IPL 2021; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ CSK, ರೈನಾಗಿಲ್ಲ ಚಾನ್ಸ್!

By Suvarna NewsFirst Published Oct 10, 2021, 7:05 PM IST
Highlights
  • ಐಪಿಎಲ್ 2021 ಮೊದಲ ಕ್ವಾಲಿಫೈಯರ್ ಪಂದ್ಯ
  • ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ
  • ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ
  • ಗೆದ್ದ ತಂಡ ನೇರವಾಗಿ ಫೈನಲ್ ಪ್ರೇವಶ, ಸೋತ ತಂಡಕ್ಕೆ ಮತ್ತೊಂದು ಅವಕಾಶ

ದುಬೈ(ಅ.10):  IPL 2021ರ ಪ್ಲೇಆಫ್(Playoff) ಪಂದ್ಯಗಳು ಇಂದಿನಿಂದ ಆರಂಭಗೊಂಡಿದೆ. ಮೊದಲ ಕ್ವಾಲಿಫೈಯರ್(Qualifier 1) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC)ಮುಖಾಮುಖಿಯಾಗುತ್ತಿದೆ. ಫೈನಲ್ ಪ್ರವೇಶಕ್ಕಾಗಿ ನಡೆಯುವ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಸ್(Toss) ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಪಂದ್ಯದಲ್ಲಿ ಚೇಸಿಂಗ್ ಮಾಡಿದೆ. ಈ ಐದರಲ್ಲೂ ಚೆನ್ನೈ ಗೆಲುವು ದಾಖಲಿಸಿದೆ. ಚೆನ್ನೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಈ ಮಹತ್ವದ ಪಂದ್ಯದಲ್ಲೂ ಸುರೇಶ್ ರೈನಾಗೆ ಅವಕಾಶ ಸಿಕ್ಕಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ರಿಪಾಲ್ ಪಟೇಲ್ ಬದಲು ಟಾಮ್ ಕುರನ್‌ಗೆ ಸ್ಥಾನ ನೀಡಲಾಗಿದೆ. 

ಫೈನಲ್ ಪ್ರವೇಶಕ್ಕಾಗಿ ನಡೆಯುತ್ತಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಫೈನಲ್ ಪ್ರವೇಶಕ್ಕೆ ಮತ್ತೊಂದು ಅವಕಾಶವಿದೆ. 2ನೇ ಕ್ವಾಲಿಫೈಯರ್ ಪಂದ್ಯದ ಮೂಲಕ ಮತ್ತೆ ಫೈನಲ್ ಪ್ರವೇಶಿಸಲು ಸಾಧ್ಯವಿದೆ. 

IPL 2021 ನಾಯಕ ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಸಿಎಸ್‌ಕೆ..!

ಡೆಲ್ಲಿ ಕ್ಯಾಪಿಟಲ್ಸ್(Delhi capitals) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮುಖಾಮುಖಿಯಲ್ಲಿ ಧೋನಿ ಸೈನ್ಯ ಮೈಲುಗೈ ಸಾಧಿಸಿದೆ . 22 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದೆ. ಇದರಲ್ಲಿ 13 ಬಾರಿ ಗೆಲುವು ಸಾಧಿಸಿದೆ. ಆದರೆ ಅಕ್ಟೋಬರ್ 4 ರಂದು ನಡೆದ 50ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ಗೆಲುವು ಕಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆತ್ಮವಿಶ್ವಾಸಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಾಕ್ ನೀಡಿತ್ತು. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಆರ್‌ಸಿಬಿ ಗೆಲುವು ದಾಖಲಿಸಿತ್ತು. ಈ ಸೋಲಿನಿಂದ ಹೊರಬರಲು ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ತಯಾರಿ ನಡೆಸಿದೆ.

IPL 2021 ಹೀಗಿತ್ತು ನೋಡಿ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ವರೆಗಿನ ಹಾದಿ..!

ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದ ಅಂತಿಮ 3 ಲೀಗ್ ಪಂದ್ಯದಲ್ಲಿ ಹ್ಯಾಟ್ರಿಕ್ ಸೋಲು ಕಂಡಿದೆ. ದಿಟ್ಟ ಹೋರಾಟ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್ ಪ್ರೇವಶಿಸಿದ ಚೆನ್ನೈ ಸೂಪರ್ ಕಿಂಗ್ಸ್, ಅಂತಿಮ ಹಂತದಲ್ಲಿ ಸತತ ಸೋಲಿನ ಕಹಿ ಅನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೋಲಿನ ಸುಳಿಯಿಂದ ಹೊರಬರಬೇಕಿದೆ. 

ಜಿದ್ದಾಜಿದ್ದಿನ ಹೋರಾಟಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದೆ. ಪ್ಲೇ ಆಫ್ ಸುತ್ತಿನಲ್ಲಿ ತಂಡವನ್ನು ಯಶಸ್ವಿಯಾಗಿ ನಿಭಾಯಿಸುವ ಕಲೆ ಎಂ.ಎಸ್.ಧೋನಿಗೆ ಕರಗತವಾಗಿದೆ. ಈನಿಟ್ಟಿನಲ್ಲಿ ನೋಡಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಅನುಭವ ಇಲ್ಲ. ಆದರೆ ಉಭಯ ತಂಡಗಳ ಸಾಮರ್ಥ್ಯದಲ್ಲಿ ಸಮಬಲವಾಗಿದೆ.

IPL 2021 ಹೀಗಿತ್ತು ನೋಡಿ ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇ ಆಫ್‌ವರೆಗಿನ ಹಾದಿ..!

IPL 2021 ಟೂರ್ನಿ ಭಾರತದಲ್ಲಿ ಆರಂಭಗೊಂಡು ಕೊರೋನಾ(Coronavirus) ಕಾರಣ ದಿಢೀರ್ ಸ್ಥಗಿತಗೊಂಡಿತ್ತು. ಬಳಿಕ ದುಬೈನಲ್ಲಿ ಮುಂದುವರಿಸಲಾಯಿತು. ಇದೀಗ ಹಲವು ಅಡೆತಡೆಗಳನ್ನು ಎದುರಿಸಿದ ಐಪಿಎಲ್ 2021ರ ಅಂತಿಮ ಘಟ್ಟ ತಲುಪಿದೆ. ಪ್ಲೇಆಫ್ ಪಂದ್ಯಗಳು ಆರಂಭಗೊಂಡಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡ ಯಾವುದು ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಚೊಚ್ಚಲ ಭಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶಗಳಿವೆ. ಹೀಗಾಗಿ ಈ ಬಾರಿಯ ಪ್ಲೇ ಆಫ್ ಹೋರಾಟ ಅತ್ಯಂತ ರೋಚಕವಾಗಿದೆ.
 

click me!