
ಪರ್ತ್(ಅ.31): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚುತ್ತಿದ್ದಾರೆ. ಇದೆಲ್ಲದರ ನಡುವೆ ಕಾಂಗರೂ ನಾಡಿನಲ್ಲಿ ವಿರಾಟ್ ಕೊಹ್ಲಿಯ ಖಾಸಗಿತನಕ್ಕೆ ಧಕ್ಕೆ ಉಂಟಾಗಿದ್ದು, ದುರಭಿಮಾನಿಯೊಬ್ಬ, ವಿರಾಟ್ ಕೊಹ್ಲಿ ತಂಗಿದ್ದ ಹೋಟೆಲ್‌ನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಈ ವಿಡಿಯೋ ಬಗ್ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಹೋಟೆಲ್‌ನ ವಿಡಿಯೋ ಮಾಡಿದ ಕ್ಲಿಪ್ಪಿಂಗ್ ಅನ್ನು ತಮ್ಮ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದು ತಮ್ಮ ಖಾಸಗಿತನಕ್ಕೆ ಉಂಟಾದ ಧಕ್ಕೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
T20 World Cup ಸೂರ್ಯಕುಮಾರ್ ಯಾದವ್ ನಿಜವಾದ ಹೀರೋ, ಕೊಹ್ಲಿಯಲ್ಲ: ಗೌತಮ್ ಗಂಭೀರ್
ಈ ಕುರಿತಂತೆ ಈ ವಿಡಿಯೋದೊಂದಿಗೆ, 'ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಹಾಗೂ ಭೇಟಿಯಾಗಲು ಸದಾ ಉತ್ಸುಕರಾಗಿರುತ್ತಾರೆ ಎನ್ನುವುದನ್ನು ನಾನೂ ಅರ್ಥ ಮಾಡಿಕೊಂಡಿದ್ದೇನೆ ಹಾಗೂ ಅವರ ಈ ನಡೆಯನ್ನು ನಾನು ಕೂಡಾ ಪ್ರೋತ್ಸಾಹಿಸುತ್ತೇನೆ. ಆದರೆ ಈ ವಿಡಿಯೋ ನೋಡಿ, ಇದು ನನ್ನ ಖಾಸಗಿತನಕ್ಕೆ ಧಕ್ಕೆಯನ್ನುಂಟು ಮಾಡಿದೆ. ನನ್ನ ರೂಂನಲ್ಲಿಯೂ ನನಗೆ ಖಾಸಗಿತನ ಸಿಕ್ಕಿಲ್ಲ ಎಂದಾದರೇ, ಮತ್ತೆಲ್ಲಿ ನಾನು ನನ್ನ ಖಾಸಗಿತನವನ್ನು ಕಂಡು ಕೊಳ್ಳಲು ಸಾಧ್ಯ? ನಾನು ಈ ರೀತಿಯ ದುರಾಭಿಮಾನವನ್ನು ಸಹಿಸುವುದಿಲ್ಲ. ಇದು ಅಕ್ಷರಶಃ ನನ್ನ ಖಾಸಗಿತನದ ಉಲ್ಲಂಘನೆಯಾಗಿದೆ. ದಯವಿಟ್ಟು ಇತರರ ಖಾಸಗಿತನವನ್ನು ಗೌರವಿಸಿ ಹಾಗೂ ಅವರನ್ನು ಒಂದು ರೀತಿ ಮನರಂಜನೆಯ ವಸ್ತುವನ್ನಾಗಿ ಮಾಡಬೇಡಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಮಾಡಿರುವ ಈ ಪೋಸ್ಟ್‌ಗೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಸೇರಿದಂತೆ ಹಲವು ಕ್ರಿಕೆಟಿಗರು ಬೆಂಬಲ ಸೂಚಿಸಿದ್ದಾರೆ. ಇದೊಂದು ಅರ್ಥಹೀನ ನಡೆಯಾಗಿದ್ದು, ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಸಾಕಷ್ಟು ಖಾಸಗಿಯಾಗಿರುವುದಕ್ಕೆ ಹೆಚ್ಚು ಗಮನ ಕೊಡುತ್ತಲೇ ಬಂದಿದ್ದಾರೆ. ವಿರುಷ್ಕಾ ದಂಪತಿ 2021ರ ಜನವರಿಯಂದು ವಮಿಕಾ ಎನ್ನುವ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಅಲ್ಲಿಂದೀಚೆಗೆ ಇದುವರೆಗೂ ವಮಿಕಾ ಮುಖವನ್ನು ವಿರುಷ್ಕಾ ದಂಪತಿ ಮಾಧ್ಯಮಗಳ ಮುಂದೆ ತೋರಿಸಿಲ್ಲ. ವಿರಾಟ್ ಕೊಹ್ಲಿ ಸಮಯ ಸಿಕ್ಕಾಗಲೆಲ್ಲಾ ತಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡುತ್ತಲೇ ಬಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.