲಾ
ಪಶ್ಚಿಮ ಬಂಗಾಳ ಮೂಲದ ವೇಗಿ ಮುಕೇಶ್‌ ಕುಮಾರ್‌ಗೆ ಸ್ಥಾನ
ವಿಂಡೀಸ್ ಎದುರಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ


ಮುಂಬೈ(ಜೂ.26): ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆ ಸಮಿತಿ ಟೀಂ ಇಂಡಿಯಾವನ್ನ ಆಯ್ಕೆ ಮಾಡಿದೆ. ಈ ಸರಣಿಯಿಂದ  ಸೀನಿಯರ್ ಪೇಸರ್ ಮೊಹಮ್ಮದ್ ಶಮಿಗೆ ರೆಸ್ಟ್ ನೀಡಲಾಗಿದೆ. ಮೊಹಮ್ಮದ್ ಶಮಿ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಮತ್ತೊಬ್ಬ ವೇಗಿ ಮುಕೇಶ್‌ ಕುಮಾರ್​ಗೆ ಚಾನ್ಸ್ ನೀಡಿದೆ. ಈ ಹಿಂದೆಯೆ ಮುಖೇಶ್​ ಟೀಂ ಇಂಡಿಯಾಗೆ ಆಯ್ಕೆಯಾಗಿದ್ರು. ಆದ್ರೆ, ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗಲಿಲ್ಲ. ದೇಶೀಯ ಕ್ರಿಕೆಟ್ ಮತ್ತು IPL​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟ್ಯಾಕ್ಸಿ ಚಾಲಕನ ಮಗನಿಗೆ ಆಯ್ಕೆ ಸಮಿತಿ ಮತ್ತೆ ಅವಕಾಶ ನೀಡಿದೆ. 

ಯೆಸ್, ಬಡ ಕುಟುಂಬಕ್ಕೆ ಸೇರಿದ ಮುಕೇಶ್‌ ಕುಮಾರ್​ ಒಬ್ಬ ಟ್ಯಾಕ್ಸಿವಾಲಾನ ಮಗ. ಮುಕೇಶ್‌ ಕುಮಾರ್ ತಂದೆ ಕಾಶೀನಾಥ್ ಸಿಂಗ್ ಕೋಲ್ಕತ್ತಾದಲ್ಲಿ ಟ್ಯಾಕ್ಸಿ ಚಾಲಕರಾಗಿದ್ರು. ದೇಶೀಯ ಕ್ರಿಕೆಟ್​ನಲ್ಲಿ ಪಶ್ಚಿಮ ಬಂಗಾಳ ಪರ ಆಡೋ ಮುಖೇಶ್​, ಮೂಲತ: ಬಿಹಾರದವರು. ಬಿಹಾರ್​ದ ಗೋಪಾಲ್ ಗಂಜ್​ ಮುಖೇಶ್ ಸ್ವಂತ ಊರು. 

Latest Videos

undefined

ಸೈನ್ಯ ಸೇರಬೇಕಾಗಿದ್ದವ ಕ್ರಿಕೆಟರ್​ ಆದದ್ದೇ ರೋಚಕ..!

ಮುಕೇಶ್​ ಚಿಕ್ಕಂದಿನಲ್ಲೇ ಕ್ರಿಕೆಟರ್ ಆಗಬೇಕು ಅಂತ ಕನಸು ಕಂಡಿದ್ರು. ಆದ್ರೆ, ಬಿಹಾರದ ಯುವಕರು ಹೆಚ್ಚಾಗಿ ಭಾರತೀಯ ಸೈನ್ಯ ಸೇರಿಕೊಳ್ತಾರೆ. ಮಖೇಶ್​ನ ಕೂಡ ಆರ್ಮಿಗೆ ಸೇರಿಸಬೇಕನ್ನೋದು ಅವ್ರ ತಂದೆಯ ಆಸೆಯಾಗಿತ್ತು. ಇದರಿಂದ ಮುಕೇಶ್ CRPF ಉದ್ಯೋಗಕ್ಕಾಗಿ ಪರೀಕ್ಷೆಯನ್ನೂ ಬರಿತಾರೆ. ಆದ್ರೆ, ಕೆಲ ಮೆಡಿಕಲ್ ಟೆಸ್ಟ್​ನಲ್ಲಿ  ಪೇಲ್ ಆಗಿದ್ದರಿಂದ, ​ಕುಟುಂಬದವರ ಆಸೆ ಪೂರೈಸಲು ಮುಕೇಶ್​​ಗೆ ಸಾಧ್ಯವಾಗ್ಲಿಲ್ಲ. ಇದರಿಂದ ಮುಕೇಶ್ ಕ್ರಿಕೆಟ್​ ಮೇಲೆ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡ್ರು. 

