ಸಚಿನ್‌‌ಗೆ ಬ್ಯಾಟಿಂಗ್ ಟಿಪ್ಸ್ ಕೊಟ್ಟಿದ್ದ ಹೋಟೆಲ್ ಮಾಣಿ ಸಿಕ್ಕರೆ ಹೇಳಿ, ಪ್ಲೀಜ್!

Kannadaprabha News   | Asianet News
Published : Dec 16, 2019, 02:25 PM ISTUpdated : Dec 16, 2019, 03:51 PM IST
ಸಚಿನ್‌‌ಗೆ  ಬ್ಯಾಟಿಂಗ್ ಟಿಪ್ಸ್ ಕೊಟ್ಟಿದ್ದ ಹೋಟೆಲ್ ಮಾಣಿ ಸಿಕ್ಕರೆ ಹೇಳಿ, ಪ್ಲೀಜ್!

ಸಾರಾಂಶ

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರಿಗೆ ಹೋಟೆಲ್ ಸಿಬ್ಬಂದಿಯೊಬ್ಬರು ಸಲಹೆ ನೀಡಿದ ಅಪರೂಪದ ಘಟನೆಯನ್ನು ಸ್ವತಃ ತೆಂಡುಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ(ಡಿ.16): ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ಶನಿವಾರ ಟ್ವೀಟರ್‌ನಲ್ಲಿ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದರು. 

ಚೆನ್ನೈನಲ್ಲಿ ಟೆಸ್ಟ್‌ ಸರಣಿ ಆಡುತ್ತಿದ್ದ ವೇಳೆ ತಾವು ಉಳಿದುಕೊಂಡಿದ್ದ ತಾಜ್‌ ಹೋಟೆಲ್‌ನಲ್ಲಿ ಮಾಣಿಯೊಬ್ಬ ತಮಗೆ ಬ್ಯಾಟಿಂಗ್‌ ಸಲಹೆಯೊಂದನ್ನು ನೀಡಿದ್ದ. ಆ ಸಲಹೆ ದೊಡ್ಡ ಮಟ್ಟದಲ್ಲಿ ನೆರವಾಯಿತು. ಆ ಮಾಣಿ ಈಗ ಎಲ್ಲಿದ್ದಾನೆ ಎಂದು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ ಎಂದು ಟ್ವೀಟ್‌ ಮಾಡಿದ್ದರು. 

‘ನನ್ನ ಕೋಣೆಗೆ ಕಾಫಿ ನೀಡಲು ಬಂದಿದ್ದ ವ್ಯಕ್ತಿ, ಸರ್‌ ನನ್ನದೊಂದು ಸಣ್ಣ ಸಲಹೆ ಇದೆ. ನಿಮಗೆ ಅಭ್ಯಂತರವಿಲ್ಲದಿದ್ದರೆ ಹೇಳುತ್ತೇನೆ ಎಂದಿದ್ದ. ಖಂಡಿತ ಹೇಳಿ ಎಂದೆ. ನೀವು ಮೊಣಕೈ ಗಾರ್ಡ್‌ ಧರಿಸಿ ಆಡುವಾಗ ನೀವು ಬ್ಯಾಟ್‌ ಬೀಸುವ ವೇಗ ಬದಲಾಗುತ್ತದೆ. ನಾನು ಹಲವು ಬಾರಿ ಗಮನಿಸಿದ್ದೇನೆ ಎಂದ. ಆತ ಹೇಳಿದ್ದು ನಿಜವಾಗಿತ್ತು’ ಎಂದು ಸಚಿನ್‌ ಬರೆದಿದ್ದರು. 

ಭಾನುವಾರ ತಾಜ್‌ ಹೋಟೆಲ್‌ನವರು ಸಚಿನ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ತಾವು ಹುಡುಕುತ್ತಿರುವ ವ್ಯಕ್ತಿ ಸಿಕ್ಕಿದ್ದಾನೆ. ಆದಷ್ಟುಬೇಗ ಭೇಟಿ ಏರ್ಪಡಿಸುತ್ತೇವೆ ಎಂದಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