T20 World Cup: ರೋಹಿತ್‌, ರಾಹುಲ್, ಕೊಹ್ಲಿಯನ್ನು ಅಣಕಿಸಿದ ಶಾಹೀನ್‌ ಅಫ್ರಿದಿ..!

By Suvarna NewsFirst Published Nov 12, 2021, 8:01 AM IST
Highlights

* ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ ಪಾಕಿಸ್ತಾನ

* ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಾಹೀನ್ ಅಫ್ರಿದಿ

* ರಾಹುಲ್, ರೋಹಿತ್ ಅವರನ್ನು ಟ್ರೋಲ್ ಮಾಡಿದ ಅಫ್ರಿದಿ

ದುಬೈ(ನ.12): ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma), ಕೆ.ಎಲ್‌.ರಾಹುಲ್‌ (KL Rahul) ಹಾಗೂ ವಿರಾಟ್‌ ಕೊಹ್ಲಿ (Virat Kohli) ಔಟಾದ ರೀತಿಯನ್ನು ವೇಗಿ ಶಾಹೀನ್‌ ಅಫ್ರಿದಿ ಅನುಕರಣೆ ಮಾಡಿದ್ದು, ವಿಡಿಯೋ ವೈರಲ್‌ ಆಗಿದೆ. 

ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಶಾಹೀನ್‌ ಬಳಿ ಪ್ರೇಕ್ಷಕರು ಕೊಹ್ಲಿ, ರೋಹಿತ್‌ ಹಾಗೂ ರಾಹುಲ್‌ ಹೆಸರನ್ನು ಕೂಗಿದ್ದಾರೆ. ಈ ವೇಳೆ ಶಾಹೀನ್‌ ಫೀಲ್ಡಿಂಗ್‌ ನಡೆಸುತ್ತಲೇ ಈ ಮೂವರು ತಮ್ಮ ಬೌಲಿಂಗ್‌ನಲ್ಲಿ ಔಟಾಗುವ ಶೈಲಿಯನ್ನು ಪ್ರೇಕ್ಷಕರ ಮುಂದೆ ತೋರಿಸಿದ್ದಾರೆ. 

😑 pic.twitter.com/LQJm73F8JC

— Scorpion_Virat (@crickohli18_)

ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ಹಾಗೂ ಭಾರತ ನಡುವಿನ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಶಾಹೀನ್ ಅಫ್ರಿದಿ (Shaheen Afridi) ಮಾರಕ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ (Team India) ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವ ಮೂಲಕ ಪಾಕ್‌ಗೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿದ್ದರು. ಶಾಹೀನ್ ಅಫ್ರಿದಿ ಮಿಂಚಿನ ದಾಳಿಗೆ ರೋಹಿತ್ ಶರ್ಮಾ ಶೂನ್ಯ ಸುತ್ತಿದರೆ, ಕೆ.ಎಲ್.ರಾಹುಲ್ 3 ರನ್‌ ಬಾರಿಸ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ದರು. ಇನ್ನು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವಿರಾಟ್ ಕೊಹ್ಲಿಗೂ ಅಫ್ರಿದಿ ಪೆವಿಲಿಯನ್ ಹಾದಿ ತೋರಿಸಿದ್ದರು. ಅಂತಿಮವಾಗಿ ಶಾಹೀನ್ ಅಫ್ರಿದಿ 4 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.

T20 World Cup: Aus vs Pak‌ ರೋಚಕ ಪಂದ್ಯದಲ್ಲಿ ಪಾಕ್ ಮಣಿಸಿ ಫೈನಲ್‌ ತಲುಪಿದ ಆಸ್ಟ್ರೇಲಿಯಾ!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಪಡೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್‌ಗಳನ್ನು ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. ಈ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಟೀಂ ಇಂಡಿಯಾ ಎದುರು ಗೆಲುವು ದಾಖಲಿಸಿತ್ತು. 

ಕಿವೀಸ್ ಎದುರಿನ ಪಂದ್ಯದ ವೇಳೆ ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಹಾಗೂ ವಿರಾಟ್ ಕೊಹ್ಲಿ ಔಟಾದ ರೀತಿಯನ್ನು ಅನುಕರಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಕೆಲ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಶಾಹೀನ್‌ ಅಫ್ರಿದಿಯ ವರ್ತನೆಯನ್ನು ಮೆಚ್ಚಿಕೊಂಡರೆ, ಮತ್ತೆ ಕೆಲವರು ಅಫ್ರಿದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

T20 World Cup: Eng vs NZ ಇಂಗ್ಲೆಂಡ್ ಎದುರು ಗೆದ್ದರೂ ನೀಶಮ್ ಏಕೆ ಸಂಭ್ರಮಿಸಲಿಲ್ಲ..?

ಪಾಕ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಆಸೀಸ್‌: ಸೂಪರ್ 12 ಹಂತದ 5 ಪಂದ್ಯಗಳನ್ನು ಗೆದ್ದು, ಅಜೇಯವಾಗಿ ಸಮಿಫೈನಲ್ ಹಂತಕ್ಕೆ ಲಗ್ಗೆಯಿಟ್ಟಿದ್ದ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. ಮ್ಯಾಥ್ಯೂ ವೇಡ್ ಬಾರಿಸಿದ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪಾಕ್‌ ವಿರುದ್ದ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಜಮಾನ್ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ರನ್‌ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಪಾಕ್ ಮಾರಕ ವೇಗಿ ಶಾಹೀನ್ ಅಫ್ರಿದಿ ಮೊದಲ ಓವರ್‌ನಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾದರು. ಆಸೀಸ್‌ ನಾಯಕ ಫಿಂಚ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಡೇವಿಡ್ ವಾರ್ನರ್(49), ಮಾರ್ಕಸ್ ಸ್ಟೋಯ್ನಿಸ್(40*) ಹಾಗೂ ಮ್ಯಾಥ್ಯೂ ವೇಡ್(41*) ಅಜೇಯ ಬ್ಯಾಟಿಂಗ್ ಮೂಲಕ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

click me!