SA vs India Boxing Day Test: 55 ರನ್ ಅಂತರದಲ್ಲಿ ಉರುಳಿದ 7 ವಿಕೆಟ್, 327ಕ್ಕೆ ಭಾರತ ಆಲೌಟ್!

By Suvarna News  |  First Published Dec 28, 2021, 3:47 PM IST

ಮೊದಲ ಇನ್ನಿಂಗ್ಸ್ ನಲ್ಲಿ 327 ರನ್ ಗೆ ಆಲೌಟ್ ಆದ ಭಾರತ
6 ವಿಕೆಟ್ ಉರುಳಿಸಿದ ಲುಂಜಿ ಎನ್ ಗಿಡಿ
ಪಾದಾರ್ಪಣಾ ಟೆಸ್ಟ್ ಪಂದ್ಯದಲ್ಲೇ ವಿಕೆಟ್ ಸಾಧನೆ ಮಾಡಿದದ ಮಾರ್ಕೋ ಜಾನ್ಸೆನ್


ಸೆಂಚುರಿಯನ್ (ಡಿ. 28):  ಕೇವಲ 55 ರನ್ ಗಳ ಅಂತರದಲ್ಲಿ ಏಳು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡ ಭಾರತ ತಂಡ (Team India) ಆತಿಥೇಯ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ (First Test) ಪಂದ್ಯದಲ್ಲಿ 327 ರನ್ ಗೆ ಆಲೌಟ್ ಆಗಿದೆ. ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 327 ರನ್ ಗೆ ಆಲೌಟ್ ಆಗಿದ್ದರೆ, ದಕ್ಷಿಣ ಆಫ್ರಿಕಾ ತಂಡದ ಇನ್ನಿಂಗ್ಸ್ ಗೆ ಮೊದಲ ಓವರ್ ನಲ್ಲಿ ಜಸ್ ಪ್ರೀತ್ ಬುಮ್ರಾ (Jasprit Bumrah) ಘಾತಕ ಪೆಟ್ಟು ನೀಡಿದ್ದಾರೆ. ಭೋಜನ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ 21 ರನ್ ಗೆ 1 ವಿಕೆಟ್ ಕಳೆದುಕೊಂಡಿದೆ.

2ನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದ್ದರಿಂದ 3 ವಿಕೆಟ್ ಗೆ 272 ರನ್ ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರಿಸಿದ ಭಾರತ ಆಲೌಟ್ ಆಗಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ.ಸೂಪರ್ ಪಾಕ್ ಸ್ಫೋರ್ಟ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕನಿಷ್ಠ 400 ರನ್ ಗಳನ್ನಾದರೂ ಪೇರಿಸುವ ಗುರಿಯಲ್ಲಿದ್ದ ಭಾರತದ ಯೋಜನೆಯನ್ನು ದಕ್ಷಿಣ ಆಫ್ರಿಕಾದ ವೇಗಿ ಲುಂಜಿ ಎನ್ ಗಿಡಿ (Lungi Ngidi) ಸಂಪೂರ್ಣವಾಗಿ ಹಾಳು ಮಾಡಿದರು. ಅಜಿಂಕ್ಯ ರಹಾನೆ (Ajinkya Rahane)ಹಾಗೂ ರಿಷಭ್ ಪಂತ್ (Rishabh Pant) ರಂಥ ಪ್ರಮುಖ ವಿಕೆಟ್ ಉರುಳಿಸಿದ ಎನ್ ಗಿಡಿ 71 ರನ್ ಗೆ 6 ವಿಕೆಟ್ ಉರುಳಿಸಿ ಭಾರತದ ಇನ್ನಿಂಗ್ಸ್ ಅನ್ನು ಕೆಡವಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅಗ್ರ ವೇಗಿ ಕಗೀಸೋ ರಬಾಡ (Kagiso Rabada), ಕೆಎಲ್ ರಾಹುಲ್, ಆರ್.ಅಶ್ವಿನ್ ಹಾಗೂ ಶಾರ್ದೂಲ್ ಠಾಕೂರ್ ಅವರ ವಿಕೆಟ್ ಉರುಳಿಸಿ ಗಮನಸೆಳೆದರು.

