ವಿರಾಟ್ ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ
1000 ಕೋಟಿ ರುಪಾಯಿ ಗಡಿ ದಾಟಿದ ವಿರಾಟ್ ಕೊಹ್ಲಿ ನಿವ್ವಳ ಮೌಲ್ಯ
ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಕೋಟಿ ಕೋಟಿ ಸಂಪಾದಿಸುವ ಕಿಂಗ್ ಕೊಹ್ಲಿ
ನವದೆಹಲಿ(ಜೂ.19): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ರನ್ ಮಷೀನ್ ವಿರಾಟ್ ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇದೀಗ ವಿರಾಟ್ ಕೊಹ್ಲಿ ನಿವ್ವಳ ಮೌಲ್ಯ ಇದೀಗ ಒಂದು ಸಾವಿರ ಕೋಟಿ ರುಪಾಯಿ ಗಡಿ ದಾಟಿದ್ದು, ಇದೀಗ ವಿರಾಟ್ ಕೊಹ್ಲಿ, ಭಾರತದ ಅತ್ಯಂತ ಶ್ರೀಮಂತ ಸೆಲಿಬ್ರಿಟಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಸ್ಟಾಕ್ ಗ್ರೋ ವರದಿಯ ಪ್ರಕಾರ, ಈ ವಿರಾಟ್ ಕೊಹ್ಲಿಯ ಒಟ್ಟು ನಿವ್ವಳ ಮೌಲ್ಯ 1,050 ಕೋಟಿ ರುಪಾಯಿಗಳಾಗಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ಬಿಸಿಸಿಐ ಗುತ್ತಿಗೆಯಿಂದ 7 ಕೋಟಿ ರುಪಾಯಿ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಬ್ರ್ಯಾಂಡ್‌ಗಳ ಮಾಲೀಕತ್ವ ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಗಳಿಸುವ ಆದಾಯವೂ ಸೇರಿದೆ.
undefined
ಸ್ಟಾಕ್ ಗ್ರೋ ವರದಿಯಂತೆ ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ಪರ ಆಡುವುದಕ್ಕೆ ವಾರ್ಷಿಕವಾಗಿ 7 ಕೋಟಿ ರುಪಾಯಿಗಳನ್ನು ಪಡೆದುಕೊಳ್ಳುತ್ತಾರೆ. ಇದಷ್ಟೇ ಅಲ್ಲದೇ ಪ್ರತಿ ಟೆಸ್ಟ್ ಪಂದ್ಯವನ್ನಾಡಿದಾಗ 15 ಲಕ್ಷ ರುಪಾಯಿ, ಪ್ರತಿ ಏಕದಿನ ಪಂದ್ಯವನ್ನಾಡಿದಾಗ 6 ಲಕ್ಷ ರುಪಾಯಿ ಹಾಗೂ ಪ್ರತಿ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದಾಗ 3 ಲಕ್ಷ ರುಪಾಯಿಗಳನ್ನು ಪ್ರತಿ ಪಂದ್ಯಕ್ಕೆ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಇನ್ನು ಇದರ ಜತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ, ಆರ್‌ಸಿಬಿ ಫ್ರಾಂಚೈಸಿಯಿಂದ ವಾರ್ಷಿಕವಾಗಿ 15 ಕೋಟಿ ರುಪಾಯಿ ಪಡೆಯುತ್ತಿದ್ದಾರೆ.
'ಪಾಕಿಸ್ತಾನ ಕ್ರಿಕೆಟ್ ಉತ್ಕೃಷ್ಟವಾಗಿದೆ, ಭಾರತ ಬೇಕಿದ್ದರೇ ನರಕಕ್ಕೆ ಹೋಗಲಿ': ಜಾವೇದ್ ಮಿಯಾಂದಾದ್..!
