ಊರ್ವಶಿ ಕರೀತಾ ಇದಾಳೆ ಎಂದು ಪಂತ್ ಕಾಲೆಳೆದ ಫ್ಯಾನ್ಸ್‌..! ರಿಷಭ್ ನೀಡಿದ ಖಡಕ್ ರಿಪ್ಲೇ ವೈರಲ್‌..!

By Naveen Kodase  |  First Published Nov 8, 2022, 5:39 PM IST

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾ
ಸೆಮೀಸ್‌ಗೂ ಮುನ್ನ ರಿಷಭ್ ಪಂತ್ ಕಾಲೆಳೆದ ಕ್ರಿಕೆಟ್ ಫ್ಯಾನ್ಸ್‌
ಕಾಲೆಳೆದ ಫ್ಯಾನ್ಸ್‌ಗೆ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದ ಪಂತ್


ಬೆಂಗಳೂರು(ನ.08): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ , ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್, ಸೂಕ್ತ ಅವಕಾಶಕ್ಕಾಗಿ ಎದುರು ನೋಡುತ್ತಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿದು, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇದೆಲ್ಲದರ ನಡುವೆ ಕೆಲ ಕ್ರಿಕೆಟ್ ಅಭಿಮಾನಿಗಳು, ರಿಷಭ್ ಪಂತ್ ಅವರನ್ನು ಕಾಲೆಳೆಯುವ ಪ್ರಯತ್ನ ನಡೆಸಿದ್ದು, ಇದಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ಪಂತ್ ನೀಡಿದ್ದಾರೆ.

ಹೌದು, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೆಲದಿನಗಳ ಹಿಂದಷ್ಟೇ ಸುದ್ದಿವಾಹಿನಿಗಳ ಹೆಡ್‌ಲೈನ್‌ ಆಗಿದ್ದನ್ನು ಬಹುತೇಕ ಯಾವ ಕ್ರಿಕೆಟ್ ಅಭಿಮಾನಿಯೂ ಮರೆತಂತೆ ಇಲ್ಲ. ಇದರ ಭಾಗವಾಗಿಯೇ ಕೆಲ ಕ್ರಿಕೆಟ್ ಅಭಿಮಾನಿಗಳು ರಿಷಭ್ ಪಂತ್ ಅವರನ್ನು ಕಾಲೆಳೆದಿದ್ದಾರೆ. ಕಳೆದ ವಾರಾಂತ್ಯದಲ್ಲಿ ನಡೆದ ಭಾರತ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯದ ವೇಳೆ ಬೌಂಡರಿ ಗೆರೆ ಹೊರಗೆ ಬ್ಯಾಟ್ ಹಿಡಿದು ಹೋಗುತ್ತಿದ್ದ ರಿಷಭ್ ಪಂತ್ ಅವರನ್ನು ಉದ್ದೇಶಿಸಿ ಕೆಲ ಅಭಿಮಾನಿಗಳು, ನಿಮ್ಮನ್ನು ಊರ್ವಶಿ ಕರೆಯುತ್ತಿದ್ದಾಳೆ ಎಂದು ಕಾಲೆಳೆದಿದ್ದಾರೆ. ಇದು ಪದೇ ಪದೇ ಪುನರಾವರ್ತನೆಯಾದಾಗ ಸುಮ್ಮನಾಗದ ರಿಷಭ್ ಪಂತ್, ಹಾಗಿದ್ರೆ ಹೋಗಿ ಭೇಟಿಯಾಗಿ ಎಂದು ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ್ದಾರೆ. 

Wahiyat log. Looks like Virat's message of not treating cricketers like commodity has fallen on deaf ears. https://t.co/BnmpA31Uyy

— Blessing Jokerbani (Perry's version) (@Jokeresque_)

Tap to resize

Latest Videos

ನೆನಪಿದೆಯಾ ಊರ್ವಶಿ-ಪಂತ್ ವಿವಾದ: ಕೆಲದಿನಗಳ ಹಿಂದಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ,  'Mr RP' ನನ್ನನ್ನು ಹೋಟೆಲ್‌ನಲ್ಲಿ ಭೇಟಿಯಾಗಲು ಗಂಟೆಗಟ್ಟಲೇ ಕಾದಿದ್ದರು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ರಿಷಭ್ ಪಂತ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ಜನರು ಪ್ರಚಾರಕ್ಕಾಗಿ ಏನೇನೆಲ್ಲಾ ಹೇಳುತ್ತಾರಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನ್ನನ್ನ ಬಿಟ್ಟು ಬಿಡು ಅಕ್ಕಾ ಎಂದು ಪೋಸ್ಟ್​ ಹಾಕಿ 10 ನಿಮಿಷಗಳ ಬಳಿಕ ಸ್ಟೋರಿ ಡಿಲಿಟ್ ಮಾಡಿದ್ದರು. 

T20 World Cup: ಮಳೆಯಿಂದ 2 ಸೆಮೀಸ್ ಪಂದ್ಯಗಳು ರದ್ದಾದ್ರೆ, ಯಾವ ತಂಡಗಳಿಗಿವೆ ಫೈನಲ್‌ಗೇರುವ ಅವಕಾಶ?

ಇದು ಊರ್ವಶಿಯನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿತ್ತು. ತಮ್ಮ ಬ್ಯಾಟ್​ ಬಾಲ್​ ಅಷ್ಟೇ ಆಡಬೇಕು. ನಾನೇನು ಮುನ್ನಿ ಅಲ್ಲ. ನಿನ್ನಂತಹ ಚಿಕ್ಕ ಹುಡುಗನೊಂದಿಗೆ ಪ್ರೀತಿ ಪ್ರೇಮದಲ್ಲಿ ಬಿದ್ದು  ಹಾಳಾಗಲು. ರಕ್ಷಾ ಬಂಧನದ ಶುಭಾಶಯಗಳು ಆರ್​ಪಿ ತಮ್ಮ. ಒಬ್ಬಂಟಿ ಹುಡುಗಿಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಪಂತ್‌ಗೆ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪಂತ್ ಹಾಗೂ ಊರ್ವಶಿ ರೌಟೇಲಾ ನಡುವೇ ಏನೋ ನಡಿತಾ ಇದೆ ಎನ್ನುವ ಚರ್ಚೆ ಆರಂಭವಾಯಿತು.

click me!