ಮಹಿಳಾ ಟಿ20 ವಿಶ್ವಕಪ್: ಇಂದು ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ ಫೈನಲ್

By Kannadaprabha NewsFirst Published Oct 20, 2024, 9:57 AM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿಂದು ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿವೆ. 

ನ್ಯೂಜಿಲೆಂಡ್ 2000ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಆದರೆ ಈಗಿನ ತಂಡದಲ್ಲಿರುವ ಯಾವ ಆಟಗಾರ್ತಿಯರೂ ಆ ಐತಿಹಾಸಿಕ ಗೆಲುವು ಸಾಧಿಸಿದ ತಂಡದಲ್ಲಿ ಇರಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ಯಾವುದೇ ಮಾದರಿಯಲ್ಲಿ ಈ ವರೆಗೂ ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳಲು ಕಾತರಿಸುತ್ತಿದೆ.

Latest Videos

ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ಸತತ 10 ಟಿ20 ಪಂದ್ಯಗಳನ್ನು ಸೋತಿತ್ತು. ಆದರೆ ಸೋಫಿ ಡಿವೈನ್ ನೇತೃತ್ವದ ತಂಡ ವಿಶ್ವಕಪ್‌ನಲ್ಲಿ ಅಮೋಘ ಲಯ ಪ್ರದರ್ಶಿಸಿದ್ದು, ಫೈನಲ್ ನಲ್ಲೂ ಉತ್ತಮ ಆಟವಾಡಲು ಉತುಕಗೊಂಡಿದೆ. ಹಿರಿಯ ಆಟಗಾರ್ತಿ ಸೂಝಿ ಬೇಟ್ಸ್ ತಾರಾ ಆಲ್ರೌಂಡರ್ ಅಮೆಲಿಯಾ ಕೆರ್ರ್ ತಂಡ ಫೈನಲ್‌ ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್: ಪುಣೇರಿ ಪಲ್ಟಾನ್, ತಮಿಳ್ ತಲೈವಾಸ್‌ ಶುಭಾರಂಭ

ಮತ್ತೊಂದೆಡೆ ದಕ್ಷಿಣ ಆಫ್ರಿಕಾ, 2023ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲಿನ ಕಹಿಯನ್ನು ಮರೆಯಲು ಹಪಹಪಿಸುತ್ತಿದೆ. ಸೆಮೀಸ್‌ನಲ್ಲಿ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದ.ಆಫ್ರಿಕಾಕ್ಕೆ ನಾಯಕಿ ಲಾರಾ ವೂಲ್ಫಾರ್ಟ್, ತಜಿನ್ ಬ್ರಿಟ್ಸ್, ಸುನೆ ಲುಸ್, ಅನ್ನೆಕೆ ಬಾಷ್, ಮಾರಿಯಾನೆ ಕಾಪ್ ಮೊಗ್ಗುಲುಲೆಕೊ ಎಂಲಾಬಾರಂತಹ ಬಲಿಷ್ಠ ಆಟಗಾರ್ತಿಯರ ಬಲವಿದೆ. ಎರಡೂ ತಂಡಗಳು ಸಂಘಟಿತ ಹೋರಾ ಟದ ಫಲವಾಗಿ ಫೈನಲ್‌ವರೆಗೂ ಸಾಗಿ ಬಂದಿದ್ದು, ಪ್ರಶಸ್ತಿ ಸುತ್ತಿನಲ್ಲೂ ಪ್ರಾಬಲ್ಯ ಮೆರೆಯಲು ಕಾಯುತ್ತಿವೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್

