ನೆಟ್ಸ್‌ನಲ್ಲಿ ರವಿ ಶಾಸ್ತ್ರಿ ಬೌಲ್, ನೆಟ್ಟಿಗರಿಂದ ಟ್ರೋಲ್!

By Web Desk  |  First Published Nov 14, 2019, 8:56 PM IST

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅದೆಷ್ಟೇ ಡೀಸೆಂಟ್ ಟ್ವೀಟ್ ಮಾಡಿದರೂ ಟ್ರೋಲ್ ಮಾತ್ರ ತಪ್ಪುವುದಿಲ್ಲ. ಈ ಹಿಂದೆ ಮೋಜು ಮಸ್ತಿ ಕುರಿತು ಟ್ವೀಟ್ ಮಾಡಿ ಟ್ರೋಲ್ ಆಗಿದ್ದ ಶಾಸ್ತ್ರಿ, ಇದೀಗ ಅಭ್ಯಾಸದ ಫೋಟೋ ಹಂಚಿಕೊಂಡು ಟ್ರೋಲ್ ಆಗಿದ್ದಾರೆ.


ಇಂದೋರ್(ನ.14): ಟೀಂ ಇಂಡಿಯಾ ಕೋಚ್ ಒಂದು ಹೆಜ್ಜೆ ಇಟ್ಟರೆ ಸಾಕು, ಟ್ರೋಲ್ ಆಗುತ್ತಾರೆ. ಟ್ವಿಟರ್‌ನಲ್ಲಿ ಏನೇ ಟ್ವೀಟ್ ಮಾಡಿದರೂ ನೆಟ್ಟಿಗರಿಗೆ ಆಹಾರವಾಗುತ್ತಾರೆ. ಇಂದೋರ್ ಟೆಸ್ಟ್ ಪಂದ್ಯದ ವೇಳೆ ರವಿ ಶಾಸ್ತ್ರಿ ಮತ್ತೆ ಟ್ರೋಲ್ ಆಗಿದ್ದಾರೆ. ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ಫೋಟೋ ಹಂಚಿಕೊಂಡಿರು ಶಾಸ್ತ್ರಿ, ಹಳೇ ಅಭ್ಯಾಸ ಎಂದು ಬರೆದುಕೊಂಡಿದ್ದಾರೆ. ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ.

ಇದನ್ನೂ ಓದಿ: ಕೊಹ್ಲಿಗೆ ಕೋಚ್ ರವಿ ಶಾಸ್ತ್ರಿ ವಿಶ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

Tap to resize

Latest Videos

undefined

ರವಿ ಶಾಸ್ತ್ರಿ ಪ್ರತಿ ಟ್ವೀಟ್ ಕೂಡ ಟ್ರೋಲ್ ಮಾಡಲಾಗುತ್ತಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರವಿ ಶಾಸ್ತ್ರಿ ಟ್ವೀಟ್ ಮಾಡುತ್ತಲೇ ಇದ್ದಾರೆ. ಇಷ್ಟೇ  ಅಲ್ಲ ಹಲವು ಭಾರಿ ಸಂದರ್ಶಗಳಲ್ಲಿ ಶಾಸ್ತ್ರಿ, ಟ್ರೋಲಿಗರ ಟ್ವೀಟ್‌ಗೆ ಬೆಲೆ ಕೊಡುವುದಿಲ್ಲ ಎಂದಿದ್ದಾರೆ. ಆದರೆ ಪದೇ ಪದೇ ಟ್ರೋಲ್ ಆಗುತ್ತಿರುವುದು ಮಾತ್ರ ವಿಪರ್ಯಾಸ.

ಇದನ್ನೂ ಓದಿ: 10 ಕೋಟಿ ಜೇಬಿಗಿಳಿಸಿ ಹಾಯಾಗಿ ನಿದ್ದೆ; ಮತ್ತೆ ಟ್ರೋಲ್ ಆದ ಕೋಚ್ ಶಾಸ್ತ್ರಿ!

ಶಾಸ್ತ್ರಿ ಹೇಳುತ್ತಿರುವುದು ನಿಜ. ಹಳೇ ಅಭ್ಯಾಸಗಳು ಯಾವುತ್ತೂ ದೂರವಾಗುವುದಿಲ್ಲ ಎಂದು ಟ್ರೋಲ್ ಮಾಡಿದ್ದಾರೆ. ಹೊಸ ಅವತಾರದಲ್ಲಿ ಶಾಸ್ತ್ರಿಗೆ ಆರತಿ ಎತ್ತರಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. 

click me!