
ಓಮನ್(ಅ.17): ಟಿ20 ವಿಶ್ವಕಪ್ ಟೂರ್ನಿ(T20 World Cup) ಅದ್ಧೂರಿಯಾಗಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಓಮನ್(Oman) ಹಾಗೂ ಪಪುವಾ ನ್ಯೂಗಿನಿಯಾ(Papua New Guinea) ಮುಖಾಮುಖಿಯಾಗಿತ್ತು. ಈ ಹೋರಾಟದಲ್ಲಿ ಓಮನ್ 10 ವಿಕೆಟ್ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಓಮನ್ 2 ಅಂಕ ಸಂಪಾದಿಸಿದೆ.
IPL 2021 ಮುಗಿದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಗಂಗೂಲಿ!
ಮೊದಲು ಬ್ಯಾಟಿಂಗ್ ಮಾಡಿಗ ಪಪುವಾ ನ್ಯೂಗಿನಿಯಾ ದಿಟ್ಟ ಹೋರಾಟ ನೀಡಿದರೂ ಅಬ್ಬರಿಸಲು ಸಾಧ್ಯವಾಗಲಿಲ್ಲ. ನಾಯಕ ಅಸದ್ ವಾಲಾ ಹಾಫ್ ಸೆಂಚುರಿ ಸಿಡಿಸಿದರೆ ಇತರರಿಂದ ಉತ್ತಮ ಹೋರಾಟ ಸಾಧ್ಯವಾಗಿಲ್ಲ. ಟೋನಿ ಉರಾ ಹಾೂ ಲೆಗಾ ಸೈಕಾ ಡಕೌಟ್ ಆದರು.
ನಾಯಕ ಅಸದ್ ವಾಲಾ ದಿಟ್ಟ ಹೋರಾಟ ನೀಡಿದರು. ಚಾರ್ಲೆಸ್ ಅಮಿನಿ ಉತ್ತಮ ಸಾಥ್ ನೀಡಿದರು. ಚಾರ್ಲೆಸ್ 37 ರನ್ ಸಿಡಿಸಿ ಔಟಾದರು. ಇತ್ತ ಸೆಸೆ ಬುವಾ 13 ರನ್ ಸಿಡಿಸಿ ಔಟಾದರು. ಅಸದ್ ವಾಲಾ 56 ರನ್ ಸಿಡಿಸಿ ಔಟಾದರು. ಸಿಮೋನ್ ಅಟಾಯಿ ಸೇರಿದಂತೆ ಇತರರು ದಿಟ್ಟ ಹೋರಾಟ ನೀಡಲಿಲ್ಲ. ಹೀಗಾಗಿ ಪಪುವಾ ನ್ಯೂಗಿನಿಯಾ 9 ವಿಕೆಟ್ ನಷ್ಟಕ್ಕೆ 129 ರನ್ ಸಿಡಿಸಿತು.
2012ರ ಐಪಿಎಲ್ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!
130 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಓಮನ್ ತಂಡಕ್ಕೆ ಅಖಿಬ್ ಇಲ್ಯಾಸ್ ಹಾಗೂ ಜಿತೇಂದ್ರ ಸಿಂಗ್ ಉತ್ತಮ ಆರಂಭ ನೀಡಿದರು. ಇಲ್ಯಾಸ್ ಹಾಗೂ ಜಿತೇಂದ್ರ ಸಿಂಗ್ ಬ್ಯಾಟಿಂಗ್ ಪ್ರದರ್ಶನ ಓಮನ್ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತು. ಇಲ್ಯಾಸ್ ಹಾಗೂ ಜಿತೇಂದ್ರ ಸಿಂಗ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು.
ದಿಟ್ಟ ಹೋರಾಟದಿಂದ ಓಮನ್ 13.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ಸಾಧಿಸಿತು. ಆಖಿಬ್ ಇಲ್ಯಾಸ್ ಅಜೇಯ 50 ರನ್ ಹಾಗೂ ಜಿತೇಂದ್ರ ಸಿಂಗ್ ಅಜೇಯ 73 ರನ್ ಸಿಡಿಸಿದರು. 10 ವಿಕೆಟ್ ಗೆಲುವು ಸಾಧಿಸುವ ಮೂಲಕ ಓಮನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.