ಪುಣೆ ಟೆಸ್ಟ್ ಗೆಲುವು; ಆಸ್ಟ್ರೇಲಿಯಾ ದಾಖಲೆ ಮುರಿದ ಕೊಹ್ಲಿ ಸೈನ್ಯ!

By Web DeskFirst Published Oct 13, 2019, 3:31 PM IST
Highlights

ಸೌತ್ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ. ಈ ಸರಣಿ ಗೆಲುವಿನೊಂದಿಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ದಾಖಲೆಯನ್ನು ಪುಡಿ ಮಾಡಿದೆ.

ಪುಣೆ(ಅ.13): ಸೌತ್ ಆಫ್ರಿಕಾ ವಿರುದ್ದ ಪುಣೆ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 137 ರನ್ ಗೆಲುವು ಸಾಧಿಸಿದೆ. ಭಾರತ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಈ  ಸರಣಿ ಗೆಲುವಿನ ಮೂಲಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ: INDvSA;ಭಾರತಕ್ಕೆ ಇನಿಂಗ್ಸ್ ಹಾಗೂ 137 ರನ್ ಗೆಲುವು; ಸರಣಿ ಕೈವಶ!

ಸೌತ್ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ ತವರಿನಲ್ಲಿ ಸತತ 11ನೇ ಸರಣಿ ಗೆಲುವು ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ ತನ್ನ ತವರಿನಲ್ಲಿ ಸತತ ಗರಿಷ್ಠ  ಸರಣಿ ಗೆಲುವು ದಾಖಲೆಯನ್ನು ಪುಡಿ ಪುಡಿ ಮಾಡಿತು. ಆಸ್ಟ್ರೇಲಿಯಾ ತವರಿನಲ್ಲಿ ಸತತ 10 ಸರಣಿ ಗೆದ್ದ ಸಾಧನೆ ಮಾಡಿತ್ತು. ಇದೀಗ ಭಾರತ ತವರಿನಲ್ಲಿ ಸತತ 11 ಸರಣಿ ಗೆದ್ದು ದಾಖಲೆ ಬರೆದಿದೆ.

ಇದನ್ನೂ ಓದಿ: ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ರೋಹಿತ್ ಪಾದಕ್ಕೆರಗಿದ ಅಭಿಮಾನಿ!

ತವರಿನಲ್ಲಿ ಗರಿಷ್ಠ ಸತತ ಸರಣಿ ಗೆದ್ದ ತಂಡ
ಭಾರತ (2012-13 ರಿಂದ ಇಲ್ಲೀವರೆಗೆ) 11
ಆಸ್ಟ್ರೇಲಿಯಾ(1994/95 - 2000/01) 10
ಆಸ್ಟ್ರೇಲಿಯಾ(2004 - 2008/09) 10
ವೆಸ್ಟ್ ಇಂಡೀಸ್(1975/76 - 1985/86) 08

ವಿಶಾಖಪಟ್ಟಣ ಟೆಸ್ಟ್ ಪಂದ್ಯದಲ್ಲಿ 203 ರನ್ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ, ಪುಣೆ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 137 ರನ್ ಗೆಲುವು ಸಾಧಿಸಿತು. 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಕ್ಚೋಬರ್ 19 ರಂದು ರಾಂಚಿಯಲ್ಲಿ ಆರಂಭವಾಗಲಿದೆ. 

click me!