ನೀಲಿ ಡ್ರೆಸ್‌ನಲ್ಲಿ ಧನಶ್ರೀ ವರ್ಮಾ ಗ್ಲಾಮರಸ್‌ ಪೋಸ್‌ಗೆ ರೊಮ್ಯಾಂಟಿಕ್ ರಿಪ್ಲೇ ಮಾಡಿದ ಚಹಲ್..! ಕಾಮೆಂಟ್ ವೈರಲ್

By Naveen Kodase  |  First Published Sep 20, 2023, 1:48 PM IST

ಇತ್ತೀಚೆಗಷ್ಟೇ ಯುಜುವೇಂದ್ರ ಚಹಲ್ ತಮ್ಮ ಪತ್ನಿಯ ಪೋಸ್ಟ್‌ಗೆ ಗ್ಲಾಮರಸ್ ಫೋಟೋಗೆ ರೊಮ್ಯಾಂಟಿಕ್‌ ಆಗಿ ರಿಪ್ಲೇ ಮಾಡಿದ್ದಾರೆ. ಧನಶ್ರೀ ವರ್ಮಾ, ಕಳೆದ ಶುಕ್ರವಾರ ನೀಲಿ ಬಣ್ಣದ ಡ್ರೆಸ್‌ ತೊಟ್ಟು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.


ನವದೆಹಲಿ(ಸೆ.20): ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯವಾಗಿರುವುದನ್ನು ನಾವೆಲ್ಲರೂ ನೋಡುತ್ತಲೇ ಬಂದಿದ್ದೇವೆ. ಆಗಾಗ ಈ ಜೋಡಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಲೈವ್‌ಗೆ ಬರುವುದು, ಗಂಡನ ಪೋಸ್ಟ್‌ಗೆ ಹೆಂಡತಿ ಕಮೆಂಟ್ ಮಾಡುವುದು, ಪತ್ನಿಯ ಪೋಸ್ಟ್‌ಗೆ ಚಹಲ್ ಕಮೆಂಟ್ ಮಾಡುವುದನ್ನು ಮಾಡುತ್ತಲೇ ಬಂದಿದ್ದಾರೆ

ಇತ್ತೀಚೆಗಷ್ಟೇ ಯುಜುವೇಂದ್ರ ಚಹಲ್ ತಮ್ಮ ಪತ್ನಿಯ ಪೋಸ್ಟ್‌ಗೆ ಗ್ಲಾಮರಸ್ ಫೋಟೋಗೆ ರೊಮ್ಯಾಂಟಿಕ್‌ ಆಗಿ ರಿಪ್ಲೇ ಮಾಡಿದ್ದಾರೆ. ಧನಶ್ರೀ ವರ್ಮಾ, ಕಳೆದ ಶುಕ್ರವಾರ ನೀಲಿ ಬಣ್ಣದ ಡ್ರೆಸ್‌ ತೊಟ್ಟು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Latest Videos

undefined

ವಿಶ್ವಕಪ್ ಟೂರ್ನಿಗೂ ಮುನ್ನ ತನ್ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!

ಇನ್ನು ಈ ಫೋಟೋ ನೋಡಿದ ಯುಜುವೇಂದ್ರ ಚಹಲ್, ನನ್ನ ತಾಜ್‌ ಮಹಲ್ ಎಂದು ಕಮೆಂಟ್ ಮಾಡಿದ್ದಾರೆ. ಇದೀಗ ಈ ಕಮೆಂಟ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಯುಜುವೇಂದ್ರ ಚಹಲ್ ಮಾಡಿದ, ಈ ಮೈ ತಾಜ್ ಮಹಲ್‌ ಕಮೆಂಟ್‌ಗೆ ಸಾವಿರಾರು ಮಂದಿ ಲೈಕ್ ಒತ್ತಿದ್ದಾರೆ. 

ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಯುಜುವೇಂದ್ರ ಚಹಲ್, ಸದ್ಯ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಕೆಂಟ್ ತಂಡದ ಪರ ರೆಡ್ ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ. 

ಕುಲ್ದೀಪ್ ಯಾದವ್ ಟೀಂ ಇಂಡಿಯಾಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಬಳಿಕ ಯುಜುವೇಂದ್ರ ಚಹಲ್ ಪದೇ ಪದೇ ಕಡೆಗಣನೆಯಾಗುತ್ತಲೇ ಬಂದಿದ್ದಾರೆ. ಸದ್ಯ ವಿಶ್ವಕಪ್ ತಂಡದಲ್ಲಿ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಇನ್ನು ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಈಗಾಗಲೇ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಚಹಲ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಅಚ್ಚರಿ ಎನ್ನುವಂತೆ ಆಸ್ಟ್ರೇಲಿಯಾ ಎದುರಿನ ಸರಣಿಗೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಮಣೆಹಾಕಲಾಗಿದೆ.

ವಿಶ್ವಕಪ್‌ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ಹೊಸ ಅಸ್ತ್ರ ಸೇರ್ಪಡೆ..! BCCI ಮಾಸ್ಟರ್ ಪ್ಲಾನ್‌ಗೆ ಆಸೀಸ್ ಪಾಳಯದಲ್ಲಿ ನಡುಕ

ಕೆಲ ವರ್ಷಗಳಿಂದ ಟೆಸ್ಟ್‌ ಕ್ರಿಕೆಟ್‌ಗಷ್ಟೇ ಸೀಮಿತಗೊಂಡಿರುವ ಅಶ್ವಿನ್‌, ಕೊನೆಯ ಬಾರಿಗೆ ಭಾರತ ಪರ ಏಕದಿನ ಪಂದ್ಯವನ್ನಾಡಿದ್ದು 2022ರ ಜನವರಿಯಲ್ಲಿ. ಆದರೂ ಅವರು ಅನುಭವವನ್ನು ಪರಿಗಣಿಸಿ ಆಯ್ಕೆಗೆ ಪರಿಗಣಿಸುವ ಸುಳಿವನ್ನು ಬಿಸಿಸಿಐ ಆಯ್ಕೆಗಾರರು ನೀಡಿರುವುದಾಗಿ ಕಂಡು ಬರುತ್ತಿದೆ.

ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್‌ ಶರ್ಮಾ(ನಾಯಕ), ಹಾರ್ದಿಕ್‌ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ, ಅಕ್ಷರ್‌ ಪಟೇಲ್, ಇಶಾನ್ ಕಿಶನ್‌, ಸೂರ್ಯಕುಮಾರ್ ಯಾದವ್.
 

click me!