ರನ್‌ ಮಷಿನ್ ವಿರಾಟ್ ಕೊಹ್ಲಿ ಹಾದಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ..!

By Suvarna NewsFirst Published Sep 9, 2024, 12:05 PM IST
Highlights

ರೋಹಿತ್ ಶರ್ಮಾ ನಾಯಕರಾದ ಬಳಿಕ ರನ್‌ ಮಷೀನ್ ವಿರಾಟ್ ಕೊಹ್ಲಿ ಅವರ ಹಾದಿಯನ್ನೇ ಹಿಂಬಾಲಿಸುತ್ತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ನಾಯಕನಾದವನು ಕೆಲಸ ತಂಡವನ್ನ ಮುನ್ನಡೆಸುವುದು ಮಾತ್ರವಲ್ಲ. ವೈಯಕ್ತಿಕವಾಗಿಯೂ ಅಬ್ಬರಿಸಬೇಕು. ಸಂಕಷ್ಟದಲ್ಲಿ ಸಮಯದಲ್ಲಿ ಒಬ್ಬಂಟಿಯಾಗಿ ನಿಂತು ಹೋರಾಡಬೇಕು. ಸದ್ಯ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅದನ್ನೇ ಮಾಡ್ತಿದ್ದಾರೆ. ಅಲ್ಲದೇ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾದಿಯಲ್ಲೇ ನಡೆಯುತ್ತಿದ್ದಾರೆ.  

ಕ್ಯಾಪ್ಟನ್ ಆಗೋ ಮೊದಲು ಸಾಮಾನ್ಯ ಆಟ..!

Latest Videos

ರೋಹಿತ್ ಶರ್ಮಾ..! ಕ್ರಿಕೆಟ್ ದುನಿಯಾದ ಒನ್ ಆಫ್ ದಿ ಡೇಂಜರಸ್ ಬ್ಯಾಟ್ಸ್‌ಮನ್. ರೋಹಿತ್ ಸಿಡಿದು ನಿಂತ್ರೆ ಅವ್ರನ್ನ ಕಟ್ಟಿಹಾಕೋದು ಸುಲಭದ ಮಾತಲ್ಲ. ಈ ಮುಂಬೈಕರ್ ಸಿಡಿದು ನಿಂತ್ರೆ ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಯೆ ಆಗುತ್ತೆ. ರನ್ಹೊಳೆಯೇ ಹರಿಯುತ್ತೆ. ಏಕದಿನ ಕ್ರಿಕಟ್ನಲ್ಲಿ ಒಂದು ದ್ವಿಶತಕ ಬಾರಿಸೋದೆ ಕಷ್ಟ. ಅಂತದ್ರಲ್ಲಿ ಈ ಹಿಟ್‌ಮ್ಯಾನ್ ಒಂದಲ್ಲ, ಎರಡಲ್ಲ. ಮೂರು ಡಬಲ್ ಸೆಂಚುರಿ ಬಾರಿಸಿದ್ದಾರೆ. ಆ ಮೂಲಕ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದಿದ್ದಾರೆ. 

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ: ಎರಡು ಯುವ ವೇಗಿಗಳಿಗೆ ಸ್ಥಾನ

ಇನ್ನು ಕಳದೊಂದು ವರ್ಷದಿಂದ ರೋಹಿತ್ ಜಬರ್ದಸ್ತ್ ಫಾರ್ಮ್ನಲ್ಲಿದ್ದಾರೆ. ಟೀಮ್ ಇಂಡಿಯಾ ಪರ ಅಬ್ಬರಿಸಿ ಬೊಬ್ಬರಿಯುತ್ತಿದ್ದಾರೆ. ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್ ಸಮರದಲ್ಲಿ ರೋಹಿತ್ ಖತರ್ನಾ್ಕ್ ಬ್ಯಾಟಿಂಗ್ನಿಂದ ಬೌಲರ್ಗಳ ಮೇಲೆ ಸವಾರಿ ಮಾಡಿದ್ರು. ಪವರ್‌ಪ್ಲೇನಲ್ಲಿ ಫಿಯರ್ಲೆಸ್ ಬ್ಯಾಟಿಂಗ್ನಿಂದ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿದ್ರು

ಟೂರ್ನಿಯಲ್ಲಿ  11 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ರೋಹಿತ್, 54.27ರ ಸರಾಸರಿ & 125.94ರ ಸ್ಟ್ರೈಕ್ರೇಟ್ನಲ್ಲಿ 597 ರನ್ ಬಾರಿಸಿದ್ರು. ಇದ್ರಲ್ಲಿ 1 ಶತಕ ಮತ್ತು 3 ಅರ್ಧಶತಕ ಸೇರಿದ್ವು. ಇನ್ನು ಏಕದಿನ ವಿಶ್ವಕಪ್ ಮಾತ್ರವಲ್ಲ, T20 ವಿಶ್ವಕಪ್ನಲ್ಲೂ ರೋಹಿತ್ ಅಬ್ಬರಿಸಿದ್ರು. 8 ಪಂದ್ಯಗಳಿಂದ  156.70ರ ಸ್ಟ್ರೈಕ್ರೇಟ್ನಲ್ಲಿ 3 ಅರ್ಧಶತಕ ಸಹಿತ 257 ರನ್ ಕಲೆಹಾಕಿದ್ರು. 