ಮಂಗಳವಾರ ಬೆಳಗಿನ ಅವಧಿಯ ಆಟದಲ್ಲಿ ದಕ್ಷಿಣ ಆಫ್ರಿಕಾದ ಬೌಲಿಂಗ್ ಎಷ್ಟು ಮಾರಕವಾಗಿತ್ತೆಂದರೆ, ಕೇವಲ 69 ಎಸೆತಗಳ ಅಂತರದಲ್ಲಿ ಭಾರತ 7 ವಿಕೆಟ್ ಗಳನ್ನು ಕಳೆದುಕೊಂಡಿತು. ಕೆಎಲ್ ರಾಹುಲ್ (KL Rahul) ಮೊದಲ ದಿನದಾಟದಲ್ಲಿ ಆಡಿದ ತಮ್ಮ ಶತಕದ ಇನ್ನಿಂಗ್ಸ್ ಗೆ 1 ರನ್ ಸೇರಿಸಿ 123 ರನ್ ಗೆ ರಬಾಡಗೆ ವಿಕೆಟ್ ನೀಡಿದರೆ, ಸೋಮವಾರದ ಆಟಕ್ಕೆ 8 ರನ್ ಸೇರಿಸಿದ ಅಜಿಂಕ್ಯ ರಹಾನೆ 48 ರನ್ ಬಾರಿಸಿ ಎನ್ ಗಿಡಿ ಎಸೆತದಲ್ಲಿ ವಾನ್ ಡೆರ್ ಡುಸೆನ್ ಗೆ ಕ್ಯಾಚ್ ನೀಡಿ ಹೊರಡೆದರು.
 

That will be Lunch on Day 3 of the 1st Test. started well with the ball, managing to dismiss Elgar within the first over of South Africa's innings.

Scorecard - https://t.co/eoM8MqSQgO pic.twitter.com/NItFBnsOJg

— BCCI (@BCCI)


291 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಗಲೂ ಮೊತ್ತವನ್ನು 400ರ ಗಡಿ ದಾಟಿಸುವ ಅವಕಾಶವಿತ್ತು. ಆದರೆ, ರಿಷಭ್ ಪಂತ್ (8), ಅಶ್ವಿನ್ (4), ಶಾರ್ದೂಲ್ ಠಾಕೂರ್ (4) ಹಾಗೂ ಮೊಹಮದ್ ಶಮಿ (8) ಹೆಚ್ಚಿನ ಪ್ರತಿರೋಧ ತೋರದೇ ನಿರ್ಗಮನ ಕಂಡಿದ್ದರಿಂದ ಭಾರತ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಈ ನಾಲ್ಕು ವಿಕೆಟ್ ಗಳ ಪೈಕಿ ಮೂರು ವಿಕೆಟ್ ಗಳನ್ನು ಎನ್ ಗಿಡಿ ಉರುಳಿಸಿದರು. 

Ashes 2021: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಸೋಲು: ಟ್ರೋಫಿ ಆಸಿಸ್ ಕೈವಶ!
10ನೇ ವಿಕೆಟ್ ಗೆ ಜಸ್ ಪ್ರೀತ್ ಬುಮ್ರಾ (14) ಹಾಗೂ ಮೊಹಮದ್ ಸಿರಾಜ್ (4*) 19 ರನ್ ಗಳ ಅಮೂಲ್ಯ ಜೊತೆಯಾಟವಾಡಿದ್ದರಿಂದ ಭಾರತ 325ರ ಗಡಿ ದಾಟುವಲ್ಲಿ ಯಶ ಕಂಡಿತು. ಪಾದಾರ್ಪಣಾ ಪಂದ್ಯವಾಡಿದ ಮಾರ್ಕೋ ಜಾನ್ಸೆನ್ ಓವರ್ ನಲ್ಲಿ 2 ಬೌಂಡರಿ ಸಿಡಿಸಿ ಬುಮ್ರಾ ಆಕ್ರಮಣಕಾರಿಯಾಗುವಂಥ ಹಂತದಲ್ಲೇ ವಿಕೆಟ್ ಒಪ್ಪಿಸಿದರು. ಆ ಮೂಲಕ ಜಾನ್ಸೆನ್ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಮೊಟ್ಟಮೊದಲ ವಿಕೆಟ್ ಸಾಧನೆ ಮಾಡಿದರು.

ಭಾರತ ತಂಡ ಮೊದಲ ಇನ್ನಿಂಗ್ಸ್: 105.3 ಓವರ್ ಗಳಲ್ಲಿ 327 (ಕೆಎಲ್ ರಾಹುಲ್ 123, ಅಜಿಂಕ್ಯ ರಹಾನೆ 48, ಜಸ್‌ ಪ್ರೀತ್ ಬುಮ್ರಾ 14, ಲುಂಜಿ ಎನ್ ಗಿಡಿ 71ಕ್ಕೆ 6, ಕಗೀಸೋ ರಬಾಡ 72ಕ್ಕೆ 3)

Latest Videos

 

click me!