2009ರಲ್ಲಿ ಬಿಹಾರ್ ಅಂಡರ್​ 19 ತಂಡಕ್ಕೆ ಮುಕೇಶ್ ಎಂಟ್ರಿ ನೀಡಿದ್ರು. ಆದ್ರೆ, ಮುಕೇಶ್ ತಂದೆಗೆ ಮಗ ಕ್ರಿಕೆಟರ್ ಆಗೋದು ಎಳ್ಳಷ್ಟು ಇಷ್ಟವಿರಲಿಲ್ಲ. ಇದರಿಂದ ಮಗನನ್ನ ಕೋಲ್ಕತ್ತಾಗೆ ಕರೆಸಿಕೊಂಡ್ರು. ಕೋಲ್ಕತ್ತಾಗೆ ಹೋದ್ರು ಮುಕೇಶ್​ ಕ್ರಿಕೆಟ್​ನ ಬಿಡಲಿಲ್ಲ. ಅಲ್ಲಿನ ಕ್ಲಬ್​ಗೆ ಸೇರಿಕೊಂಡ ಮುಕೇಶ್, ಡಿವಿಜನ್ ಲೀಗ್​ ಕ್ರಿಕೆಟ್​  ಮೂಲಕ ದಿನಕ್ಕೆ  400-500 ರೂಪಾಯಿ ಗಳಿಸಿ ತಂದೆಗೆ ನೆರವಾದ್ರು. 

Yashasvi Jaiswal: ಟೆಸ್ಟ್ ಕ್ರಿಕೆಟ್​ನಲ್ಲಿ ಅಬ್ಬರಿಸಲು ರೆಡಿಯಾದ ಪಾನಿಪೂರಿವಾಲಾ..!

2014ರಲ್ಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ವಿಷನ್ 2020 ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ನಡೆಸಿತ್ತು. ಇದು ಮುಕೇಶ್​ ಕ್ರಿಕೆಟ್​ ಕರಿಯರ್​ಗೆ ಬಿಗ್ ಟರ್ನಿಂಗ್ ಪಾಯಿಂಟ್ ಆಯ್ತು. ಬೆಂಗಾಲ್ ಟೀಂ ಬೌಲಿಂಗ್ ಕೋಚ್ ಆಗಿದ್ದ ರಣ್​ದೀಪ್ ಸಿಂಗ್, ಮುಕೇಶ್‌ ಕುಮಾರ್ ಬೌಲಿಂಗ್​ಗೆ ಫಿದಾ ಆದ್ರು. ತಕ್ಷಣವೇ ಬೆಂಗಾಲ್ ರಣಜಿ ಟೀಮ್​ಗೆ ಸೆಲೆಕ್ಟ್ ಮಾಡಿದ್ರು. 

ರಣಜಿಯಲ್ಲಿ ಖತರ್ನಾಕ್ ಬೌಲಿಂಗ್​ನಿಂದ ಮಿಂಚಿ ಮುಕೇಶ್, ಭಾರತ ಎ ತಂಡಕ್ಕೆ ಆಯ್ಕೆಯಾದ್ರು. ನ್ಯೂಜಿಲೆಂಡ್ ಎ ವಿರುದ್ಧದ ಪಂದ್ಯದಲ್ಲಿ ಮಿಂಚಿ, ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ರು. ದುರಂತ ಅಂದ್ರೆ ಮಗ ಯಶಸ್ಸನ್ನ ನೋಡಲು ಅವರ ತಂದೆಯೆ ಇಲ್ಲ. ಕಳೆದ ವರ್ಷ ಮುಕೇಶ್​ ತಂದೆಯನ್ನ ಕಳೆದುಕೊಂಡ್ರು. 

2022ರಲ್ಲಿ ನಡೆದ IPL ಮೆಗಾ ಆಕ್ಷನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಮುಕೇಶ್​​ಗೆ 5 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಳ್ತು. ಈ ಬಾರಿಯ IPL ​ನಲ್ಲಿ ಡೆಲ್ಲಿ ಪರ ಮುಖೇಶ್​ ಟೈಟ್ ಸ್ಪೆಲ್​ಗಳ ಮೂಲಕ ಮಿಂಚಿದ್ರು. ಒಟ್ಟಿನಲ್ಲಿ  ಮುಕೇಶ್ ಲೈಫ್​ ಸ್ಟೋರಿ ನಿಜಕ್ಕೂ ಎಂತವರಿಗೂ ಸ್ಫೂರ್ತಿ. ವಿಂಡೀಸ್ ನಾಡಲ್ಲೂ ಮುಕೇಶ್​ ಅದ್ಭುತ ಪ್ರದರ್ಶನ ನೀಡಲಿ, ಟೀಂ ಇಂಡಿಯಾ ಗೆಲುವಿನಲ್ಲಿ ಮಿಂಚಲಿ.

click me!