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬ್ಲೂ ಟ್ರೈಬ್ಸ್, ಯೂನಿವರ್ಸಲ್ ಸ್ಪೋರ್ಟ್ಸ್‌ಬಿಜ್, ಎಂಪಿಎಲ್, ಸ್ಪೋರ್ಟ್ಸ್ ಕಾನ್ವೊ, ಡಿಜಿಟ್ ಸೇರಿದಂತೆ ಇನ್ನು ಹಲವು ಪ್ರಖ್ಯಾತ ಸ್ಟಾರ್ಟಪ್‌ಗಳಲ್ಲಿ ವಿರಾಟ್ ಕೊಹ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ, ವಿವೋ, ಮಿಂತ್ರಾ, ಬ್ಲೂ ಸ್ಟಾರ್, ವೋಲಿನಿ, ಲುಕ್ಸಾರ್, ಎಚ್‌ಎಸ್‌ಬಿಸಿ, ಉಬರ್, ಎಂಆರ್‌ಎಫ್, ಟಿಸ್ಸೋಟ್, ಸಿಂಥಾಲ್ ಸೇರಿದಂತೆ 18ಕ್ಕೂ ಹೆಚ್ಚು ಕಂಪನಿಗಳ ಪ್ರಚಾರ ರಾಯಭಾರಿ ಆಗಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಪ್ರತಿ ಜಾಹಿರಾತಿನಲ್ಲಿ ಅಭಿನಯಿಸಿದ್ದಕ್ಕೆ 7.5 ಕೋಟಿ ರುಪಾಯಿಯಿಂದ 10 ಕೋಟಿ ರುಪಾಯಿಯವರೆಗೆ ಹಣ ಪಡೆಯುತ್ತಾರೆ. ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ನಿಂದಲೇ ವಿರಾಟ್ ಕೊಹ್ಲಿ ವಾರ್ಷಿಕ 175 ಕೋಟಿ ರುಪಾಯಿ ಪಡೆಯುತ್ತಾರೆ ಎಂದು ವರದಿಯಾಗಿದೆ.
"Forever Crush" ಜತೆಗಿನ ಫೋಟೋ ಹಂಚಿಕೊಂಡ ಕ್ರಿಕೆಟಿಗ ರವೀಂದ್ರ ಜಡೇಜಾ..! ಇದು ಪತ್ನಿ ಫೋಟೋವಲ್ಲ
ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದರೆ 8.9 ಕೋಟಿ ರುಪಾಯಿ ಪಡೆಯುತ್ತಾರೆ. ಇನ್ನು ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಮಾಡುವ ಪ್ರತಿ ಪೋಸ್ಟ್‌ಗೆ 2.5 ಕೋಟಿ ರುಪಾಯಿ ಪಡೆದುಕೊಳ್ಳುತ್ತಾರೆ. ಕಿಂಗ್ ಕೊಹ್ಲಿಒನ್8 ಎನ್ನುವ ಸ್ವಂತ ಬ್ರ್ಯಾಂಡ್ ಹೊಂದಿದ್ಧಾರೆ. ಇದರ ಜತೆಗೆ ರೆಸ್ಟೋರೆಂಟ್ ಮತ್ತು ಕ್ರೀಡಾಪರಿಕರಗಳ, ಐಶಾರಾಮಿ ಉಡುಗೆ ಕಂಪನಿಯ ರೋಗನ್ ಬ್ರ್ಯಾಂಡ್ ಮಾಲೀಕರಾಗಿದ್ದಾರೆ.
ವಿರಾಟ್ ಕೊಹ್ಲಿ ಎರಡು ಐಶಾರಾಮಿ ಮನೆಗಳನ್ನು ಹೊಂದಿದ್ದಾರೆ. ಮುಂಬೈನಲ್ಲಿ ಒಂದು 34 ಕೋಟಿ ರುಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ. ಇನ್ನು ಗುರುಗ್ರಾಮದಲ್ಲಿ ಕೊಹ್ಲಿ 80 ಕೋಟಿ ರುಪಾಯಿ ಮೌಲ್ಯದ ಐಶಾರಾಮಿ ಬಂಗಲೆ ಹೊಂದಿದ್ದಾರೆ. ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ಬಳಿ 31 ಕೋಟಿ ರುಪಾಯಿ ಮೌಲ್ಯದ ಹಲವು ಕಾರುಗಳಿವೆ.
ಇದೆಲ್ಲದರ ಜತೆಗೆ ವಿರಾಟ್ ಕೊಹ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಫುಟ್ಬಾಲ್ ಕ್ಲಬ್, ಟೆನಿಸ್ ಟೀಂ ಹಾಗೂ ಪ್ರೊ ರೆಸ್ಲಿಂಗ್ ತಂಡದ ಮಾಲೀಕರೂ ಆಗಿದ್ದಾರೆ.