ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!

By Web Desk  |  First Published Oct 15, 2019, 2:16 PM IST

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮೊದಲ ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್‌ಗಿಂತ ಕೊಹ್ಲಿ ಕೇವಲ ಒಂದು ರೇಟಿಂಗ್ ಅಂಕ ಹಿಂದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ದುಬೈ(ಅ.15): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಮತ್ತೊಮ್ಮೆ ಅಗ್ರ​ಸ್ಥಾ​ನ​ದತ್ತ ದಾಪು​ಗಾ​ಲಿ​ರಿ​ಸಿ​ದ್ದಾರೆ. 

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..!

Tap to resize

Latest Videos

undefined

ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಅಜೇಯ 254 ರನ್‌ ಗಳಿ​ಸಿದ ಕೊಹ್ಲಿ, ಒಟ್ಟು 936 ರೇಟಿಂಗ್‌ ಅಂಕ ಹೊಂದಿದ್ದು ಅಗ್ರಸ್ಥಾನ​ದ​ಲ್ಲಿ​ರುವ ಆಸ್ಪ್ರೇ​ಲಿ​ಯಾದ ಸ್ಟೀವ್‌ ಸ್ಮಿತ್‌ (937)ಗಿಂತ ಕೇವಲ 1 ಅಂಕ ಹಿಂದಿ​ದ್ದಾರೆ. ರಾಂಚಿ​ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ಯ​ಲಿ​ರುವ 3ನೇ ಟೆಸ್ಟ್‌ನಲ್ಲಿ ಕೊಹ್ಲಿ, ಸ್ಮಿತ್‌ರನ್ನು ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗುವ ನಿರೀಕ್ಷೆ ಇದೆ. ವೈಜಾಗ್ ಟೆಸ್ಟ್ ಪಂದ್ಯದಲ್ಲಿ 20 ಹಾಗೂ ಅಜೇಯ 31 ರನ್'ಗಳನ್ನಷ್ಟೇ ಬಾರಿಸಿದ್ದ ಕೊಹ್ಲಿ, 2018ರ ಜನವರಿ ಬಳಿಕ ಮೊದಲ ಬಾರಿಗೆ 900 ರೇಟಿಂಗ್ ಅಂಕಪಟ್ಟಿಯಿಂದ ಕುಸಿತ ಕಂಡಿದ್ದರು.

ಸದಾ ಟೀಕಿಸುತ್ತಿದ್ದ ಕೊಹ್ಲಿಯನ್ನು ಹೊಗಳಿದ ಗಂಭೀರ್!

ಸತತ 2 ಪಂದ್ಯ​ಗ​ಳಲ್ಲಿ ಶತಕ ಸಿಡಿ​ಸಿದ ಮಯಾಂಕ್‌ ಅಗರ್‌ವಾಲ್‌ 17ನೇ ಸ್ಥಾನ​ಕ್ಕೇ​ರಿ​ದ್ದಾರೆ. ಚೇತೇ​ಶ್ವರ್‌ ಪೂಜಾರ(04) ಹಾಗೂ ಅಜಿಂಕ್ಯ ರಹಾನೆ (09) ಅಗ್ರ 10ರಲ್ಲಿ ಮುಂದು​ವ​ರಿ​ದಿ​ದ್ದಾರೆ.

ಬ್ಯಾಟಿಂಗ್ ರ‍್ಯಾಂಕಿಂಗ್ ಟಾಪ್ 10 ಪಟ್ಟಿ ಇಲ್ಲಿದೆ ನೋಡಿ...

1. ಸ್ಟೀವ್ ಸ್ಮಿತ್(Aus)

2. ವಿರಾಟ್ ಕೊಹ್ಲಿ(Ind)

3. ಕೇನ್ ವಿಲಿಯಮ್ಸನ್(NZ)

4. ಚೇತೇಶ್ವರ್ ಪೂಜಾರ(Ind)

5. ಹೆನ್ರಿ ನಿಕೋಲಸ್(NZ)

6. ಜೋ ರೋಟ್(Eng)

7. ಟಾಮ್ ಲಾಥಮ್(NZ)

8. ದೀಮುತ್ ಕರುಣರತ್ನೆ(SL)

9. ಅಜಿಂಕ್ಯ ರಹಾನೆ(Ind)

10. ಕ್ವಿಂಟನ್ ಡಿಕಾಕ್(SA)
 

click me!