* ಕೋವಿಡ್ ಸಂಕಷ್ಟಕ್ಕೆ ಯುಜುವೇಂದ್ರ ಚಹಲ್ 95 ಸಾವಿರ ರುಪಾಯಿ ದೇಣಿಗೆ
* ಕೆಟ್ಟೋ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 7 ಕೋಟಿ ಸಂಗ್ರಹಿಸುವ ಗುರಿ
* ಕೋವಿಡ್ ಎರಡನೇ ಅಲೆಗೆ ಅಕ್ಷರಶಃ ನಲುಗಿ ಹೋಗಿರುವ ಭಾರತ
ನವದೆಹಲಿ(ಮೇ.10): ಜಾಗತಿಕ ಪಿಡುಗಾಗಿರುವ ಕೋವಿಡ್ ಎರಡನೇ ಅಲೆಗೆ ಭಾರತ ಅಕ್ಷರಶಃ ನಲುಗಿ ಹೋಗಿದೆ. ಸಂಕಷ್ಟದ ಸುಳಿಗೆ ಸಿಲುಕಿರುವ ಭಾರತಕ್ಕೆ ನೆರವಾಗಲು ಜಗತ್ತಿನಾದ್ಯಂತ ಹಲವು ಕ್ರಿಕೆಟಿಗರು ಮುಂದೆ ಬಂದಿದ್ದಾರೆ.
ಭಾರತದ ಕೋವಿಡ್ ವಿರುದ್ದದ ಹೋರಾಟಕ್ಕೆ ವಿವಿಧ ಪರಿಹಾರ ನಿಧಿಗಳನ್ನು ಸ್ಥಾಪಿಸಿಕೊಂಡು ದೇಣಿಗೆಗಳನ್ನು ಸಂಗ್ರಹಿಸಲಾಗುತ್ತಿದೆ. ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ, ಇತರೆ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ನೀಗಿಸಲು ಸರ್ಕಾರ ಪರಾದಾಡುತ್ತಿವೆ. ಹೀಗಿರುವಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋವಿಡ್ ವಿರುದ್ದದ ಸಮರಕ್ಕೆ ಧುಮುಕಿದ್ದು, ವೈಯುಕ್ತಿಕವಾಗಿ ವಿರುಷ್ಕಾ ಜೋಡಿ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಇದರ ಜತೆಗೆ ಕೆಟ್ಟೋ ಸಹಭಾಗಿತ್ವದಲ್ಲಿ ಆಕ್ಸಿಜನ್ ಸಿಲಿಂಡರ್ ಒದಗಿಸಲು ಒಂದು ವಾರದೊಳಗಾಗಿ 7 ಕೋಟಿ ರುಪಾಯಿ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ.
undefined
ಒಂದೇ ದಿನದಲ್ಲಿ 3ವರೆ ಕೋಟಿಗೂ ಹೆಚ್ಚು ಸಂಗ್ರಹಿಸಿದ ವಿರುಷ್ಕಾ
95 ಸಾವಿರ ರುಪಾಯಿ ಕೋವಿಡ್ ದೇಣಿಗೆ ನೀಡಿದ ಚಹಲ್:
ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ನಾಯಕ ಕೊಹ್ಲಿಯ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇದೀಗ ಯುಜುವೇಂದ್ರ ಚಹಲ್ ನಾಯಕ ವಿರಾಟ್ ಕೊಹ್ಲಿಯ ದೇಣಿಗೆ ಸಂಗ್ರಾಹದ ಅಭಿಯಾನಕ್ಕೆ 95,000 ರುಪಾಯಿ ಹಣ ಪಾವತಿಸಿದ್ದಾರೆ.
Yuzi Chahal donated 95,000 to the Ketto for the fund raise done by Virat Kohli and Anushka Sharma for the COVID-19 crisis in India.
— Johns. (@CricCrazyJohns)ಈ ಮೊದಲು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಸಹ ಭಾರತದ ಕೋವಿಡ್ ವಿರುದ್ದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಬದ್ಧತೆ ಮೆರೆದಿದ್ದರು. ಪಂತ್, ಹೇಮ್‌ಕುಂತ್ ಫೌಂಡೇಶನ್ ಮೂಲಕ ಅನ್ ಡಿಸ್‌ಕ್ಲೋಸಡ್ ಹಣ ದೇಣಿಗೆ ನೀಡಿದ್ದರು. ಹೇಮ್‌ಕುಂತ್ ಫೌಂಡೇಶನ್ ದೇಶಾದ್ಯಂತ ಅಗತ್ಯವಿದ್ದವರಿಗೆ ಆಕ್ಸಿಜನ್ ಸಿಲಿಂಡರ್, ಬೆಡ್ಸ್ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona