Yashasvi Jaiswal: ಟೆಸ್ಟ್ ಕ್ರಿಕೆಟ್​ನಲ್ಲಿ ಅಬ್ಬರಿಸಲು ರೆಡಿಯಾದ ಪಾನಿಪೂರಿವಾಲಾ..!

By Suvarna News  |  First Published Jun 26, 2023, 4:06 PM IST

ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಯಶಸ್ವಿ ಜೈಸ್ವಾಲ್‌
ಐಪಿಎಲ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿರುವ ಯಶಸ್ವಿ
ದ್ರಾವಿಡ್ ಆಡಿದ್ದ 3ನೇ ಕ್ರಮಾಂಕದಲ್ಲಿ ಮಿಂಚ್ತಾರಾ ಜೈಸ್ವಾಲ್..? 
 


ಬೆಂಗಳೂರು(ಜೂ.26) ಟ್ಯಾಲೆಂಟ್ ಅನ್ನೋದು ಯಾರೊಬ್ಬರ ಸ್ವತ್ತಲ್ಲ. ಸಾಧಿಸೋ ಛಲ, ಗೆಲ್ಲಲೆಬೇಕೆಂಬ ಹಠ,  ಹಾರ್ಡ್​ವರ್ಕ್, ಡೆಡಿಕೇಷನ್ ಇದ್ರೆ ಯಾರು ಏನು ಬೇಕಾದ್ರೂ ಆಗ್ಬಹುದು. ಇದಕ್ಕೆ ಜಸ್ಟ್ 21 ವರ್ಷದ ಯಶಸ್ವಿ ಜೈಸ್ವಾಲ್​ ಜೀವನವೇ ಬೆಸ್ಟ್​ ಎಕ್ಸಾಂಪಲ್.! 

ಉತ್ತರಪ್ರದೇಶದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ, ರಸ್ತೆ ಬದಿಯಲ್ಲಿ ಪಾನಿಪೂರಿ ಮಾರಾಟ ಮಾಡಿ, ಚಿಕ್ಕ ಟೆಂಟ್​ನಲ್ಲಿ ಮಲಗ್ತಿದ್ದ ಹುಡುಗ, ಇಂದು ಟೀಮ್ ಇಂಡಿಯಾ ಪರ ಮಿಂಚಲು ರೆಡಿಯಾಗಿದ್ದಾನೆ.  ಯೆಸ್, ವೆಸ್ಟ್​ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಜೈಸ್ವಾಲ್​ಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ನೀಡಲಾಗಿದೆ. IPLನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರಂಭಿಕರಾಗಿ ಅಬ್ಬರಿಸಿದ್ದ ಜೈಸ್ವಾಲ್, ರೆಡ್​ಬಾಲ್ ಕ್ರಿಕೆಟ್​​ನಲ್ಲಿ  3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾನೆ. 

Tap to resize

Latest Videos

ಟೆಸ್ಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಆಡೋದು ಅಂದ್ರೆ ಸಾಮಾನ್ಯ ಅಲ್ಲ. ಆದ್ರೆ, 21ನೇ ವಯಸ್ಸಿಗೆ ದ್ರಾವಿಡ್, ಪೂಜಾರ ಆಡಿದ್ದ ಸ್ಲಾಟ್​ನಲ್ಲಿ ಆಡೋ ಅದೃಷ್ಟ ಜೈಸ್ವಾಲ್​ಗೆ ಸಿಕ್ಕಿದೆ. ಕೆರಿಬಿಯನ್ ನಾಡಲ್ಲಿ ಜೈಸ್ವಾಲ್ ಮಿಂಚಿದ್ರೆ, ಟೆಸ್ಟ್​ ತಂಡದ ಜೈಸ್ವಾಲ್​ಗೆ  ಸ್ಥಾನ ಫಿಕ್ಸ್ ಆಗಲಿದೆ. 

WTC ವೇಳೆಯಲ್ಲೇ ಜೈಸ್ವಾಲ್ ಟ್ಯಾಲೆಂಟ್ ಗುರುತಿಸಿದ್ದ ದ್ರಾವಿಡ್..!

ಯೆಸ್, ಜೈಸ್ವಾಲ್ ಟೀಮ್ ಇಂಡಿಯಾಗೆ ಆಯ್ಕೆಯಾಗಲು IPL ಪ್ರದರ್ಶನ ಮಾತ್ರ ಕಾರಣವಲ್ಲ. IPL ಜೊತೆಗೆ ಕೋಚ್ ರಾಹುಲ್ ದ್ರಾವಿಡ್​ಗೆ ತಮ್ಮ ಶಿಷ್ಯನ ಟ್ಯಾಲೆಂಟ್, ಸಾಮರ್ಥ್ಯ ಮೇಲಿರೋ ನಂಬಿಕೆ. WTC ಫೈನಲ್​ಗಾಗಿ ಋತುರಾಜ್​ ಗಾಯಕ್ವಾಡ್​ರನ್ನ ಸ್ಟ್ಯಾಂಡ್​ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ, ಮದುವೆ ಕಾರಣದಿಂದಾಗಿ ಋತುರಾಜ್​ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿಲ್ಲ.

