ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 14 ರನ್‌ಗಳ ಅಂತರದಿಂದ ಮಣಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿಯಿರುವಂತೆಯೇ 3-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.
ಮೆಲ್ಬೊರ್ನ್(ಡಿ.28): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಮೂರನೇ ಟೆಸ್ಟ್ ಪಂದ್ಯ ಮೂರನೇ ದಿನದಲ್ಲಿಯೇ ಅಂತ್ಯವಾಗಿದೆ. ಈ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 14 ರನ್‌ಗಳ ಅಂತರದಿಂದ ಮಣಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿಯಿರುವಂತೆಯೇ 3-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.
ಇಂದು ಬೆಳಗ್ಗಿನ ಪಂದ್ಯ ಇಂಗ್ಲೆಂಡ್ ದುಃಸ್ವಪ್ನದ ಮುಂಜಾನೆಯಾಗಿತ್ತು. ಆದರೆ ವೇಗಿ ಸ್ಕಾಟ್ ಬೋಲ್ಯಾಂಡ್ ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್‌ಗಳ ರೋಚಕ ಬೌಲಿಂಗ್ ಮೂಲಕ ಆಸ್ಟ್ರೇಲಿಯಾ ತನ್ನ ತವರು ನೆಲದಲ್ಲಿ ಗೆದ್ದು ಸಂಭ್ರಮಿಸಿದೆ . 19 ಎಸೆತಗಳಲ್ಲಿ 5 ಇಂಗ್ಲೆಂಡ್ ಬ್ಯಾಟರ್‌ಗಳ ವಿಕೆಟ್ ಪಡೆಯುವ ಮೂಲಕ ಬೋಲ್ಯಾಂಡ್ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ 3 ನೇ ಅತಿವೇಗದ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟು 6 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಗೆಲುವಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 185 ರನ್‌ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 68 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಹೋರಾಟವನ್ನು ಮುಕ್ತಾಯಗೊಳಿಸಿದೆ.
ಹೊಸ ದಾಖಲೆಯನ್ನು ನಿರ್ಮಿಸಿದ ಬೋಲ್ಯಾಂಡ್!
1887ರಲ್ಲಿ ಇಂಗ್ಲೆಂಡ್ ವಿರುದ್ಧ 15 ರನ್‌ಗಳಿಗೆ 5 ವಿಕೆಟ್ ಪಡೆದ ಆಸ್ಟ್ರೇಲಿಯದ ಚಾರ್ಲ್ಸ್ ಟರ್ನರ್‌ರನ್ನು ಹಿಂದಿಕ್ಕಿ, ಸ್ಕಾಟ್ ಬೋಲ್ಯಾಂಡ್ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ 5 ವಿಕೆಟ್-7 ರನ್ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಾಯಕ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಪಂದ್ಯವನ್ನು ಪುನರಾರಂಭಿಸಿದರು. ಆಸ್ಟ್ರೇಲಿಯಾದ ಮೇಲೆ ಸ್ವಲ್ಪ ಒತ್ತಡವನ್ನು ಹೇರುವ ಭರವಸೆಯೊಂದಿಗೆ ಇಂಗ್ಲೆಂಡ್ 31/4 ಕ್ಕೆ ದಿನದಾಟವನ್ನು ಪ್ರಾರಂಭಿಸಿತು. ಆದಾಗ್ಯೂ, ಬೋಲ್ಯಾಂಡ್ ಭರ್ಜರಿ ಆಟ ಪ್ರಾರಂಭಿಸುವ ಮೊದಲು 18 ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ಬೆನ್ ಸ್ಟೋಕ್ಸ್ 11 ರನ್ ಗಳಿಸುವ ಮೂಲಕ ಭರವಸೆಯನ್ನು ಮೂಡಿಸಿದರು.
ಆದರೆ ಬೋಲ್ಯಾಂಡ್ ಎಸೆತಕ್ಕೆ ಐದು ರನ್ ಗಳಿಸಿದ್ದ ಜಾನಿ ಬೈರ್‌ಸ್ಟೋವ್ ಎಲ್ಬಿಡಬ್ಲ್ಯೂ, 28 ರನ್‌ಗಳಿಸಿದ್ದ ರೂಟ್ ಮತ್ತು ಮಾರ್ಕ್ ವುಡ್ ಮತ್ತು ಆಲಿ ರಾಬಿನ್ಸನ್ ಡಕ್‌ಗೆ ಔಟಾದರು. ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಜೇಮ್ಸ್ ಆಂಡರ್ಸನ್ 4 ಎಸೆತಗಳಲ್ಲಿ ಕೇವಲ ಎರಡು ರನ್ ಕಲೆ ಹಾಕಿದರು.
ಆಸ್ಟ್ರೇಲಿಯಾ ನಮ್ಮನ್ನು ಬೆಚ್ಚಿ ಬೀಳಿಸಿತು !
