-ಕೋವಿಡ್ ಭೀತಿಯಿಂದ ಬಯೋ ಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಪಂದ್ಯಗಳು
-ವಿರಾಟ್ ದೂರದಿಂದಲೇ ಕೈ ಬೀಸುತ್ತಿರುವ ಫೊಟೋಸ್ ಹಂಚಿಕೊಂಡ ಅನುಷ್ಕಾ!
-ಕೊಹ್ಲಿ-ಅನುಷ್ಕಾ ಪ್ರೀತಿಗೆ ನೆಟ್ಟಿಗರು ಫುಲ್ ಫಿದಾ : ಕಮೆಂಟ್‌ಗಳ ಸುರಿಮಳೆ
ಯುಎಇ(ಅ. 17): 14ನೇ ಆವೃತ್ತಿಯ ಐಪಿಎಲ್‌ನಲ್ಲಿ(IPL) ಕೆಕೆಆರ್(KKR) ವಿರುದ್ಧ ಜಯಸಾಧಸಿ ಸಿಎಸ್‌ಕೆ(CSK) ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಭಾರತದಲ್ಲಿ ಆಯೋಜಿಸಲಾಗಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೋವಿಡ್ 19 (Covid 19) ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿತ್ತು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆಟಗಾರರು, ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಸದ್ಯ ಕ್ರೀಡೆಗಳು ಬಯೋಬಬಲ್ (Bio Bubble) ನಲ್ಲಿ ನಡೆಯುತ್ತಿದೆ. ಈ ಬಗ್ಗೆ ಕ್ಯಾಪ್ಟನ್ ವಿರಾಟ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡು ಬಯೋಬಬಲ್ ಒಳಗೆ ಇರುವ ಕಷ್ಟವನ್ನು ವಿವರಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.
ವಿರಾಟ್ ದೂರದಿಂದಲೇ ಕೈ ಬೀಸುತ್ತಿರುವ ಫೋಟೋಸ್ ಹಂಚಿಕೊಂಡ ಅನುಷ್ಕಾ
ಈಗ ವಿರಾಟ್ ಕೊಹ್ಲಿ (Virat Kohli) ಪತ್ನಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ(Anushka Sharma) ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿರುವ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿವೆ. ಕ್ವಾರಂಟೈನ್ ನಿಯಮಗಳ ಪ್ರಕಾರ ಅನುಷ್ಕಾ ಮತ್ತು ವಿರಾಟ್ ಪ್ರತ್ಯೇಕ ರೂಮ್‌ಗಳಲ್ಲಿಯೇ ಕಾಲ ಕಳೆಯಬೇಕಿದೆ. ಆದರೆ ಈ ಕ್ವಾರಂಟೈನ್ ನಿಯಮಗಳ ಹೊರತಾಗಿಯೂ ವಿರುಷ್ಕಾ (Virushka) ದಂಪತಿ ತಮ್ಮ ಪ್ರೀತಿಯನ್ನು ದೂರದಿಂದಲೇ ವ್ಯಕ್ತಪಡಿಸಿದ್ದಾರೆ. ನಿನ್ನೆ(ಅ. 16) ಅನುಷ್ಕಾ ತಮ್ಮ ಇನ್ಸ್ಟಾಗ್ರಾಮನಲ್ಲಿ ವಿರಾಟ್ ಕೊಹ್ಲಿ ದೂರದಿಂದಲೇ ಕೈ ಬೀಸುತ್ತಿರುವ ಫೋಟೋ ಹಂಚಿಕೊಂಡಿದ್ದು "ಬಯೋಬಬಲ್ ಜೀವನವು ಇನ್ನಷ್ಟು ಪ್ರೀತಿಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆʼ. ಈ ಫೋಟೋಗಳು ಈಗ ವೈರಲ್ (Viral) ಆಗಿದ್ದು ಕ್ರಿಕೆಟ್ ಆಟಗಾರರು ಮತ್ತು ಬಾಲಿವುಡ್ ನಟ-ನಟಿಯರು ಅನುಷ್ಕಾ ಪೋಸ್ಟ್‌ಗೆ ರಿಪ್ಲೈ ಮಾಡಿದ್ದಾರೆ.
Bio Bubble: ಫೋಟೋ ಮೂಲಕ ಬಯೋ ಬಬಲ್ ಕಷ್ಟ ವಿವರಿಸಿದ ವಿರಾಟ್ ಕೊಹ್ಲಿ
ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್‌ರಿಂದ (Ranveer Singh) ಹಿಡಿದು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Saniya Mirza) ಸೇರಿದಂತೆ ಹಲವರು, ಅನುಷ್ಕಾರ ರೋಮ್ಯಾಂಟಿಕ್ ಪೋಸ್ಟ್ ಮೇಲೆ ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸಕ್ರಿಯರಾಗಿರುವ ಚಹಲ್ (Yuzuvendra Chahal) ಕೂಡ ಪ್ರತಿಕ್ರಿಯಿಸಿದ್ದಾರೆ. ಅನುಷ್ಕಾ ತಮ್ಮ ಕೋಣೆಯ ಬಾಲ್ಕನಿಯಿಂದ ಫೋಟೋಗಳನ್ನು ಕ್ಲಿಕ್ಕಿಸಿದ್ದು, ವಿರಾಟ್ ತಮ್ಮ ಕೋಣೆಯ ಬಾಲ್ಕನಿಯಿಂದ ಕೈ ಬೀಸಿದ್ದಾರೆ. ವಿರಾಟ್‌ರ ಕ್ಯೂಟ್ ಫೋಟೋಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದು ಕಮೆಂಟ್‌ಗಳ ಸುರಿಮಳೆ ಮಾಡಿದ್ದಾರೆ.
ಕೋವಿಡ್ ಭೀತಿಯಿಂದ ಬಯೋ ಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಪಂದ್ಯಗಳು
ವಿರಾಟ್ ಕೊಹ್ಲಿ ಸದ್ಯ ಯುಎಇನಲ್ಲಿದ್ದು(UAE), ಮುಂಬರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಯುಎಇನಲ್ಲಿ ಐಪಿಎಲ್ ಆರಂಭವಾಗುವುದಕ್ಕಿಂತ ಮುನ್ನ ಇಂಗ್ಲೆಂಡ್ (England) ಪ್ರವಾಸದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್‌ನಲ್ಲಿ ದೀರ್ಘಕಾಲಿಕ ಟೆಸ್ಟ್ ಸರಣಿಯನ್ನಾಡಿ ಆ ಬಯೋ ಬಬಲ್‌ನಿಂದ ಯುಎಇಗೆ ತೆರಳಿ ಕ್ವಾರಂಟೈನ್ ಅವಧಿ ಮುಗಿಸಿ ಬಯೋ ಬಬಲ್ ಮುಗಿಸಿದ್ದು, ಇದಾದ ಬಳಿಕ ಐಪಿಎಲ್‌ಗಾಗಿ ಒಂದು ತಿಂಗಳ ಕಾಲ ಮತ್ತೆ ಬಯೋ ಬಬಲ್‌ನಲ್ಲಿದ್ದರು. ಇದಾದ ಬಳಿಕ ಟಿ20 ವಿಶ್ವಕಪ್ ಆಡಲು ಬಯೋ ಬಬಲ್ ಕೂಡಿಕೊಂಡಿದ್ದಾರೆ.
Good News: ಟೀಂ ಇಂಡಿಯಾ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ..!
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಓಮನ್‌ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದ್ದು, ಇದಾದ ಬಳಿಕ ಅಕ್ಟೋಬರ್ 23ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.