T20 ವಿಶ್ವಕಪ್ ವಿಶ್ವಕಪ್ ಬಹುಮಾನ ಮೊತ್ತ ಪ್ರಕಟಿಸಿದ ICC,ಗೆದ್ದ ತಂಡ ಭರ್ಜರಿ ಕ್ಯಾಶ್ ಪ್ರೈಜ್!

By Suvarna NewsFirst Published Oct 10, 2021, 8:19 PM IST
Highlights
  • ಐಪಿಎಲ್ 2021 ಟೂರ್ನಿ ಅಂತಿಮ ಘಟ್ಟ ತಲುಪಿದೆ
  • ಟಿ20 ವಿಶ್ವಕಪ್ ಟೂರ್ನಿ ಜ್ವರ ಆರಂಭಗೊಂಡಿದೆ
  • ಟಿ20 ವಿಶ್ವಕಪ್ ಟೂರ್ನಿ ಬಹುಮಾನ ಮೊತ್ತ ಪ್ರಕಟ
  • ಚಾಂಪಿಯನ್ ತಂಡಕ್ಕೆ 12 ಕೋಟಿ ರೂಪಾಯಿ ಬಹುಮಾನ

ದುಬೈ(ಅ.10): ಐಪಿಎಲ್ 2021(IPL 2021) ಟೂರ್ನಿ ಅಂತಿಮ ಘಟ್ಟ ತಲುಪಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್(T20 World Cup) ಟೂರ್ನಿ ಆರಂಭಗೊಳ್ಳುತ್ತಿದೆ. ಎಲ್ಲಾ ತಂಡಗಳು ಚುಟುಕು ಸಮರಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ. ಟಿ20 ವಿಶ್ವಕಪ್ ಟೂರ್ನಿ ಕೌಂಟ್‌ಡೌನ್ ಆರಂಭಗೊಳ್ಳುತ್ತಿದ್ದಂತೆ ICC ಟಿ20 ವಿಶ್ವಕಪ್ ಟೂರ್ನಿ ಬಹುಮಾನ ಮೊತ್ತ ಪ್ರಕಟಿಸಿದೆ.

T20 World Cup: ವೇಗಿ ಉಮ್ರಾನ್‌ ಮಲಿಕ್ ಟೀಂ ಇಂಡಿಯಾ ನೆಟ್ ಬೌಲರ್‌

ಟಿ20 ವಿಶ್ವಕಪ್ ಟೂರ್ನಿ ಚಾಂಪಿಯನ್(Champion) ತಂಡಕ್ಕೆ 12 ಕೋಟಿ ರೂಪಾಯಿ( $1.6 ಮಿಲಿಯನ್) ಬಹುಮಾನ ಮೊತ್ತ  ಸಿಗಲಿದೆ. ಇನ್ನು ರನ್ನರ್ ಅಪ್ ತಂಡಕ್ಕೆ 6 ಕೋಟಿ ರೂಪಾಯಿ($800,000) ಸಿಗಲಿದೆ. ಸೂಪರ್ 12 ಹಂತದಿಂದ ನಿರ್ಗಮಿಸುವ ತಂಡಕ್ಕೆ 52.50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಬಹುಮಾನ ಮೊತ್ತದ ಜೊತೆಗೆ DRS(ಅಂಪೈರ್ ಡಿಸಿಶನ್ ರಿವ್ಯೂವ್ ಸಿಸ್ಚಮ್) ಜಾರಿಯನ್ನು ಘೋಷಿಸಿದೆ. 20211ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಡಿಆರ್‌ಎಸ್ ನಿಯಮ ಜಾರಿ ಮಾಡಿತು. ಆದರೆ ಇದುವರೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಐಸಿಸಿ  DRS ಜಾರಿಗೊಳಿಸಿತು. 

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದರೆ ಪಾಕ್‌ಗೆ Blank cheque ಸಿಗುತ್ತೆ: ರಮೀಜ್ ರಾಜಾ!

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಡ್ರಿಂಗ್ಸ್ ಬ್ರೇಕ್ ಕೂಡ ಜಾರಿ ಮಾಡುತ್ತಿದೆ. 150 ಸೆಕೆಂಡ್‌ಗಳ ಡ್ರಿಂಕ್ಸ್ ಬ್ರೇಕ್ ಈ ವಿಶ್ವಕಪ್ ಟೂರ್ನಿಯಿಂದ ಜಾರಿಗೆ ಬರುತ್ತಿದೆ ಎಂದು ಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಯುನೈಟ್ ಅರಬ್ ಎಮಿರೈಟ್ಸ್(UAE)ಹಾಗೂ ಓಮನ್ ಜಂಟಿಯಾಗಿ ಆಯೋಜಿಸುತ್ತಿದೆ. ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಓಮನ್ ಹಾಗೂ ಪಪುವಾ ನ್ಯೂಗಿನಿಯಾ ತಂಡ ಮುಖಾಮುಖಿಯಾಗುತ್ತಿದೆ.

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಅಗ್ನಿ ಪರೀಕ್ಷೆ

ಎರಡು ಸೆಮಿಫೈನಲ್ ಪಂದ್ಯಗಳು ನವೆಂಬರ್ 10 ಹಾಗೂ 11 ರಂದು ಆಯೋಜಿಸಲಾಗಿದೆ. ಇನ್ನು ಫೈನಲ್ ಪಂದ್ಯವನ್ನು ನವೆಂಬರ್ 14 ರಂದು ಆಯೋಜಿಸಲಾಗಿದೆ. 

T20 World Cup ಟೂರ್ನಿ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ICC

ಟಿ20 ವಿಶ್ವಕಪ್ ಟೂರ್ನಿ ಜೊತೆಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಬದ್ಧವೈರಿಗಳ ಕದನಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಭಾರತ ವಿರುದ್ಧ ಪಂದ್ಯ ಗೆದ್ದರೆ ಭರ್ಜರಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಈಗಲೇ ಚೆಕ್ ರೆಡಿಯಾಗಿದೆ ಎಂದು ಪಿಸಿಬಿ ಚೇರ್ಮೆನ್ ರಮೀಜ್ ರಾಜಾ ಹೇಳಿದ್ದಾರೆ.
 

click me!