ಏತನ್ಮಧ್ಯೆ, ಇಂಗ್ಲೆಂಡ್ ನಾಯಕ ಜೋ ರೂಟ್, 2021ರಲ್ಲಿ ಟೆಸ್ಟ್‌ಗಳಲ್ಲಿ (1708) ಪ್ರಮುಖ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಮೊದಲ 2 ಟೆಸ್ಟ್‌ಗಳಲ್ಲಿ ಬ್ರಿಸ್ಬೇನ್ ಮತ್ತು ಅಡಿಲೇಡ್‌ನಲ್ಲಿ ಸೋಲಿನ ನಂತರ ಆಸ್ಟ್ರೇಲಿಯಾವು ಮೆಲ್ಬೋರ್ನ್‌ನಲ್ಲಿ ಇಂಗ್ಲೆಂಡ್ ಪುನರಾಗಮನಕ್ಕೆ ಯಾವುದೇ ಅವಕಾಶವನ್ನು ನೀಡಲಿಲ್ಲ ಎಂದು ರೂಟ್ ಹೇಳಿದರು.
2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪತನವನ್ನು ನೋಡುವುದು ನಿರಾಶಾದಾಯಕವಾಗಿತ್ತು, ವಿಶೇಷವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆದ ನಂತರ ಆಸ್ಟ್ರೇಲಿಯಾವನ್ನು 267 ಕ್ಕೆ ಕಟ್ಟಿ ಹಾಕಲು ಅವರ ವೇಗದ ಬೌಲರ್‌ಗಳು ಎಲ್ಲಾ ಕಠಿಣ ಪರಿಶ್ರಮವನ್ನು ಮಾಡಿದ್ದರು. ಜೇಮ್ಸ್ ಆಂಡರ್ಸನ್ ತನ್ನ 2 ನೇ ದಿನದಂದು ಅದ್ಭುತವಾದ ಸ್ಪೆಲ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದರು ಆದರೆ ಸೋಮವಾರದ ಪಂದ್ಯದಲ್ಲಿ ಇಂಗ್ಲೆಂಡ್ 31 ರನ್ ಗಳಿಸಿ 4 ವಿಕೇಟ್‌ಗೆ ತತ್ತರಿಸಿತು.
ಆಸ್ಟ್ರೇಲಿಯಾಕ್ಕೆ ಕ್ರೆಡಿಟ್ ನೀಡಲೇಬೇಕು!
"ಇಟ್ ಇಸ್ ವಾಟ್ ಇಟ್ ಇಸ್ (It is what it is). ನಾವು ಕಳೆದ ಕೆಲ ಸಮಯದಿಂದ ಈ ರೀತಿಯ ವಾತಾವರಣವನ್ನು ಎದುರಿಸಿದ್ದೇವೆ. ಆಸ್ಟ್ರೇಲಿಯಾಕ್ಕೆ ಕ್ರೆಡಿಟ್ ನೀಡಲೇಬೇಕು, ಅವರು ನಿನ್ನೆ ರಾತ್ರಿ ಉತ್ತಮ ಪಂದ್ಯ ಆಡಿದ್ದಾರೆ ಮತ್ತು ಈ ಟೆಸ್ಟ್ ಪಂದ್ಯದಲ್ಲಿ ನಮ್ಮನ್ನು ಮೀರಿಸಿದ್ದಾರೆ. ಜತೆಗ ಸರಣಿಯಲ್ಲಿಯೇ ಉತ್ತಮ ಆಟವಾಡಿದ್ದಾರೆ. ನಾವು ಈಗ ಸಾಕಷ್ಟು ಕಠಿಣ ಪರಿಶ್ರಮದ ಮೂಲಕ ಮುಂದಿನ ಎರಡು ಪಂದ್ಯಗಳಲ್ಲಿ ಮರಳಲಿದ್ದೇವೆ," ಎಂದು ಅವರು ಹೇಳಿದರು.
ತಂಡದ 2 ಸಿಬ್ಬಂದಿಗೆ ಸೋಮವಾರ ಕೊರೋನಾ ದೃಡಪಟ್ಟಿತ್ತು. ಇದಾದ ಬಳಿಕ ಕೋವಿಡ್ -19ನೆಗೆಟಿವ್ RTPCR ಪರೀಕ್ಷೆಯ ಫಲಿತಾಂಶಗಳ ನಂತರ ಇಂಗ್ಲೆಂಡ್ 3 ನೇ ದಿನದಂದು ಆಡಲು ಮರಳಿತ್ತು. ಆದರೆ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 14 ರನ್‌ಗಳ ಅಂತರದಿಂದ ಮಣಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಸರಣಿ ವಶಕ್ಕೆ ಪಡೆದುಕೊಂಡಿದೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 185/10(ಮೊದಲ ಇನಿಂಗ್ಸ್)
ಜೋ ರೂಟ್: 50
ನೇಥನ್ ಲಯನ್: 36/3
ಆಸ್ಟ್ರೇಲಿಯಾ: 267/10(ಮೊದಲ ಇನಿಂಗ್ಸ್)
ಮಾರ್ಕಸ್ ಹ್ಯಾರಿಸ್: 76
ಜೇಮ್ಸ್ ಆ್ಯಂಡರ್‌ಸನ್: 33/4
ಇಂಗ್ಲೆಂಡ್: 68/10(ಎರಡನೇ ಇನಿಂಗ್ಸ್)
ಜೋ ರೂಟ್: 59
ಸ್ಕಾಟ್ ಬೊಲ್ಯಾಂಡ್: 7/6