ಸಾಮರ್ಥ್ಯ ಸಾಬೀತು ಪಡಿಸಲು ವೇದಿಕೆ ಸಿಕ್ತು; ನಿಧಾಸ್ ಟ್ರೋಫಿ ನೆನಪಿಸಿದ ಕಾರ್ತಿಕ್!

By Suvarna NewsFirst Published May 30, 2020, 7:04 PM IST
Highlights

ಟೀಂ ಇಂಡಿಯಾ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕಳೆದ 16 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿದ್ದಾರೆ. ಇದರಲ್ಲಿ 2018ರ ನಿಧಾಸ್ ಟ್ರೋಫಿ ಪಂದ್ಯ ದಿನೇಶ್ ಕಾರ್ತಿಕ್‌ಗೆ ಫಿನೀಶರ್ ಅನ್ನೋ ಹೆಸರು ತಂದುಕೊಟ್ಟಿತು. ಇದೀಗ ಈ ರೋಚಕ ಪಂದ್ಯವನ್ನು ದಿನೇಶ್ ಕಾರ್ತಿಕ್  ನೆನಪಿಸಿಕೊಂಡಿದ್ದಾರೆ. 

ಚೆನ್ನೈ(ಮೇ.30): ನಿಧಾಸ್ ಟ್ರೋಫಿ ನನ್ನ ಸಾಮರ್ಥ್ಯ ಸಾಬೀತು ಪಡಿಸಲು ಉತ್ತಮ ವೇದಿಕೆಯಾಯಿತ್ತು. ಇಂತಹ ಸಂದರ್ಭಕ್ಕೆ ಕಾಯುತ್ತಿದ್ದೆ. ಅದು ನಿಧಾಸ್ ಟ್ರೋಫಿಯ ನಿರ್ಣಾಯಕ ಪಂದ್ಯದಲ್ಲಿ ಒದಗಿ ಬಂದಿರುವುದು ಮತ್ತಷ್ಟು ಖುಷಿ ನೀಡಿದೆ ಎಂದು ಟೀಂ ಇಂಡಿಯಾ ಕ್ರಿಕೆಟ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಕಾರ್ತಿಕ್ ಅಬ್ಬರದಿಂದ ಬಾಂಗ್ಲಾದೇಶ ಧೂಳೀಪಟವಾಗಿತ್ತು. ಇದೇ ರೋಚಕ ಪಂದ್ಯ ಕಾರ್ತಿಕ್ ಕರಿಯರ್‌ಗೆ ಹೊಸ ತಿರುವು ನೀಡಿತು,

ದಿನೇಶ್ ಕಾರ್ತಿಕ್ ಅತ್ತೆ ಕೂಡ ಟೀಂ ಇಂಡಿಯಾ ಆಟಗಾರ್ತಿ!

ಬಾಂಗ್ಲಾದೇಶ ವಿರುದ್ಧ ನಡೆದ ನಿಧಾಸ್ ಟ್ರೋಫಿ ಫೈನಲ್ ಪಂದ್ಯ. 167 ರನ್ ಚೇಸ್ ಮಾಡುತ್ತಿದ್ದ ಟೀಂ ಇಂಡಿಯಾ 18 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 133 ರನ್ ಸಿಡಿಸಿತ್ತು. ಈ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ದಿನೇಶ್ ಕಾರ್ತಿಕ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದರು. ಭಾರತದ ಗೆಲುವಿಗೆ 12 ಎಸೆತದಲ್ಲಿ 34 ರನ್ ಅವಶ್ಯಕತೆ ಇತ್ತು. 

ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!..

ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಕಾರಣ ಬಾಂಗ್ಲಾದೇಶದ ವಿರುದ್ಧದ ಸೋಲು ಸುಲಭವಾಗಿ ಅರಗಿಸಿಕೊಳ್ಳಲು ಭಾರತೀಯ ಅಭಿಮಾನಿಗಳಿಗೆ ಸಾಧ್ಯವಿಲ್ಲ. ಆದರೆ ಕಾರ್ತಿಕ್ ಆತ್ಮವಿಶ್ವಾಸದಲ್ಲಿದ್ದರು. ಬೌಂಡರಿ, ಸಿಕ್ಸರ್ ಸುರಿಮಳೆ ಮೂಲಕ ದಿನೇಶ್ ಕಾರ್ತಿಕ್, ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿದ ಟೀಂ ಇಂಡಿಯಾ ಟ್ರೋಫಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಮತ್ತೊಬ್ಬ ಫಿನೀಶರ್ ಆಗಿ ಗುರುತಿಸಿಕೊಂಡರು. 

click me!