ಸರ್ಫರಾಜ್‌ ಖಾನ್‌ಗೆ ಮುಳುವಾಯ್ತಾ ಚೇತನ್ ಶರ್ಮಾ ಮುಂದೆ ಮಾಡಿದ ಅಗ್ರೆಸಿವ್ ಸೆಲಿಬ್ರೇಷನ್‌..?

ಋತುರಾಜ್ ಸ್ಥಾನದಲ್ಲಿ ಇಂಗ್ಲೆಂಡ್​ಗೆ ತೆರಳಿದ ಜೈಸ್ವಾಲ್, ತಂಡದ ಜೊತೆ  ಪ್ರಾಕ್ಟೀಸ್ ಮಾಡಿದ್ರು. ಈ ವೇಳೆ ನೆಟ್ಸ್​​ನಲ್ಲಿ ಜೈಸ್ವಾಲ್ ಬ್ಯಾಟಿಂಗ್ ನೋಡಿ ರಾಹುಲ್ ದ್ರಾವಿಡ್ ಫುಲ್ ಇಂಪ್ರೆಸ್ ಆಗಿದ್ರು. ಅಲ್ಲೇ ​ಜೈಸ್ವಾಲ್​ರನ್ನ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಅಂತ ಫಿಕ್ಸ್ ಆಗಿದ್ರು. 

ಟೀಂ ಇಂಡಿಯಾ ಪರ ಶತಕ ಬಾರಿಸೋದೊಂದೇ ಬಾಕಿ

ಇನ್ನು ಜೈಸ್ವಾಲ್ ಬ್ಯಾಟಿಂಗ್ ಬಗ್ಗೆ ಹೇಳೊದಾದ್ರೆ.. ಜೈಸ್ವಾಲ್ ರನ್​ಗಳಿಸಲು ಡಿಫ್ರೆಂಟ್​ ಡಿಫ್ರೆಂಟ್​ ಶಾಟ್​ಗಳನ್ನ ಆಡಲ್ಲ. ಪರ್ಫೆಕ್ಟ್ ಟೈಮಿಂಗ್, ಪರ್ಫೆಕ್ಟ್ ಪ್ಲೇಸ್​ಮೆಂಟೇ ಜೈಸ್ವಾಲ್ ಸ್ಟ್ರೆಂಥ್.  ಇನ್ನು ಜೈಸ್ವಾಲ್​ ಐಪಿಎಲ್​ನಲ್ಲಿ ಮಾತ್ರ ಅಲ್ಲ. ಅಂಡರ್​-19 ಸೇರಿ ಈವರೆಗು ಆಡಿರೋ ಎಲ್ಲಾ ಟೂರ್ನಿಗಳಲ್ಲೂ ಶತಕ ಸಿಡಿಸಿದ್ದಾನೆ. 

ಯೆಸ್, ಜೈಸ್ವಾಲ್ ಈವರೆಗು ಆಡಿರೋ ಎಲ್ಲಾ ಟೂರ್ನಿಗಳಲ್ಲೂ ಶತಕ ದಾಖಲಿಸಿದ್ದಾನೆ. 2019ರ ಅಂಡರ್-19 ವಿಶ್ವಕಪ್​ನಲ್ಲಿ ಜೈಸ್ವಾಲ್, ಪಾಕಿಸ್ತಾನ ವಿರುದ್ಧ  ಶತಕ, ರಣಜಿಯಲ್ಲಿ ಉತ್ತರಾಖಂಡ್​ ವಿರುದ್ಧ ಶತಕ, ಇರಾನಿ ಕಪ್​ನಲ್ಲಿ ಶತಕ, ವಿಜಯ್ ಹಜಾರೆಯಲ್ಲೂ ಶತಕ, ಇಂಡಿಯಾ A ಪರ ಶತಕ, ದುಲೀಪ್ ಟ್ರೋಪಿಯಲ್ಲೂ ಶತಕ, IPL​ನಲ್ಲೂ ಶತಕದ ಸಾಧನೆ. ಈಗ  ಟೀಂ ಇಂಡಿಯಾ ಪರ ಶತಕ ಬಾರಿಸೊಂದೆ ಬಾಕಿಯಿದೆ. ವೆಸ್ಟ್ ಇಂಡೀಸ್ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲೇ ಯಶಸ್ವಿ ಶತಕ ಬಾರಿಸಿದ್ರೆ ಅಚ್ಚರಿ ಇಲ್ಲ.

click me!