T20 World Cup: ಟೀಂ ಇಂಡಿಯಾ ಸೋಲಿನೊಂದಿಗೆ ಮೌಕಾ ಮೌಕಾ ಜಾಹೀರಾತಿಗೆ ತೆರೆ..!

By Suvarna News  |  First Published Oct 25, 2021, 6:50 PM IST

* ಟಿ0 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಮುಗ್ಗರಿಸಿದ ಭಾರತ

* ಮೌಕಾ ಮೌಕಾ ಜಾಹೀರಾತಿಗೆ ಕೊನೆಗೂ ಮುಕ್ತಿ?

* ಭಾರತ ವಿರುದ್ದ ಪಾಕ್‌ಗೆ 10 ವಿಕೆಟ್‌ಗಳ ಜಯ


ಬೆಂಗಳೂರು(ಅ.25): ಭಾರತ ಹಾಗೂ ಪಾಕಿಸ್ತಾನ (Ind vs Pak) ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿರುತ್ತದೆ. ಇದೇ ಸಂದರ್ಭದಲ್ಲಿ ಟೂರ್ನಿಯ ಅಧಿಕೃತ ಪ್ರಸಾರಕರಾಗಿರುವ ಸ್ಟಾರ್‌ ಸ್ಪೋರ್ಟ್ಸ್ (Star Sports) ಮೌಕಾ ಮೌಕಾ ಎನ್ನುವ ಜಾಹೀರಾತು ಪರಿಚಯಿಸಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. 

ಪ್ರತಿ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತದೆದುರು ಪಾಕಿಸ್ತಾನ ತಂಡವು ಸೋಲುತ್ತಲೇ ಬಂದಿತ್ತು. ಹೀಗಾಗಿ 2021ರ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾವಳಿಗಳು ಆರಂಭಕ್ಕೂ ಕೆಲ ದಿನಗಳ ಮುನ್ನ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಮೌಕಾ ಮೌಕಾ ಜಾಹೀರಾತುಗಳ (Mauka Mauka advertisement) ಸರಣಿಗಳನ್ನು ಮತ್ತೊಮ್ಮೆ ಪರಿಚಯಿಸಿತ್ತು. ಪ್ರತಿ ಮೌಕಾ ಮೌಕಾ ಜಾಹೀರಾತಿನಲ್ಲೂ ಪಾಕಿಸ್ತಾನದ ಅಭಿಮಾನಿಗಳನ್ನು ಕಾಲೆಳೆಯುವುದು ಸಹಜವಾಗಿತ್ತು. ತಿಳಿ ಹಾಸ್ಯಮಯವಾಗಿರುವ ಈ ಜಾಹೀರಾತಿನ ವಿರುದ್ದ ಈಗ ಕೆಲ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

Tap to resize

Latest Videos

ಹೌದು, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಎದುರು ಪಾಕಿಸ್ತಾನ ಕ್ರಿಕೆಟ್‌ ತಂಡವು 10 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡವು ಭಾರತದ ಎದುರು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. 

T20 World Cup; ಪಾಕ್ ವಿರುದ್ಧ ಸೋಲಿಗೆ ಮೊಹಮ್ಮದ್ ಶಮಿಗೆ ನಿಂದನೆ, ನೆರವಿಗೆ ನಿಂತ ಸೆಹ್ವಾಗ್!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾಗೆ (Team India) ಪಾಕ್‌ ಎಡಗೈ ವೇಗಿ ಶಾಹೀನ್ ಅಫ್ರಿದಿ ಆರಂಭದಲ್ಲೇ ಶಾಕ್‌ ನೀಡಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ಕೆ.ಎಲ್ ರಾಹುಲ್ (KL Rahul) ಅವರನ್ನು ಪೆವಿಲಿಯನ್ನಿಗಟ್ಟಿ ಪಾಕ್‌ಗೆ ಆರಂಭಿಕ ಮುನ್ನಡೆ ದಕ್ಕಿಸಿಕೊಟ್ಟರು. ಇದರ ಹೊರತಾಗಿಯೂ ನಾಯಕ ವಿರಾಟ್ ಕೊಹ್ಲಿ (Virat Kohli), ಹಾಗೂ ರಿಷಭ್‌ ಪಂತ್ (Rishabh Pant) ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡ 151 ರನ್‌ಗಳ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು (Pakistan Cricket Team) ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ನಗೆ ಬೀರಿತು. ವಿಕೆಟ್ ಕೀಪರ್‌ ಬ್ಯಾಟರ್‌ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಂ ಸಮಯೋಚಿತ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 

T20 World Cup: ಪಾಕ್ ಗೆದ್ದಿದ್ದಕ್ಕೆ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸೆಹ್ವಾಗ್

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ ತಂಡವು ಮೊದಲ ಬಾರಿಗೆ ಗೆಲುವು ದಾಖಲಿಸುತ್ತಿದ್ದಂತೆಯೇ ಪಾಕ್ ಕ್ರಿಕೆಟ್ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ರೋಚಕತೆ ಹೆಚ್ಚಿಸಲು ಮೌಕಾ ಮೌಕಾ ಜಾಹೀರಾತು 2015ರ ಏಕದಿನ ವಿಶ್ವಕಪ್‌ ವೇಳೆಯಿಂದ ಆರಂಭಿಸಲಾಗಿತ್ತು. ಆದರೆ ಇದೀಗ ವಿಶ್ವಕಪ್‌ನಲ್ಲಿ ಪಾಕ್ ಗೆಲುವು ಸಾಧಿಸುತ್ತಿದ್ದಂತೆ ಕೆಲವು ಅಭಿಮಾನಿಗಳು ಮೌಕಾ ಮೌಕಾ ಜಾಹೀರಾತನ್ನು ಕಾಲೆಳೆದಿದ್ದಾರೆ. 
 

No mauka mauka ads from next year pic.twitter.com/MI4Ip7zh9R

— Manya (@CSKian716)

Mauka Mauka actor's career when Pakistan wins the game against India pic.twitter.com/T5rF264Uum

— Sagar (@sagarcasm)

It's a humiliating defeat. From team selection to less preparation there are numerous reasons. But a stellar performance from our Pakistan team. Let's concentrate on the remaining matches.

Finally it's goodbye to mauka mauka shit ads. pic.twitter.com/XJe3AoWomX

— KARTHIK (@get2karthik)

Star Sports ad agency realising they won't be able to do again pic.twitter.com/nRfGlBsvFB

— Sameer Allana (@HitmanCricket)
click me!