
ಶಾರ್ಜಾ(ಅ.25): ತಾಲಿಬಾನ್ (Taliban) ಆಡಳಿತಕ್ಕೆ ಒಳಪಟ್ಟ ಬಳಿಕ ದೇಶ ವಿಷಮ ಪರಿಸ್ಥಿತಿಯಲ್ಲಿದ್ದರೂ ಕ್ರೀಡಾಂಗಣಕ್ಕೆ ಮರಳಿರುವ ಅಫ್ಘಾನಿಸ್ತಾನಕ್ಕೆ ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಸೂಪರ್-12 ಹಂತದ ಆರಂಭಿಕ ಪಂದ್ಯದಲ್ಲಿ ಸೋಮವಾರ ಸ್ಕಾಟ್ಲೆಂಡ್ ಎದುರಾಗಲಿದೆ.
ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ (Afghanistan Cricket Team) ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಆಫ್ಘನ್, ಪ್ರಧಾನ ಸುತ್ತಿನಲ್ಲೂ ಶುಭಾರಂಭ ಮಾಡುವ ಉತ್ಸಾಹದಲ್ಲಿದೆ. ಆಲ್ರೌಂಡರ್ ಮೊಹಮದ್ ನಬಿ, ತಾರಾ ಸ್ಪಿನ್ನರ್ ರಶೀದ್ ಖಾನ್‌ರನ್ನು ತಂಡ ಹೆಚ್ಚಾಗಿ ಅವಲಂಬಿಸಿದೆ. ಇನ್ನು, ಅರ್ಹತಾ ಸುತ್ತಿನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ (Bangladesh Cricket Team) ಶಾಕ್ ನೀಡಿದ್ದಲ್ಲದೇ, ಸತತ 3 ಪಂದ್ಯಗಳಲ್ಲಿ ಗೆದ್ದು ಪ್ರಧಾನ ಸುತ್ತು ಪ್ರವೇಶಿಸಿರುವ ಸ್ಕಾಟ್ಲೆಂಡ್ ಕ್ರಿಕೆಟ್ ತಂಡ (Scotland Cricket Team) ಆಫ್ಘನ್‌ಗೆ ಪ್ರಬಲ ಪೈಪೋಟಿ ನೀಡಲು ಕಾತರಿಸುತ್ತಿದೆ. ಆಲ್ರೌಂಡರ್ ಕ್ರಿಸ್ ಗ್ರೀವ್ಸ್, ನಾಯಕ ಕೈಲ್ ಕೋಟ್ಜಿ, ರಿಚಿ ಬೆರಿಂಗ್ಟನ್, ವೇಗಿ ಜೋಶ್ ಡೇವಿಯಂತಹ ಪ್ರತಿಭಾವಂತ ಆಟಗಾರರನ್ನು ಸ್ಕಾಟ್ಲೆಂಡ್ ಹೊಂದಿದೆ.
T20 World Cup ಸೋಲಿನ ಗಾಯದ ಮೇಲೆ ಬರೆ, ಮುಂದಿನ ಪಂದ್ಯಕ್ಕೆ ಈ ಸ್ಟಾರ್ ಆಟಗಾರ ಆಡೋದು ಡೌಟ್..!
ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವು ಬಾಂಗ್ಲಾದೇಶ ವಿರುದ್ದ 6 ರನ್‌ಗಳ ರೋಚಕ ಜಯ ಸಾಧಿಸಿತ್ತು. ಇದಾದ ಬಳಿಕ ಪಪುಪಾ ನ್ಯೂಗಿನಿ ಎದುರು 17 ರನ್‌ಗಳ ಗೆಲುವು ಹಾಗೂ ಓಮನ್ ವಿರುದ್ದ 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿದೆ. ಕೈಲ್ ಕೋಟ್ಜಿ ಪಡೆ ಹ್ಯಾಟ್ರಿಕ್ ಗೆಲುವು ಸಾಧಿಸಿ ಅತ್ಮವಿಶ್ವಾಸದಿಂದ ಬೀಗುತ್ತಿದ್ದು, ಆಫ್ಘಾನಿಸ್ತಾನಕ್ಕೆ ಶಾಕ್ ನೀಡಲು ಎದುರು ನೋಡುತ್ತಿದೆ.
ಇನ್ನು ಸಾಕಷ್ಟು ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಆಫ್ಘಾನಿಸ್ತಾನ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಹಜರುತ್ತುಲ್ಲಾ ಜಝೈ, ಮೊಹಮ್ಮದ್ ಶೆಹಜಾದ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬೀ ಅವರನ್ನು ಬ್ಯಾಟಿಂಗ್‌ನಲ್ಲಿ ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ರಶೀದ್ ಖಾನ್ (Rashid Khan), ಮುಜೀಬ್ ಉರ್ ರೆಹಮಾನ್ ಕಮಾಲ್ ಮಾಡಲು ಎದುರು ನೋಡುತ್ತಿದ್ದಾರೆ.
ಪಾಕ್ ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ, ರೋಹಿತ್ ಶರ್ಮಾರನ್ನು ಹೊರಗಾಗ್ಬೇಕಾ ಅನ್ನೋದಾ?
ಟಿ20 ಕ್ರಿಕೆಟ್‌ನಲ್ಲಿ (T20 Cricket) ಆಫ್ಘಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳು ಒಟ್ಟು 6 ಬಾರಿ ಮುಖಾಮುಖಿಯಾಗಿದ್ದು, ಆಫ್ಘಾನ್ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಅಂದರೆ ಆರು ಪಂದ್ಯಗಳಲ್ಲೂ ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ಗೆಲುವಿನ ನಗೆ ಬೀರಿದೆ.
ಸಂಭಾವ್ಯ ತಂಡ ಹೀಗಿವೆ ನೋಡಿ
ಆಫ್ಘಾನಿಸ್ತಾನ ಕ್ರಿಕೆಟ್ ತಂಡ: ಹಜರತ್ತುಲ್ಲಾ ಝಝೈ, ಮೊಹಮ್ಮದ್ ಶೆಹಜಾದ್ (ವಿಕೆಟ್ ಕೀಪರ್), ರೆಹಮತ್ತುಲ್ಲಾ ಗುರ್ಬಾಜ್, ನಜೀಬುಲ್ಲಾ ಜದ್ರಾನ್, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬೀ(ನಾಯಕ), ಗುಲ್ಬದ್ದೀನ್ ನೈಬ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಹಮೀದ್ ಹಸನ್.
ಸ್ಕಾಟ್ಲೆಂಡ್ ಕ್ರಿಕೆಟ್ ತಂಡ: ಜಾರ್ಜ್ ಮುನ್ಸೆ, ಕೈಲ್ ಕೋಟ್ಜಿ(ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರ್ರಿಂಗ್ಟನ್, ಕಾಲಂ ಮೆಕ್‌ಲಾಡ್, ಮಿಚೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಅಲಾಸ್ದೀರ್ ಇವಾನ್ಸ್, ಬ್ರಾಡ್ಲಿ ವೀಲ್
ಸ್ಥಳ: ಶಾರ್ಜಾ
ಪಂದ್ಯಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.