ವಿರಾಟ್ ಕೊಹ್ಲಿ ದೇಶದ ನಂ.1 ಶ್ರೀಮಂತ ಕ್ರೀಡಾಪಟು..!

Kannadaprabha News   | Asianet News
Published : May 31, 2020, 04:36 PM IST
ವಿರಾಟ್ ಕೊಹ್ಲಿ ದೇಶದ ನಂ.1 ಶ್ರೀಮಂತ ಕ್ರೀಡಾಪಟು..!

ಸಾರಾಂಶ

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. ಇನ್ನು ಜಗತ್ತಿನ ಒಟ್ಟಾರೆ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗೆ 66ನೇ ಸ್ಥಾನ. ಹಾಗಿದ್ದರೆ ಟಾಪ್ 10 ಶ್ರೀಮಂತ ಕ್ರೀಡಾಪಟುಗಳು ಯಾರಿರಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನ್ಯೂಯಾರ್ಕ್(ಮೇ.31): ಅಮೆರಿಕದ ಪ್ರಸಿದ್ಧ ಫೋರ್ಬ್ಸ್ ನಿಯತಕಾಲಿಕೆ 2020ರಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ 100 ಕ್ರೀಡಾಪಟುಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 66ನೇ ಸ್ಥಾನ ಪಡೆದಿದ್ದಾರೆ. ಇನ್ನು ಭಾರತದ ಪರ ನಂ.1 ಶ್ರೀಮಂತ ಕ್ರೀಡಾಪಟು ಎನಿಸಿದ್ದಾರೆ.

2019ರ ಜೂನ್‌ 1 ರಿಂದ 2020 ಜೂ.1ರ ಅವಧಿಯಲ್ಲಿ ಜಾಹೀರಾತು, ವೇತನ, ರಾಯಧನ ಹೀಗೆ ವಿವಿಧ ಮೂಲಗಳಿಂದ ಬಂದ ಆದಾಯವನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಅವಧಿಯಲ್ಲಿ ಕೊಹ್ಲಿ ಒಟ್ಟಾರೆ 195 ಕೋಟಿ (ಜಾಹೀರಾತಿನಿಂದ 180 ಕೋಟಿ ರುಪಾಯಿ, 15 ಕೋಟಿ ರುಪಾಯಿ ವೇತನ) ಸಂಪಾದಿಸಿದ್ದಾರೆ. ಫೋರ್ಬ್ಸ್ 2018ರಲ್ಲಿ ಪಟ್ಟಿಯಲ್ಲಿ ಕೊಹ್ಲಿ 83ನೇ ಸ್ಥಾನ ಹಾಗೂ 2019ರಲ್ಲಿ ಕೊಹ್ಲಿ 100ನೇ ಸ್ಥಾನ ಪಡೆದಿದ್ದರು. ಈ ಬಾರಿ ಕೊಯ್ಲಿ 66ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ ಪ್ರಕಟ!

ದಾಖಲೆ ಗ್ರ್ಯಾಂಡ್‌ಸ್ಲಾಮ್‌ ವಿಜೇತ ಸ್ವಿಜರ್‌ಲೆಂಡ್‌ನ ಟೆನಿಸಿಗ ರೋಜರ್‌ ಫೆಡರರ್‌ 797 ಕೋಟಿ ರುಪಾಯಿ ವಾರ್ಷಿಕ ಆದಾಯ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಮೊದಲ ಟೆನಿಸ್‌ ಆಟಗಾರ ಎಂಬ ಹೆಗ್ಗಳಿಕೆಗೆ ಫೆಡರರ್‌ ಪಾತ್ರರಾಗಿದ್ದಾರೆ. ತಾರಾ ಫುಟ್ಬಾಲಿಗ ಕ್ರಿಸ್ಟಿಯಾನೊ ರೋನಾಲ್ಡೊ, ಲಿಯೋನೆಲ್‌ ಮೆಸ್ಸಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ.

1. ರೋಜರ್‌ ಫೆಡರರ್‌ 797 ಕೋಟಿ ರುಪಾಯಿ

2. ಕ್ರಿಸ್ಟಿಯಾನೊ ರೋನಾಲ್ಡೊ 787 ಕೋಟಿ ರುಪಾಯಿ

3. ಲಿಯೋನೆಲ್‌ ಮೆಸ್ಸಿ  780 ಕೋಟಿ ರುಪಾಯಿ

4. ನೇಮರ್‌ 716 ಕೋಟಿ ರುಪಾಯಿ

5. ಲೆಬ್ರೊನ್‌ ಜೇಮ್ಸ್‌ 661 ಕೋಟಿ ರುಪಾಯಿ

6. ಸ್ಟೀಫನ್‌ ಕರ್ರಿ  558 ಕೋಟಿ ರುಪಾಯಿ

7. ಕೆವಿನ್‌ ಡುರಂಟ್‌  479 ಕೋಟಿ ರುಪಾಯಿ

8. ಟೈಗರ್‌ ವುಡ್ಸ್‌  467 ಕೋಟಿ ರುಪಾಯಿ

9. ಕ್ರಿಕ್‌ ಕೌಸಿನ್ಸ್‌  453 ಕೋಟಿ ರುಪಾಯಿ

10. ಕಾರ್ಸನ್‌ ವೆಟ್ಸ್  443 ಕೋಟಿ ರುಪಾಯಿ

66. ವಿರಾಟ್‌ ಕೊಹ್ಲಿ  195 ಕೋಟಿ ರುಪಾಯಿ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮಗೇನು ಹುಚ್ಚು ಹಿಡಿದಿದೆಯಾ? Virat Kohli ಹೀಗಂದಿದ್ದು ಯಾರಿಗೆ? ವಿಡಿಯೋ ವೈರಲ್
2027ರ ವಿಶ್ವಕಪ್‌ ತಂಡದಲ್ಲಿ Virat Kohli ಸ್ಥಾನ ಕನ್ಫರ್ಮ್‌! ಆದ್ರೆ Rohit Sharma ಸ್ಥಾನ?