
ನವದೆಹಲಿ(ಸೆ.08): ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಅಕ್ಟೋಬರ್ 17 ರಿಂದ ಟೂರ್ನಿ ಯುಎಇನಲ್ಲಿ ಟೂರ್ನಿ ಆರಂಭಗೊಳ್ಳುತ್ತಿದೆ. ಪಾಕಿಸ್ತಾನ ಸೇರಿದಂತೆ ಹಲವು ಮಂಡಳಿ ಈಗಾಗಲೇ ವಿಶ್ವಕಪ್ ಟೂರ್ನಿಗಾಗಿ ತಂಡ ಪ್ರಕಟಿಸಿದೆ. ಇಂದು(ಸೆ.08) ಬಿಸಿಸಿಐ ಚುಟುಕು ವಿಶ್ವ ಸಮರಕ್ಕೆ ತಂಡ ಪ್ರಕಟಿಸಲಿದೆ. ತಂಡದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇತ್ತ ಬಿಸಿಸಿಐ ಆಯ್ಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಮ್ಸ್ ಹರಿದಾಡುತ್ತಿದೆ.
ಟೀಂ ಇಂಡಿಯಾದಲ್ಲಿ ಯುವ ಕ್ರಿಕೆಟಿಗರ ದಂಡೇ ಇದೆ. ಹೀಗಾಗಿ ಬಿಸಿಸಿಐಗೆ ಆಯ್ಕೆ ಅತ್ಯಂತ ಸವಾಲಾಗಿದೆ. ಏಕಕಾಲದಲ್ಲಿ ಒಂದು ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಹಾಗೂ ಮತ್ತೊಂದು ತಂಡ ಶ್ರೀಲಂಕಾದಲ್ಲಿ ನಿಗದಿತ ಓವರ್ ಕ್ರಿಕೆಟ್ ಆಡಿದ ಹೆಗ್ಗಳಿಕೆಗೂ ಟೀಂ ಇಂಡಿಯಾ ಪಾತ್ರವಾಗಿದೆ. ಹೀಗಾಗಿ ಇಂದು ಯಾರು ಸ್ಥಾನ ಪಡಯಲಿದ್ದಾರೆ ಅನ್ನೋ ಕುರಿತ ಮೆಮೆ ಟ್ವಿಟರ್‌ನಲ್ಲಿ ಸಂಚಲ ಸೃಷ್ಟಿಸಿದೆ.
ಬಿಸಿಸಿಐ ಮೂಲಗಳ ಪ್ರಕಾರ ಈಗಾಗಲೇ 15 ಸದಸ್ಯರ ತಂಡವನ್ನು ಅಂತಿಮಗೊಳಿಸಲಾಗಿದೆ. ಕೇವಲ ಪ್ರಕಣೆ ಮಾತ್ರ ಬಾಕಿ. ಇದಕ್ಕಾಗಿ ಅಭಿಮಾನಿಗಳು ಹಾಗೂ ಕ್ರಿಕೆಟಿಗರು ಕಾದು ಕಾದು ಸುತ್ತಾದ ಮೆಮ್ಸ್ ಕೂಡ ವೈರಲ್ ಆಗಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.