ಕ್ಯಾಪ್ಟನ್ಸಿ ಸಿಕ್ಕ ನಂತರ ರೋಹಿತ್ ರೌದ್ರಾವತಾರ..!

ಟೀಂ ಇಂಡಿಯಾ ಕ್ಯಾಪ್ಟನ್ ಆಗೋದಕ್ಕಿಂತ ಮೊದಲು ರೋಹಿತ್ ಸೈಲಂಟಾಗಿದ್ರು. ಆದ್ರೆ, ಫುಲ್ ಟೈಮ್ ಕ್ಯಾಪ್ಟೆನ್ಸಿ ಸಿಕ್ಕ ಮೇಲೆ ವೈಲಂಟಾಗಿದ್ದಾರೆ. ಅದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ..! 

RCBಗೆ ಆ ಪ್ಲೇಯರ್ ಬೇಕೇ ಬೇಕು ಅಂತ ಅಭಿಮಾನಿಗಳ ಪಟ್ಟು..! ಫ್ಯಾನ್ಸ್ ಬೇಡಿಕೆ ಈಡೇರಿಸುತ್ತಾ ಬೆಂಗಳೂರು ಫ್ರಾಂಚೈಸಿ..?

ನಾಯಕನಾಗುವುದಕ್ಕಿಂತ ಮೊದಲು ರೋಹಿತ್, 210 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ, 47.85ರ ಸರಾಸರಿ & 88.42ರ ಸ್ಟ್ರೈಕ್ರೇಟ್ನಲ್ಲಿ  8662 ರನ್ ಸಿಡಿಸಿದ್ರು. ಆದ್ರೆ, ನಾಯಕನಾಗಿ 46 ಇನ್ನಿಂಗ್ಸ್ಗಳಿಂದ 55.61 ಸರಾಸರಿ ಮತ್ತು 111.86 ಸ್ಟ್ರೈಕ್ರೇಟ್ನಲ್ಲಿ 2169 ರನ್ಗಳಿಸಿದ್ದಾರೆ. 

ನಾಯಕನಾಗಿ ವಿರಾಟ್ ವಿರಾಟರೂಪ..! 

ಯೆಸ್, ನಾಯಕನಾಗಿ ರೋಹಿತ್ ವಿರಾಟ್ ಕೊಹ್ಲಿ ಹಾದಿಯಲ್ಲೇ ಸಾಗ್ತಿದ್ದಾರೆ. ಕೊಹ್ಲಿ ನಾಯಕನಾದ್ಮೇಲೆ ಅದ್ಭುತ ಪ್ರದರ್ಶನ ನೀಡಿದ್ರು. ಹಲವು ಪಂದ್ಯಗಳಲ್ಲಿ ಸಿಂಗಲ್ ಹ್ಯಾಂಡೆಂಡ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ರು. 

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗುವ ಮೊದಲು 190  ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ರು. 51.99ರ ಸರಾಸರಿಯಲ್ಲಿ  8423 ರನ್ ಬಾರಿಸಿದ್ರು. ಅದ್ರೆ, ಕ್ಯಾಪ್ಟನ್ ಪಟ್ಟ ಸಿಕ್ಕ ನಂತರ ಕೊಹ್ಲಿ 91 ಪಂದ್ಯಗಳಿಂದ 72.65ರ ಸರಾಸರಿಯಲ್ಲಿ 5,449 ರನ್ಗಳಿಸಿದ್ರು.

ಒಟ್ಟಿನಲ್ಲಿ ಈ ಇಬ್ಬರು ಹಾಲಿ ಮತ್ತು ಮಾಜಿ ನಾಯಕರು ನಾಯಕರಾಗಿ ತಂಡವನ್ನ ಮುನ್ನೆಡೆಸುವುದು ಮಾತ್ರ ಅಲ್ಲ. ಆಟಗಾರರಾಗಿಯೂ ಅಬ್ಬರಿಸಿ ದ್ದಾರೆ. ಆ ಮೂಲಕ ತಮ್ಮ ನಾಯಕತ್ವದ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ.  

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!