ಕರ್ನಾಟಕ-ಕೇರಳ ರಣಜಿ ಪಂದ್ಯಕ್ಕೆ ಮಳೆ ಕಾಟ

ಬೆಂಗಳೂರು: ಕರ್ನಾಟಕ-ಕೇರಳ ನಡುವಿನ ರಣಜಿ ಟ್ರೋಫಿ ಎಲೈಟ್‌ ‘ಸಿ’ ಗುಂಪಿನ ಪಂದ್ಯಕ್ಕೆ ಮಳೆ ಕಾಟ ಮುಂದುವರಿದಿದೆ. 2ನೇ ದಿನವಾದ ಶನಿವಾರ ಕೇವಲ 27 ಓವರ್‌ಗಳ ಆಟವಷ್ಟೇ ನಡೆಸಲು ಸಾಧ್ಯವಾಯಿತು. ಮೊದಲ ದಿನ ಕೇವಲ 23 ಓವರ್‌ಗಳ ಆಟ ನಡೆದಿತ್ತು. ವಿಕೆಟ್‌ ನಷ್ಟವಿಲ್ಲದೆ 88 ರನ್‌ ಗಳಿಸಿದ್ದ ಕೇರಳ, 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 161 ರನ್ ಕಲೆಹಾಕಿತು. 

ರೋಹನ್‌ ಕುಣ್ಣುಮ್ಮಾಲ್‌ 63 ರನ್‌ ಗಳಿಸಿದರೆ, ವತ್ಸಲ್‌ ಗೋವಿಂದ್‌ 31 ರನ್‌ ಗಳಿಸಿ ಔಟಾದರು. ಈ ಬಾರಿ ಕೇರಳ ಪರ ಆಡುತ್ತಿರುವ ತಮಿಳುನಾಡಿನ ಬಾಬಾ ಅಪರಾಜಿತ್‌ 19 ರನ್‌ ಗಳಿಸಿದರು. ನಾಯಕ ಸಚಿನ್‌ ಬೇಬಿ ಔಟಾಗದೆ 23, ಸಂಜು ಸ್ಯಾಮ್ಸನ್‌ ಔಟಾಗದೆ 15 ರನ್‌ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ರಾಜ್ಯದ ಪರ ಕೌಶಿಕ್‌, ವೈಶಾಖ್‌ ಹಾಗೂ ಶ್ರೇಯಸ್‌ ಗೋಪಾಲ್‌ ತಲಾ 1 ವಿಕೆಟ್‌ ಕಿತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್!

ಉದಯೋನ್ಮುಖರ ಏಷ್ಯಾ ಕಪ್ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ 7 ರನ್ ಗೆಲುವು

ಅಲ್ ಅಮೆರತ್ (ಒಮಾನ್): ಏಷ್ಯಾ ಕ್ರಿಕೆಟ್ ಸಮಿತಿ (ಎಸಿಸಿ) ಆಯೋಜಿಸುವ ಉದಯೋನ್ಮುಖರ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ತಿಲಕ್ ವರ್ಮಾ ನೇತೃತ್ವದ ತಂಡ ಶನಿವಾರ ನಡೆದ ಪಾಕಿ ಸ್ತಾನ ವಿರುದ್ಧದ ಪಂದ್ಯದಲ್ಲಿ 7 ರನ್‌ಗಳ ರೋಚಕ ಗೆಲುವು ಸಾಧಿಸಿತು. 

ಮೊದಲು ಬ್ಯಾಟ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ತಿಲಕ್ 44, ಪ್ರಬ್‌ಸಿಮ್ರನ್ 36, ಅಭಿಷೇಕ್ ಶರ್ಮಾ 35 ರನ್ ಗಳಿಸಿದರು. ಕಠಿಣ ಗುರಿ ಬೆನ್ನ ತಿದ ಪಾಕಿಸ್ತಾನ, 20 ಓವರಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಅರಾಫತ್ ಮಿನ್ಸಾಸ್ 41, ಯಾಸಿರ್ ಖಾನ್ 33 ಹಾಗೂ ಕೊನೆಯಲ್ಲಿ ಅಬ್ದುಲ್ ಸಮದ್ 25 ರನ್ ಗಳಿಸಿ ನಡೆಸಿದ ಹೋರಾಟ ಫಲ ನೀಡ ಲಿಲ್ಲ. ಸೋಮವಾರ ಭಾರತಕ್ಕೆ ಯುಎಇ ಎದುರಾಗಲಿದೆ.

click me!