ಪದಾರ್ಪಣಾ ಪಂದ್ಯದಲ್ಲಿ ಶತಕ: ಅಪರೂಪದ ದಾಖಲೆ ಬರೆದ ಪಾಕ್ ಕ್ರಿಕೆಟಿಗ..!

Suvarna News   | Asianet News
Published : Dec 16, 2019, 11:38 AM IST
ಪದಾರ್ಪಣಾ ಪಂದ್ಯದಲ್ಲಿ ಶತಕ: ಅಪರೂಪದ ದಾಖಲೆ ಬರೆದ ಪಾಕ್ ಕ್ರಿಕೆಟಿಗ..!

ಸಾರಾಂಶ

ಪಾಕ್ ಕ್ರಿಕೆಟಿಗ ಅಬಿದ್‌ ಅಲಿ ಪದಾರ್ಪಣಾ ಪಂದ್ಯದಲ್ಲೇ ಅಮೋಘ ಶತಕ ಸಿಡಿಸುವ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ, ಈ ಸ್ಟೋರಿ ನೋಡಿ ನಿಮಗೆ ತಿಳಿಯುತ್ತೆ....

ರಾವಲ್ಪಿಂಡಿ[ಡಿ.16]: ಏಕದಿನ ಹಾಗೂ ಟೆಸ್ಟ್‌ ಎರಡೂ ಮಾದರಿಯಲ್ಲಿ ಪದಾರ್ಪಣಾ ಪಂದ್ಯದಲ್ಲೇ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಪಾಕಿಸ್ತಾನದ ಅಬಿದ್‌ ಅಲಿ ಬರೆದಿದ್ದಾರೆ. 

ಬುಮ್ರಾ ನನ್ನ ಮುಂದೆ ‘ಬೇಬಿ ಬೌಲರ್‌’ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್..!

ಶ್ರೀಲಂಕಾ ವಿರುದ್ಧ ಭಾನುವಾರ ಇಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್‌ನಲ್ಲಿ ಅಲಿ(109) ಶತಕ ಬಾರಿಸಿದರು. 2019ರ ಮಾರ್ಚ್’ನಲ್ಲಿ ದುಬೈನಲ್ಲಿ ಆಸ್ಪ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಅಲಿ, ಆ ಪಂದ್ಯದಲ್ಲಿ 112 ರನ್‌ ಗಳಿಸಿದ್ದರು. ಇದೀಗ ಲಂಕಾ ವಿರುದ್ದ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುವ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ಮಾಡಿದ್ದಾರೆ.

ದಶಕದ ಬಳಿಕ ಟೆಸ್ಟ್ ಆಡಲು ಪಾಕ್‌ಗೆ ಬಂದಿಳಿದ ಲಂಕಾ

ಟೆಸ್ಟ್ ಕ್ರಿಕೆಟ್’ನಲ್ಲಿ ಚೊಚ್ಚಲ ಪಂದ್ಯದಲ್ಲೇ 106 ಕ್ರಿಕೆಟಿಗರು ಶತಕ ಬಾರಿಸಿದ್ದಾರೆ, ಇನ್ನು ಚೊಚ್ಚಲ ಏಕದಿನ ಪಂದ್ಯದಲ್ಲಿ 15 ಬ್ಯಾಟ್ಸ್’ಮನ್’ಗಳು ಶತಕ ಸಿಡಿಸಿದ್ದಾರೆ. ಮೂವರು ಟಿ20 ಪದಾರ್ಪಣಾ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಆದರೆ ಎರಡು ಮಾದರಿಯ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆ ಆಬಿದ್ ಅಲಿ ಪಾಲಾಗಿದೆ.

ಮೂರು ದಿನಗಳ ಕಾಲ ಕಾಡಿದ್ದ ಮಳೆ, ಭಾನುವಾರ ಬಿಡುವು ನೀಡಿತು. ಧನಂಜಯ ಡಿ ಸಿಲ್ವಾ (102) ಶತಕದ ನೆರವಿನಿಂದ ಲಂಕಾ ಮೊದಲ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 308 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಪಾಕಿಸ್ತಾನ
2 ವಿಕೆಟ್‌ಗೆ 252 ರನ್‌ ಗಳಿಸಿತು. ಅಂತಿಮವಾಗಿ ಪಂದ್ಯ ಡ್ರಾಗೊಂಡಿತು.


ಸ್ಕೋರ್‌:

ಲಂಕಾ 308/6 ಡಿಕ್ಲೇರ್

ಪಾಕ್‌ 252/2
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