
ಓಮನ್(ಅ.17): IPL 2021 ಟೂರ್ನಿ ರಸದೌತಣ ಅನುಭವಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ ಟಿ20 ವಿಶ್ವಕಪ್(T20 world cup) ಟೂರ್ನಿ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಓಮನ್ ಹಾಗೂ ಪಪುವಾ ನ್ಯೂಗಿನಿಯಾ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಓಮನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಪಪುವಾ ನ್ಯೂಗಿನಿಯಾ ಪ್ಲೇಯಿಂಗ್ 11:
ಟೊನಿ ಉರ, ಅಸಾದ್ ವಾಲಾ(ನಾಯಕ), ಚಾರ್ಲೆಸ್ ಅಮಿನಿ, ಲೆಗಾ ಸೈಕಾ, ನೊರ್ಮನ್ ವಾನುವಾ, ಸೆಸೆ ಬ್ಯು, ಸಿಮೊನ್ ಆಟಾಯಿ, ಕಿಪಿಲಿನ್ ಡೊರಿಗಾ, ನೊಸಾನಿಯಾ ಪೊಕನಾ, ಡ್ಯಾಮಿಯನ್ ರಾವು, ಕಾಬುವಾ ಮೊರೆಯಾ
IPL 2021 ಮುಗಿದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಗಂಗೂಲಿ!
ಓಮನ್ ಪ್ಲೇಯಿಂಗ್ 11:
ಜತಿಂದರ್ ಸಿಂಗ್, ಖವಾರ್ ಅಲಿ, ಆಕ್ಬಿಬ್ ಇಲ್ಯಾಸ್, ಜೀಶಾನ್ ಮಕ್ಸೂದ್(ನಾಯಕ), ನಸೀಮ್ ಖುಶಿ, ಕಶ್ಯಪ್ ಪ್ರಜಾಪತಿ, ಮೊಹಮ್ಮದ್ ನದೀಮ್, ಆಯನ್ ಖಾನ್, ಸಂದೀಪ್ ಗೊಡ್, ಖಲೀಮುಲ್ಲಾ, ಬಿಲಾಲನ್ ಖಾನ್
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಯುಎಇ ಹಾಗೂ ಓಮನ್ ಆತಿಥ್ಯ ವಹಿಸಿದೆ ಓಮನ್‌ನ ಎಐ ಅಮೆರಾತ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯ ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಐಸಿಸಿ ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಗೆಲುವು ಯಾರಿಗೆ ಅನ್ನೋ ಕುತೂಹಲ ಮನೆ ಮಾಡಿದೆ.
2023ರ ಏಷ್ಯಾಕಪ್ ಕ್ರಿಕೆಟ್‌ಗೆ ಪಾಕಿಸ್ತಾನ ಆತಿಥ್ಯ; ಸರ್ವಾನುಮತದಿಂದ ನಿರ್ಧಾರ..!
ಎಐ ಅಮೆರಾತ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಈ ಮೈದಾನದಲ್ಲಿ 160 ರಿಂದ 170 ರನ್ ಸರಾಸರಿ ಸ್ಕೋರ್. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ದಿಟ್ಟ ಹೋರಾಟ ನೀಡಲೇಬೇಕು.
ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿರುವ ಪಪುವಾ ನ್ಯೂಗನಿಯಾ ಹಾಗೂ ಓಮನ್ ತಂಡ ಉತ್ತಮ ಹೋರಾಟ ನೀಡುವ ನಿರರೀಕ್ಷೆಯಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.